ಶ್ರಿ ಹರಿಯೇ ನಿನ್ನುಪಕೃತಿಯು ಮರೆಯದಂತಿರಿಸೆಮ್ಮ
ಉರಗಾಧಿಶಯನಾ ಕೃಷ್ಣಾ ದ್ವಿಜರಾಜಗಮನಾ
ಕಾಳಿಯ ದಮನಾ ಭುವನತ್ರಯಾಕ್ರಮಣ
ಪದ್ಮಾಲಯಾ ರಮಣ 1
ಧನದಮಾತಿರಲಿ ಗೋಧನದ ಮಾತಿರಲಿ
ಭೂ ಧನದ ಮಾತಿರಲಿ ಶೌರೀ
ಧನವೆಲ್ಲವೂ ಕರ್ಮವನು ಬೆನ್ಹಿಡಿದು
ಬಹದೆನುತಾಡುವರೊ ಮುರಾರಿ
ತನುವು ನಿನ್ನಯ ಸೇವೆಯನು ಮಾಡುತಿರಲಿ ಕಂಸಾರಿ
ಮನವು ನಿನ್ನಯರೂಪವನು ನೆನೆಯುತಿರಲಿ ದುರಿತಾರಿ
ಈ ಕೃಪೆಯಭೂರೀ ದುರ್ಜನವಿದಾರೀ
ಸುಜನೋಪಕಾರೀ ಗಿರಿನಾಥ ಧಾರೀ
ಪಾಪಹಾರಿ ದಿತಿಜಾರಿ ನಿರ್ವಿಕಾರಿ ಉದಾರಿ 2
ನಾಕದೊಳಗಿರಲಿ ಭೂಲೋಕದೊಳಗಿರಲಿ
ಅಧೋಲೋಕದೊಳಗಿರಲಿ ನಾನೂ
ಶ್ರೀಕಾಂತ ನಿನಗೆ ಬೇಕಾದವನೆನುತ್ತ
ಸಾಕಬೇಕೆನ್ನ ನೀನೂ ಭಕ್ತಜನಕಾಮಧೇನು
ಹೇಳಬೇಕಾದುದಿನ್ನೇನು 3
ಬಿದ್ದಿರುವೆನೈ ರಜೋಗುಣದಿ
ಒದ್ಯಾಡುತಿಹೆನೊ ಸಂಕಟದಿ
ಇದ್ದು ಫಲವೇನೊ ಈ ಭವದಿ
ಉದ್ಧರಿಸು ಕೃಪಾಜಲಧಿ 4
ಬದ್ಧನಾನಯ್ಯ ಈ ಜಗದಿ
ಶುದ್ಧಬುದ್ಧಿಯ ನೀಯೊ ಮುದದಿ
ಕೃದ್ಧನಾಗದಿರೆನ್ನ ದುಷ್ಕøತದಿ
ಎದ್ದು ಬಾರೆನ್ನಡಿಗೆ ದಯದಿ
ಶ್ರೀ ತಂದೆಮುದ್ದುಮೋಹನ್ನವಿಠಲ ಭಾಗ್ಯನಿಧಿ
**********