Audio by Mrs. Nandini Sripad
ರಚನೆ : ಶ್ರೀ ಜಗನ್ನಾಥ ದಾಸರು
for saahitya click ಹರಿಕಥಾಮೃತಸಾರ ಸಂಧಿ 1 to 32
ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ
ಬೃಹತ್ತಾರತಮ್ಯ ಸಂಧಿ 23 ರಾಗ - ಮುಖಾರಿ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
ಹರಿ ಸಿರಿ ವಿರಂಚೀರ ಮುಖ ನಿರ್ಜನರ ಆವೇಶಾವತಾರಗಳ
ಸ್ಮರಿಸು ಗುಣಗಳ ಸರ್ವ ಕಾಲದಿ ಭಕ್ತಿ ಪೂರ್ವಕದಿ||
ಮೀನ ಕೂರ್ಮ ಕ್ರೋಡ ನರಹರಿ ಮಾಣವಕ ಭೃಗುರಾಮ ದಶರಥ ಸೂನು
ಯಾದವ ಬುದ್ಧ ಕಲ್ಕೀ ಕಪಿಲ ವೈಕುಂಠ
ಶ್ರೀನಿವಾಸ ವ್ಯಾಸ ಋಷಭ ಹಯಾನನಾ ನಾರಾಯಣೀ ಹಂಸ ಅನಿರುದ್ಧ
ತ್ರಿವಿಕ್ರಮ ಶ್ರೀಧರ ಹೃಷೀಕೇಶ||1||
ಹರಿಯು ನಾರಾಯಣನು ಕೃಷ್ಣ ಅಸುರ ಕುಲಾಂತಕ ಸೂರ್ಯ ಸಮಪ್ರಭ
ಕರೆಸುವನು ನಿರ್ದುಷ್ಟ ಸುಖ ಪರಿಪೂರ್ಣ ತಾನೆಂದು
ಸರ್ವದೇವೋತ್ತಮನು ಸರ್ವಗ ಪರಮ ಪುರುಷ ಪುರಾತನ
ಜರಾಮರಣ ವರ್ಜಿತ ವಾಸುದೇವಾದಿ ಅಮಿತ ರೂಪಾತ್ಮ||2||
ಈ ನಳಿನಭವ ಜನನಿ ಲಕ್ಷ್ಮೀ ಜ್ಞಾನ ಬಲ ಭಕ್ತಾದಿ ಗುಣ ಸಂಪೂರ್ಣಳು ಎನಿಪಳು
ಸರ್ವ ಕಾಲದಿ ಹರಿ ಕೃಪಾ ಬಲದಿ
ಹೀನಳು ಎನಿಪಳು ಅನಂತ ಗುಣದಿ ಪುರಾಣ ಪುರುಷಗೆ
ಪ್ರಕೃತಿಗಿನ್ನು ಸಮಾನರು ಎನಿಸುವರಿಲ್ಲ ಮುಕ್ತಾಮುಕ್ತ ಸುರರೊಳಗೆ||3||
ಗುಣಗಳ ತ್ರಯಮಾನಿ ಶ್ರೀ ಕುಂಭಿಣಿ ಮಹಾ ದುರ್ಗ ಅಂಭ್ರಣೀ ರುಗ್ಮಿಣಿಯು
ಸತ್ಯಾಶಾಂತಿಕೃತಿ ಜಯ ಮಾಯ ಮಹಲಕುಮಿ ಜನಕಜಾಕಮಲ ಆಲಯಾ
ದಕ್ಷಿಣೆ ಸುಪದ್ಮಾ ತ್ರಿಲೋಕ ಈಶ್ವರಿ
ಅಣು ಮಹತ್ತಿನೊಳಿದ್ದು ಉಪಮಾರಹಿತಳು ಎನಿಸುವಳು||4||
ಘೋಟಕಾಸ್ಯನ ಮಡದಿಗಿಂತಲಿ ಹಾಟಕ ಉದರಪವನರು ಈರ್ವರು
ಕೋಟಿ ಗುಣದಿಂದ ಅಧಮರು ಎನಿಪರು ಆವಕಾಲದಲಿ
ಖೇಟಪತಿ ಶೇಷ ಅಮರೇಂದ್ರರ ಪಾಟಿಮಾಡದೆ
ಶ್ರೀಶನ ಕೃಪಾ ನೋಟದಿಂದಲಿ ಸರ್ವರೊಳು ವ್ಯಾಪಾರ ಮಾಡುವರು||5||
ಪುರುಷ ಬ್ರಹ್ಮ ವಿರಿಂಚಿ ಮಹಾನ್ ಮರುತ ಮುಖ್ಯಪ್ರಾಣ ಧೃತಿ ಸ್ಮೃತಿ
ಗುರುವರ ಮಹಾಧ್ಯಾತ ಬಲ ವಿಜ್ಞಾತ ವಿಖ್ಯಾತ ಗರಳಭುಗ್
ಭವರೋಗ ಭೇಷಜ ಸ್ವರವರಣ ವೇದಸ್ಥ ಜೀವೇಶ್ವರ
ವಿಭೀಷಣ ವಿಶ್ವ ಚೇಷ್ಟಕ ವೀತಭಯ ಭೀಮ||6||
ಅನಿಲಸ್ಥಿತಿ ವೈರಾಗ್ಯ ನಿಧಿ ರೋಚನ ವಿಮುಕ್ತಿಗಾನಂದ ದಶಮತಿ
ಅನಿಮಿಶೇಷ ಅನಿದ್ರ ಶುಚಿ ಸತ್ವಾತ್ಮಕ ಶರೀರ
ಅಣು ಮಹದ್ರೂಪಾತ್ಮಕ ಅಮೃತ ಹನುಮದಾದಿ ಅವತಾರ
ಪದ್ಮಾಸನ ಪದವಿ ಸಂಪ್ರಾಪ್ತ ಪರಿಸರಾಖಣ ಆಶ್ಮಸಮ||7||
ಮಾತರಿಶ್ವ ಬ್ರಹ್ಮರು ಜಗನ್ಮಾತೆಗೆ ಅಧಮ ಅಧೀನರೆನಿಪರು
ಶ್ರೀ ತರುಣಿ ವಲ್ಲಭನು ಈರ್ವರೊಳು ಆವ ಕಾಲದಲಿ
ನೀತ ಭಕ್ತಿ ಜ್ಞಾನ ಬಲ ರೂಪ ಅತಿಶಯದಿಂದಿದ್ದು
ಚೇತನಾಚೇತನಗಳೊಳು ವ್ಯಾಪ್ತರೆನಿಪರು ತತ್ತದಾಹ್ವಯದಿ||8||
ಸರಸ್ವತೀ ವೇದ ಆತ್ಮಿಕಾ ಭುಜಿ ನರಹರೀ ಗುರುಭಕ್ತಿ ಬ್ರಾಹ್ಮೀ
ಪರಮ ಸುಖ ಬಲ ಪೂರ್ಣೆ ಶ್ರದ್ಧಾ ಪ್ರೀತಿ ಗಾಯತ್ರೀ
ಗರುಡ ಶೇಷರ ಜನನಿ ಶ್ರೀ ಸಂಕರುಷಣನ ಜಯ ತನುಜೆ
ವಾಣೀ ಕರಣ ನಿಯಾಮಕೆ ಚತುರ್ದಶ ಭುವನ ಸನ್ಮಾನ್ಯೇ||9||
ಕಾಳಿಕಾಶಿಜೆ ವಿಪ್ರಜೆ ಪಾಂಚಾಲಿ ಶಿವಕನ್ಯ ಇಂದ್ರಸೇನಾ
ಕಾಲಮಾನೀ ಚಂದ್ರದ್ಯುಸಭಾ ನಾಮ ಭಾರತಿಗೆ
ಘಾಳಿಬ್ರಹ್ಮರ ಯುವತಿಯರು ಏಳೇಳು ಐವತ್ತೊಂದು ಗುಣದಿಂ ಕೀಳರೆನಿಪರು
ತಮ್ಮ ಪತಿಗಳಿಂದಲಿ ಆವಾಗ||10||
ಹರಿ ಸಮೀರ ಆವೇಶ ನರ ಸಂಕರುಷಣ ಆವೇಶ ಯುತ ಲಕ್ಷ್ಮಣ
ಪರಮ ಪುರುಷನ ಶುಕ್ಲ ಕೇಶ ಆವೇಶ ಬಲರಾಮ
ಹರ ಸದಾಶಿವ ತಪಾಹಂಕೃತು ಮೃತ ಯುಕ್ತ ಶುಕ ಊರ್ಧ್ವಾಪಟು
ತತ್ಪುರುಷ ಜೈಗೀಶೌರ್ವ ದ್ರೌಣೀ ವ್ಯಾಧ ದೂರ್ವಾಸ||11||
ಗರುಡ ಶೇಷ ಶಶಿ ಅಂಕದಳ ಶೇಖರರು ತಮ್ಮೊಳು ಸಮರು
ಭಾರತಿ ಸರಸಿಜಾಸನ ಪತ್ನಿಗೆ ಅಧಮರು ನೂರು ಗುಣದಿಂದ
ಹರಿ ಮಡದಿ ಜಾಂಬವತಿಯೊಳು ಶ್ರೀ ತರುಣಿಯ ಆವೇಶವಿಹುದು ಎಂದಿಗೂ
ಕೊರತೆಯೆನಿಪರು ಗರುಡ ಶೇಷರಿಗೆ ಐವರು ಐದುಗುಣ||12||
ನೀಲಭದ್ರಾ ಮಿತ್ರವಿಂದಾ ಮೇಲೆನಿಪ ಕಾಳಿಂದಿ ಲಕ್ಷ್ಮಣ
ಬಾಲೆಯರಿಗಿಂದ ಅಧಮ ವಾರುಣಿ ಸೌಪರಣಿ ಗಿರಿಜಾ
ಶ್ರೀ ಲಕುಮಿಯುತ ರೇವತೀ ಶ್ರೀ ಮೂಲ ರೂಪದಿ ಪೇಯಳು ಎನಿಪಳು
ಶೈಲಜಾದ್ಯರು ದಶಗುಣ ಅಧಮ ತಮ್ಮ ಪತಿಗಳಿಗೆ||13||
ನರಹರಿ ಈರ ಆವೇಶ ಸಂಯುತ ನರಪುರಂದರಗಾಧಿ ಕುಶ
ಮಂದರದ್ಯುಮ್ನ ವಿಕುಕ್ಷಿ ವಾಲೀ ಇಂದ್ರನ ಅವತಾರ
ಭರತ ಬ್ರಹ್ಮಾವಿಷ್ಟ ಸಾಂಬ ಸುದರ್ಶನ ಪ್ರದ್ಯುಮ್ನ
ಸನಕಾದ್ಯರೊಳಗಿಪ್ಪ ಸನತ್ಕುಮಾರನು ಷನ್ಮುಕನು ಕಾಮ||14||
ಈರೈದು ಗುಣ ಕಡಿಮೆ ಪಾರ್ವತಿ ವಾರುಣೀಯರಿಗೆ ಇಂದ್ರ ಕಾಮ
ಶರೀರಮಾನಿ ಪ್ರಾಣ ದಶ ಗುಣ ಅವರ ಶಕ್ರನಿಗೆ
ಮಾರಜಾ ರತಿ ದಕ್ಷ ಗುರುವೃತ್ತ ಅರಿ ಜಾಯಾ ಶಚಿ ಸ್ವಯಂಭುವರು
ಆರು ಜನ ಸಮ ಪ್ರಾಣಗೆ ಅವರರು ಹತ್ತು ಗುಣದಿಂದ||15||
ಕಾಮ ಪುತ್ರ ಅನಿರುದ್ಧ ಸೀತಾರಾಮನ ಅನುಜ ಶತ್ರುಹನ ಬಲರಾಮನನುಜ
ಪೌತ್ರ ಅನಿರುದ್ಧನೊಳಗೆ ಅನಿರುದ್ಧ
ಕಾಮ ಭಾರ್ಯಾ ರುಗ್ಮವತಿ ಸನ್ನ್ನಾಮ ಲಕ್ಷ್ಮಣಳು ಎನಿಸುವಳು
ಪೌಲೋಮಿ ಚಿತ್ರಾಂಗದೆಯು ತಾರಾ ಎರಡು ಪೆಸರುಗಳು||16||
ತಾರ ನಾಮಕ ತ್ರೈತೆಯೊಳು ಸೀತಾ ರಮಣನ ಆರಾಧಿಸಿದನು
ಸಮೀರಯುಕ್ತ ಉದ್ಧವನು ಕೃಷ್ಣಗೆ ಪ್ರೀಯನೆನಿಸಿದನು
ವಾರಿಜಾಸನ ಯುಕ್ತ ದ್ರೋಣನು ಮೂರಿಳೆಯೊಳು ಬೃಹಸ್ಪತಿಗೆ ಅವತಾರವೆಂಬರು
ಮಹಾಭಾರತ ತಾತ್ಪರ್ಯದೊಳಗೆ||17||
ಮನು ಮುಖಾದ್ಯರಿಗಿಂತ ಪ್ರವಹಾ ಗುಣದಿ ಪಂಚಕ ನೀಚನೆನಿಸುವ
ಿನ ಶಶಾಂಕರು ಧರ್ಮ ಮಾನವಿ ಎರಡು ಗುಣದಿಂದ ಕನಿಯರೆನಿಪರು ಪ್ರವಹಗಿಂತಲಿ
ದಿನಪ ಶಶಿ ಯಮ ಧರ್ಮ ರೂಪಗಳು
ಅನುದಿನದಿ ಚಿಂತಿಪುದು ಸಂತರು ಸರ್ವ ಕಾಲದಲಿ||18||
ಮರುತನ ಆವೇಶಯುತ ಧರ್ಮಜ ಕರಡಿ ವಿದುರನು ಸತ್ಯಜಿತು
ಈರೆರೆಡು ಧರ್ಮನ ರೂಪ
ಬ್ರಹ್ಮಾವಿಷ್ಟ ಸುಗ್ರೀವ ಹರಿಯ ರೂಪಾವಿಷ್ಟ ಕರ್ಣನು ತರಣಿಗೆ ಎರಡು ಅವತಾರ
ಚಂದ್ರಮ ಸುರಪನ ಆವೇಶಯುತನು ಅಂಗದನು ಎನಿಸಿಕೊಳುತಿಪ್ಪ||19||
ತರಣಿಗಿಂತಲಿ ಪಾದ ಪಾದರೆ ವರುಣ ನೀಚನು
ಮಹಭಿಷಕು ದುರ್ದರ ಸುಶೇಷಣನು ಶಂತನೂ ನಾಲ್ವರು ವರುಣ ರೂಪ
ಸುರಮುನೀ ನಾರದನು ಕಿಂಚಿತ್ ಕೊರತೆ ವರುಣಗೆ
ಅಗ್ನಿ ಭೃಗು ಅಜ ಗೊರಳ ಪತ್ನಿ ಪ್ರಸೂತಿ ಮೂವರು ನಾರದನಿಗೆ ಅಧಮ||20||
ನೀಲ ದುಷ್ಟದ್ಯುಮ್ನ ಲವ ಈ ಲೇಲಿಹಾನನ ರೂಪಗಳು
ಭೃಗು ಕಾಲಿಲಿ ಒದ್ದದರಿಂದ ಹರಿಯ ವ್ಯಾಧನೆನಿಸಿದನು
ಏಳು ಋಷಿಗಳಿಗೆ ಉತ್ತಮರು ಮುನಿ ಮೌಳಿ ನಾರದಗೆ ಅಧಮ ಮೂವರು
ಘಾಳಿಯುತ ಪ್ರಹ್ಲಾದ ಬಾಹ್ಲಿಕರಾಯನು ಎನಿಸಿದನು||21||
ಜನಪ ಕರ್ಮಜರೊಳಗೆ ನಾರದ ಮುನಿ ಅನುಗ್ರಹ ಬಲದಿ
ಪ್ರಹ್ಲಾದನಳ ಭೃಗು ದಾಕ್ಷಾಯಣಿಯರಿಗೆ ಸಮನು ಎನಿಸಿಕೊಂಬ
ಮನು ವಿವಸ್ವಾನ್ ಗಾಧಿಜ ಈರ್ವರು ಅನಳಗಿಂತಲಿ ಕಿಂಚಿತು ಅಧಮ
ಎಣೆಯೆನಿಸುವರು ಸಪ್ತರ್ಷಿಗಳಿಗೆ ಎಲ್ಲ ಕಾಲದಲಿ||22||
ಕಮಲಸಂಭವ ಭವರೆನಿಪ ಸಂಯಮಿ ಮರೀಚೀ ಅತ್ರಿ ಅಂಗಿರಸುಮತಿ
ಪುಲಹಾಕ್ರುತು ವಸಿಷ್ಠ ಪುಲಸ್ತ್ಯ ಮುನಿ ಸ್ವಾಹಾ ರಮಣಗೆ ಅಧಮರು
ಮಿತ್ರನಾಮಕ ದ್ಯುಮಣಿ ರಾಹುಯುಕ್ತ ಭೀಷ್ಮಕ ಯಮಳರೂಪನು
ತಾರನಾಮಕನು ಎನಿಸಿ ತ್ರೈತೆಯೊಳು||23||
ನಿರ್ಋತಿಗೆ ಎರಡವತಾರ ದುರ್ಮುಖ ಹರಯುತ ಘಟೋತ್ಕಚನು
ಪ್ರಾವಹಿ ಗುರು ಮಡದಿ ತಾರಾ ಸಮರು ಪರ್ಜನ್ಯಗೆ ಉತ್ತಮರು
ಕರಿಗೊರಳ ಸಂಯುಕ್ತ ಭಗದತ್ತರಸು ಕತ್ಥನ ಧನಪ ರೂಪಗಳೆರೆಡು
ವಿಘ್ನಪ ಚಾರುದೇಷ್ಣನು ಅಶ್ವಿನಿಗಳು ಸಮ||24||
ಡೋನಾ ಧ್ರುವ ದೋಷಾರ್ಕ ಅಗ್ನಿ ಪ್ರಾಣ ದ್ಯುವಿಭಾವಸುಗಳು ಎಂಟು
ಕೃಶಾನು ಶ್ರೇಷ್ಠ ದ್ಯುನಾಮ ವಸು ಭೀಷ್ಮಾರ್ಯ ಬ್ರಹ್ಮ ಯುತ
ದ್ರೋಣ ನಾಮಕ ನಂದ ಗೋಪ ಪ್ರಧಾನ ಅಗ್ನಿಯನು ಉಳಿದು ಏಳು ಸಮಾನರೆನಿಪರು
ತಮ್ಮೊಳಗೆ ಜ್ಞಾನಾದಿ ಗುಣದಿಂದ||25||
ಭೀಮರೈವತ ಓಜ ಅಜೈಕಪದ ಆ ಮಹನ್ಬಹು ರೂಪಕನು ಭವ
ವಾಮ ಉಗ್ರ ವೃಶಾಕಪೀ ಅಹಿರ್ ಬುಧ್ನಿಯೆನಿಸುತಿಹ ಈ ಮಹಾತ್ಮರ ಮಧ್ಯದಲಿ
ಉಮಾ ಮನೋಹರೋತ್ತಮನು
ದಶನಾಮಕರು ಸಮರೆನಿಸಿಕೊಂಬರು ತಮ್ಮೊಳು ಎಂದೆಂದು||26||
ಭೂರಿ ಅಜೈಕಪ ಪದಾಹ್ವ ಅಹಿರ್ ಬುಧ್ನಿ ಈರೈದು ರುದ್ರಗಣ ಸಂಯುತ
ಭೂರಿಶ್ರವನು ಎಂದೆನಿಪ ಶಲ ವಿರುಪಾಕ್ಷ ನಾಮಕನು
ಸೂರಿ ಕೃಪ ವಿಷ್ಕಂಭ ಸಹದೇವಾ ರಣಾಗ್ರಣಿ
ಸೋಮದತ್ತನು ತಾ ರಚಿಸಿದ ದ್ವಿರೂಪ ಧರೆಯೊಳು ಪತ್ರತಾಪಕನು||27||
ದೇವ ಶಕ್ರ ಉರುಕ್ರಮನು ಮಿತ್ರಾ ವರುಣ ಪರ್ಜನ್ಯ ಭಗ
ಪೂಷಾ ವಿವಸ್ವಾನ್ ಸವಿತೃ ಧಾತಾ ಆರ್ಯಮ ತ್ವಷ್ಟ್ರು
ದೇವಕೀ ಸುತನಲ್ಲಿ ಸವಿತೃ ವಿಭಾವಸೂ ಸುತ ಭಾನುಯೆನಿಸುವ
ಜ್ಯಾವನಪಯುತ ವೀರಸೇನನು ತ್ವಷ್ಟ್ರು ನಾಮಕನು||28||
ಎರಡಧಿಕ ದಶ ಸೂರ್ಯರೊಳು ಮೂರೆರೆಡು ಜನರು ಉತ್ತಮ
ವಿವಸ್ವಾನ್ ವರುಣ ಶಕ್ರ ಉರುಕ್ರಮನು ಪರ್ಜನ್ಯ ಮಿತ್ರಾಖ್ಯ
ಮರುತನ ಆವೇಶಯುತ ಪಾಂಡೂವರ ಪರಾವಹನು ಎಂದೆನಿಪ
ಕೇಸರಿ ಮೃಗಪ ಸಂಪಾತಿ ಶ್ವೇತತ್ರಯರು ಮರುದಂಶ||29||
ಪ್ರತಿಭವಾತನು ಚೇಕಿತನು ವಿಪ್ರುಥುವು ಎನಿಸುವನು ಸೌಮ್ಯ ಮಾರುತ
ವಿತತ ಸರ್ವೋತ್ತುಂಗ ಗಜನಾಮಕರು ಪ್ರಾಣ ಅಂಶ
ದ್ವಿತೀಯ ಪಾನ ಗವಾಕ್ಷ ಗವಯ ತೃತೀಯ ವ್ಯಾನ
ಉದಾನ ವೃಷಪರ್ವ ಅತುಳ ಶರ್ವತ್ರಾತ ಗಂಧ ಸುಮಾದನರು ಸಮಾನ||30||
ಐವರೊಳಗೆ ಈ ಕುಂತಿಭೋಜನು ಆವಿ ನಾಮಕ ನಾಗಕೃಕಲನು
ದೇವದತ್ತ ಧನಂಜಯರು ಅವತಾರ ವರ್ಜಿತರು
ಆವಹೋದ್ವಹ ವಿವಹ ಸಂವಹ ಪ್ರಾವಹೀ ಪತಿ ಮರುತ ಪ್ರವಹನಿಗೆ
ಆವಕಾಲಕು ಕಿಂಚಿತು ಅಧಮರು ಮರುದ್ಗಣರೆಲ್ಲ||31||
ಪ್ರಾಣಾಪಾನ ವ್ಯಾನೋದಾನ ಸಮಾನರ ಐವರನು ಉಳಿದು ಮರುತರು ಊನರೆನಿಪರು
ಹತ್ತು ವಿಶ್ವೇದೇವರು ಇವರಿಂದ ಸೂನುಗಳುಯೆನಿಸುವನು
ಐವರ ಮಾನಿನೀ ದ್ರೌಪತಿಗೆ
ಕೆಲವರು ಕ್ಷೋಣಿಯೊಳು ಕೈಕೇಯರು ಎನಿಪರು ಎಲ್ಲ ಕಾಲದಲಿ||32||
ಪ್ರತಿವಿಂದ್ಯ ಶ್ರುತ ಸೋಮಶ್ರುತ ಕೀರ್ತಿ ಶತಾನಿಕ ಶ್ರುತಕರ್ಮ
ದ್ರೌಪತಿ ಕುವರರು ಇವರೊಳಗೆ ಅಭಿತಾಮ್ರ ಪ್ರಮುಖ ಚಿತ್ರರಥನು ಗೋಪ ಕಿಶೋರ
ಬಲರೆಂಬ ಅತುಲರು ಐ ಗಂಧರ್ವರಿಂದಲಿ ಯುತರು
ಧರ್ಮ ವೃಕೋದರ ಆದಿಜರು ಎಂದು ಕರೆಸುವರು||33||
ವಿವಿದಮೈಂದರು ನಕುಲ ಸಹದೇವ ವಿಭು ತ್ರಿಶಿಖ ಅಶ್ವಿನಿಗಳು ಇವರೊಳು
ದಿವಿಪನ ಆವೇಶವು ಇಹುದು ಎಂದಿಗು
ದ್ಯಾವಾ ಪೃಥ್ವಿ ಋಭು ಪವನ ಸುತ ವಿಶ್ವಕ್ಸೇನನು ಉಮಾ ಕುವರ ವಿಘ್ನಪ
ಧನಪ ಮೊದಲಾದವರು ಮಿತ್ರಗೆ ಕಿಂಚಿತು ಅಧಮರು ಎನಿಸಿಕೊಳುತಿಹರು||34||
ಪಾವಕಾಗ್ನಿ ಕುಮಾರನು ಎನಿಸುವ ಚಾವನೋಚಿಥ್ಯ ಮುನಿ
ಚಾಕ್ಶುಷ ರೈವತ ಸ್ವಾವರೋಚಿಷ ಉತ್ತಮ ಬ್ರಹ್ಮ ರುದ್ರ ಇಂದ್ರ
ದೇವಧರ್ಮನು ದಕ್ಷನಾಮಕ ಸಾವರ್ಣಿ ಶಶಿಬಿಂದು ಪ್ರುಥು
ಪ್ರೀಯವ್ರತನು ಮಾಂಧಾತ ಗಯನು ಕಕುಸ್ಥ ದೌಷ್ಯಂತಿ||35||
ಭರತ ಋಷಭಜ ಹರಿಣಿಜ ದ್ವಿಜ ಭರತ ಮೊದಲಾದ ಅಖಿಳರಾಯರೊಳಿರುತಿಹುದು
ಶ್ರೀ ವಿಷ್ಣು ಪ್ರಾಣಾವೇಶ ಪ್ರತಿದಿನದಿ
ವರ ದಿವಸ್ಪತಿ ಶಂಭು: ಅದ್ಭುತ ಕರೆಸುವನು ಬಲಿ ವಿಧೃತ ಧೃತ
ಶುಚಿ ನೆರೆಖಲೂ ಕೃತಧಾಮ ಮೊದಲಾದ ಅಷ್ಟ ಗಂಧರ್ವ||36||
ಅರಸುಗಳು ಕರ್ಮಜರು ವೈಶ್ವಾನರಗೆ ಅಧಮ ಶತಗುಣದಿ
ವಿಘ್ನೇಶ್ವರಗೆ ಕಿಂಚಿದ್ ಗುಣ ಕಡಿಮೆ ಬಲಿ ಮುಖ್ಯ ಪಾವಕರು
ಶರಭ ಪರ್ಜನ್ಯಾಖ್ಯ ಮೇಘಪ ತರಣಿ ಭಾರ್ಯಾ ಸಂಜ್ಞೆ
ಶಾರ್ವರೀಕರನ ಪತ್ನೀ ರೋಹಿಣೀ ಶಾಮಲಾ ದೇವಕಿಯು||37||
ಅರಸಿಯೆನಿಪಳು ಧರ್ಮರಾಜಗೆ ವರುಣ ಭಾರ್ಯ ಉಷಾದಿ ಷಟ್ಕರು
ಕೊರತೆಯೆನಿಪರು ಪಾವಕಾದ್ಯರಿಗೆ ಎರಡು ಗುಣದಿಂದ
ಎರಡು ಮೂರ್ಜನರಿಂದ ಅಧಮ ಸ್ವಹ ಕರೆಸುವಳು
ಉಷಾದೇವಿ ವೈಶ್ವಾನರನ ಮಡದಿಗೆ ದಶ ಗುಣ ಅವರಳು ಅಶ್ವಿನೀ ಭಾರ್ಯಾ||38||
ಸುದರ್ಶನ ಶಕ್ರಾದಿ ಸುರಯುತ ಬುಧನು ತಾನು ಅಭಿಮನ್ಯುವು ಎನಿಸುವ
ಬುಧನಿಗಿಂತ ಅಶ್ವಿನೀ ಭಾರ್ಯ ಶಲ್ಯ ಮಾಗಧರ ಉದರಜ
ಉಷಾ ದೇವಿಗಿಂತಲಿ ಅಧಮನೆನಿಪ ಶನೈಶ್ಚರನು
ಶನಿಗೆ ಅಧಮ ಪುಷ್ಕರ ಕರ್ಮಪನೆನಿಸುವನು ಬುಧರಿಂದ||39||
ಉದ್ವಹಾ ಮರುತಾನ್ವಿತ ವಿರಾಧ ದ್ವಿತೀಯ ಸಂಜಯನು ತುಂಬುರ
ವಿದ್ವದೋತ್ತಮ ಜನ್ಮೇಜಯ ತ್ವಷ್ಟ್ರುಯುತ ಚಿತ್ರರಥ
ಸದ್ವಿನುತ ದಮ ಘೋಷಕ ಕಬಂಧದ್ವಯರು ಗಂಧರ್ವದನು
ಮನುಪದ್ಮಸಂಭವಯುತ ಅಕ್ರೂರ ಕಿಶೋರನೆನಿಸುವನು||40||
ವಾಯುಯುತ ಧೃತರಾಷ್ಟ್ರ ದಿವಿಜರ ಗಾಯಕನು ಧೃತರಾಷ್ಟ್ರ
ನಕ್ರನುರಾಯ ದ್ರುಪದನು ವಹ ವಿಶಿಷ್ಟ ಹೂಹು ಗಂಧರ್ವ
ನಾಯಕ ವಿರಾಟ್ ವಿವಹ ಹಾಹಾಜ್ಞೆಯ
ವಿದ್ಯಾಧರನೆ ಅಜಗರ ತಾ ಯೆನಿಸುವನು ಉಗ್ರಸೇನನೆ ಉಗ್ರಸೇನಾಖ್ಯ||41||
ಬಿಸಜ ಸಂಭವ ಯುಕ್ತ ವಿಶ್ವಾವಸು ಯುಧಾಮನ್ಯು
ಉತ್ತ ಮೌಜಸ ಬಿಸಜ ಮಿತ್ರಾರ್ಯಮ ಯುತ ಪರಾವಸುಯೆನಿಸುತಿಪ್ಪ
ಅಸಮ ಮಿತ್ರಾನ್ವಿತನು ಸತ್ಯಜಿತು ವಸುಧಿಯೊಳು ಚಿತ್ರಸೇನ
ಅಮೃತಾಂಧಸರು ಗಾಯಕರೆಂದು ಕರೆಸುವರು ಆವ ಕಾಲದಲಿ||42||
ಉಳಿದ ಗಂಧರ್ವರುಗಳು ಎಲ್ಲರು ಬಲಿ ಮೊದಲು ಗೋಪಾಲರೆನಿಪರು
ಇಳೆಯೊಳಗೆ ಸೈರೆಂಧ್ರಿ ಪಿಂಗಳೆ ಅಪ್ಸರ ಸ್ತ್ರೀಯಳು
ತಿಲೋತ್ತಮೆಯು ಪೂರ್ವದಲಿ ನಕುಲನ ಲಲನೆ ಪಾರ್ವತಿಯೆನಿಸುವಳು
ಗೋಕುಲದ ಗೋಪಿಯರು ಎಲ್ಲ ಶಬರೀ ಮುಖ್ಯ ಅಪ್ಸರರು||43||
ಕೃಷ್ಣವರ್ತ್ಮನ ಸುತರೊಳಗೆ ಶತದ್ವಾಷ್ಟ ಸಾವಿರ ಸ್ತ್ರೀಯರಲ್ಲಿ
ಪ್ರವಿಷ್ಟಳು ಆಗಿ ರಮಾಂಬ ತತ್ತನ್ನಾಮ ರೂಪದಲಿ ಕೃಷ್ಣ ಮಹಿಷಿಯರೊಳಗಿಪ್ಪಳು
ತ್ವಷ್ಟ್ರು ಪುತ್ರಿ ಕಶೇರು ಇವರೊಳು ಶ್ರೇಷ್ಠಳು ಎನಿಪಳು
ಉಳಿದ ಋಷಿ ಗಣ ಗೋಪಿಕಾ ಸಮರು||44||
ಸೂನುಗಳೆನಿಸುವರು ದೇವ ಕೃಷಾನುವಿಗೆ ಕ್ರಥು ಸಿಂಧು ಶುಚಿ ಪವಮಾನ
ಕೌಶಿಕರೈದು ತುಂಬುರು ಊರ್ವಶೀ ಶತರು ಮೇನಕೀ ಋಷಿ ರಾಯರುಗಳು
ಆಜಾನು ಸುರರಿಗೆ ಸಮರೆನಿಪರು
ಸುರಾಣಕರು ಅನಾಖ್ಯಾತ ದಿವಿಜರ ಜನಕರು ಎನಿಸುವರು||45||
ಪಾವಕರಿಗಿಂತ ಅಧಮರು ಎನಿಸುವ ದೇವ ಕುಲಜ ಆನಾಖ್ಯ ಸುರಗಣ ಕೋವಿದರು
ನಾನಾ ಸುವಿದ್ಯದಿ ಸೋತ್ತಮರ ನಿತ್ಯ ಸೇವಿಪರು ಸದ್ಭಕ್ತಿ ಪೂರ್ವಕ
ಸ್ವವರರಿಗೆ ಉಪದೇಶಿಸುವರು
ನಿರಾವಲಂಬನ ವಿಮಲ ಗುಣಗಳ ಪ್ರತಿ ದಿವಸದಲ್ಲಿ||46||
ಸುರರೊಳಗೆ ವರ್ಣಾಶ್ರಮಗಳೆಂಬ ಎರಡು ಧರ್ಮಗಳಿಲ್ಲ
ತಮ್ಮೊಳು ನಿರುಪಮರೆಂದೆನಿಸಿ ಕೊಂಬರು ತಾರತಮ್ಯದಲಿ
ಗುರು ಸುಶಿಷ್ಯತ್ವವು ಈ ಋಷಿಗಳೊಳಗೆ ಇರುತಿಹುದು
ಆಜಾನ ಸುರರಿಗೆ ಚಿರ ಪಿತೃ ಶತಾಧಮರು ಎನಿಸುವರು ಏಳು ಜನರುಳಿದು||47||
ಚಿರ ಪಿತ್ರುಗಳಿಂದ ಅಧಮ ಗಂಧರ್ವರುಗಳು ಎನಿಪರು
ದೇವನಾಮಕ ಕೊರತೆಯೆನಿಸುವ ಚಕ್ರವರ್ತಿಗಳಿಂದ ಗಂಧರ್ವ
ನರರೊಳು ಉತ್ತಮರೆನಿಸುವರು ಹನ್ನೆರೆಡು ಎಂಭತ್ತೆಂಟು ಗುಣದಲಿ
ಹಿರಿಯರೆನಿಪರು ಕ್ರಮದಿ ದೇವಾವೇಶ ಬಲದಿಂದ||48||
ದೇವತೆಗಳಿಂ ಪ್ರೇಷ್ಯರೆನಿಪರು ದೇವ ಗಂಧರ್ವರುಗಳು
ಇವರಿಂದ ಆವ ಕಾಲಕು ಶಿಕ್ಷಿತರು ನರನಾಮ ಗಂಧರ್ವ
ಕೇವಲ ಅತಿ ಸದ್ಭಕ್ತಿಪೂರ್ವಕ ಯಾವದಿಂದ್ರಿಯಗಳ ನಿಯಾಮಕ
ಶ್ರೀವರನೆಂದರಿದು ಭಜಿಪರು ಮಾನುಷೋತ್ತಮರು||49||
ಬಾದರಾಯಣ ಭಾಗವತ ಮೊದಲಾದ ಶಾಸ್ತ್ರಗಳಲಿ ಬಹುವಿಧ
ದ್ವಾದಶ ದಶ ಸುಪಂಚ ವಿಂಶತಿ ಶತ ಸಹಸ್ರಯುತ ಭೇದಗಳ ಪೇಳಿದನು
ಸೋತ್ತಮ ಆದಿತೇಯ ಆವೇಶ ಬಲದಿ ವಿರೋಧ ಚಿಂತಿಸಬಾರದು
ಇದು ಸಾಧು ಜನ ಸಮ್ಮತವು||50||
ಇವರು ಮುಕ್ತಿ ಯೋಗ್ಯರೆಂಬರು ಶ್ರವಣ ಮನನಾದಿಗಳ
ಪರಮೋತ್ಸವದಿ ಮಾಡುತ ಕೇಳಿ ನಲಿಯುತ
ಧರ್ಮ ಕಾಮಾರ್ಥ ತ್ರಿವಿಧ ಫಲವ ಅಪೇಕ್ಷಿಸದೆ ಶ್ರೀಪವನ ಮುಖ ದೇವಾಂತರಾತ್ಮಕ
ಪ್ರವರತಮ ಶಿಷ್ಟೇಷ್ಟ ದಾಯಕನೆಂದು ಸ್ಮರಿಸುವರು||51||
ನಿತ್ಯ ಸಂಸಾರಿಗಳು ಗುಣ ದೋಷಾತ್ಮಕರು
ಬ್ರಹ್ಮಾದಿ ಜೀವರ ಭೃತ್ಯರೆಂಬರು ರಾಜನ ಉಪಾದಿಯಲಿ ಹರಿಯೆಂಬ
ಕೃತ್ತಿವಾಸನು ಬ್ರಹ್ಮ ಶ್ರೀ ವಿಷ್ಣುತ್ರಯರು ಸಮ
ದುಃಖ ಸುಖೋತ್ಪತ್ತಿ ಮೃತಿ ಭವ ಪೇಳುವರು ಅವತಾರಗಳಿಗೆ ಸದಾ||52||
ತಾರತಮ್ಯ ಜ್ಞಾನವಿಲ್ಲದೆ ಸೂರಿಗಳ ನಿಂದಿಸುತ ನಿತ್ಯದಿ
ತೋರುತಿಪ್ಪರು ಸುಜನರ ಉಪಾದಿಯಲಿ ನರರೊಳಗೆ
ಕ್ರೂರ ಕರ್ಮಾಸಕ್ತರಾಗಿ ಶರೀರ ಪೋಷಣೆ ಗೋಸುಗದಿ
ಸಂಚಾರ ಮಾಳ್ಪರು ಅನ್ಯ ದೇವತೆ ನೀಚರ ಆಲಯದಿ||53||
ದಶ ಪ್ರಮತಿ ಮತಾಬ್ಧಿಯೊಳು ಸುಮನಸರೆನಿಪ ರತ್ನಗಳನು
ಅವಲೋಕಿಸಿ ತೆಗೆದು ಪ್ರಾಕೃತ ಸುಭಾಷಾ ತಂತುಗಳ ರಚಿಸಿ
ಅಸುಪತಿ ಶ್ರೀ ರಮಣನಿಗೆ ಸಮರ್ಪಿಸಿದೆ ಸತ್ಜನರು ಇದನು ಸಂತೋಷಿಸಲಿ
ದೋಷಗಳ ಎಣಿಸದಲೆ ಕಾರುಣ್ಯದಲಿ ನಿತ್ಯ||54||
ನಿರುಪಮನು ಶ್ರೀವಿಷ್ಣು ಲಕ್ಷ್ಮೀ ಸರಸಿಜೋದ್ಭವ ವಾಯು ವಾಣೀ
ಗರುಡ ಷಣ್ಮಹಿಷಿಯರು ಪಾರ್ವತಿ ಶಕ್ರ ಸ್ಮರ ಪ್ರಾಣ ಗುರು
ಬೃಹಸ್ಪತಿ ಪ್ರವಹ ಸೂರ್ಯನು ವರುಣ ನಾರದ ವಹ್ನಿ ಸಪ್ತ ಅಂಗಿರರು
ಮಿತ್ರ ಗಣೇಶ ಪೃಥು ಗಂಗಾ ಸ್ವಾಹಾ ಬುಧನು||55||
ತರಣಿ ತನಯ ಶನೈಶ್ಚರನು ಪುಷ್ಕರನು ಆಜಾನಜ ಚಿರಪಿತರು
ಗಂಧರ್ವರೀರ್ವರು ದೇವ ಮಾನುಷ ಚಕ್ರವರ್ತಿಗಳು
ನರರೊಳುತ್ತಮ ಮಧ್ಯಮ ಅಧಮ ಕರೆಸುವರು ಮಧ್ಯ ಉತ್ತಮರು
ಈರೆರೆಡು ಜನ ಕೈವಲ್ಯ ಮಾರ್ಗಸ್ಥರಿಗೆ ಅನಮಿಪೆ||56||
ಸಾರ ಭಕ್ತಿ ಜ್ಞಾನದಿಂ ಬೃಹತ್ತಾರತಮ್ಯವನು ಅರಿತು ಪಠಿಸುವ
ಸೂರಿಗಳಿಗೆ ಅನುದಿನದಿ ಪುರುಷಾರ್ಥಗಳ ಪೂರೈಸಿ
ಕಾರುಣಿಕ ಮರುತಾಂತರಾತ್ಮಕ ಮಾರಮಣ ಜಗನ್ನಾಥ ವಿಠಲ
ತೋರಿಕೊಂಬನು ಹೃತ್ಕಮಲದೊಳು ಯೋಗ್ಯತೆಯನರಿತು||57||
***********
harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||
hari siri viraMcIra muKa nirjanara AvESAvatAragaLa
smarisu guNagaLa sarva kAladi Bakti pUrvakadi||
mIna kUrma krODa narahari mANavaka BRugurAma daSaratha sUnu
yAdava buddha kalkI kapila vaikunTha
SrInivAsa vyAsa RuShaBa hayAnanA nArAyaNI haMsa aniruddha
trivikrama SrIdhara hRuShIkESa||1||
hariyu nArAyaNanu kRuShNa asura kulAntaka sUrya samapraBa
karesuvanu nirduShTa suKa paripUrNa tAnendu
sarvadEvOttamanu sarvaga parama puruSha purAtana
jarAmaraNa varjita vAsudEvAdi amita rUpAtma||2||
I naLinaBava janani lakShmI j~jAna bala BaktAdi guNa saMpUrNaLu enipaLu
sarva kAladi hari kRupA baladi
hInaLu enipaLu anaMta guNadi purANa puruShage
prakRutiginnu samAnaru enisuvarilla muktAmukta suraroLage||3||
guNagaLa trayamAni SrI kuMBiNi mahA durga aMBraNI rugmiNiyu
satyASAntikRuti jaya mAya mahalakumi janakajAkamala AlayA
dakShiNe supadmA trilOka ISvari
aNu mahattinoLiddu upamArahitaLu enisuvaLu||4||
GOTakAsyana maDadigintali hATaka udarapavanaru Irvaru
kOTi guNadinda adhamaru eniparu AvakAladali
KETapati SESha amarEndrara pATimADade
SrISana kRupA nOTadindali sarvaroLu vyApAra mADuvaru||5||
puruSha brahma virinci mahAn maruta muKyaprANa dhRuti smRuti
guruvara mahAdhyAta bala vij~jAta viKyAta garaLaBug
BavarOga BEShaja svaravaraNa vEdastha jIvESvara
viBIShaNa viSva cEShTaka vItaBaya BIma||6||
anilasthiti vairAgya nidhi rOcana vimuktigAnanda daSamati
animiSESha anidra Suci satvAtmaka SarIra
aNu mahadrUpAtmaka amRuta hanumadAdi avatAra
padmAsana padavi saMprApta parisarAKaNa ASmasama||7||
mAtariSva brahmaru jaganmAtege adhama adhInareniparu
SrI taruNi vallaBanu IrvaroLu Ava kAladali
nIta Bakti j~jAna bala rUpa atiSayadindiddu
cEtanAcEtanagaLoLu vyAptareniparu tattadAhvayadi||8||
sarasvatI vEda AtmikA Buji naraharI guruBakti brAhmI
parama suKa bala pUrNe SraddhA prIti gAyatrI
garuDa SEShara janani SrI sankaruShaNana jaya tanuje
vANI karaNa niyAmake caturdaSa Buvana sanmAnyE||9||
kALikASije vipraje pAncAli Sivakanya indrasEnA
kAlamAnI chandradyusaBA nAma BAratige
GALibrahmara yuvatiyaru ELELu aivattondu guNadiM kILareniparu
tamma patigaLiMdali AvAga||10||
hari samIra AvESa nara sankaruShaNa AvESa yuta lakShmaNa
parama puruShana Sukla kESa AvESa balarAma
hara sadASiva tapAhankRutu mRuta yukta Suka UrdhvApaTu
tatpuruSha jaigISaurva drauNI vyAdha dUrvAsa||11||
garuDa SESha SaSi ankadaLa SEKararu tammoLu samaru
BArati sarasijAsana patnige adhamaru nUru guNadinda
hari maDadi jAMbavatiyoLu SrI taruNiya AvESavihudu endigU
korateyeniparu garuDa SESharige aivaru aiduguNa||12||
nIlaBadrA mitravindA mElenipa kALiMdi lakShmaNa
bAleyarigiMda adhama vAruNi sauparaNi girijA
SrI lakumiyuta rEvatI SrI mUla rUpadi pEyaLu enipaLu
SailajAdyaru daSaguNa adhama tamma patigaLige||13||
narahari Ira AvESa saMyuta narapurandaragAdhi kuSa
mandaradyumna vikukShi vAlI indrana avatAra
Barata brahmAviShTa sAMba sudarSana pradyumna
sanakAdyaroLagippa sanatkumAranu Shanmukanu kAma||14||
Iraidu guNa kaDime pArvati vAruNIyarige indra kAma
SarIramAni prANa daSa guNa avara Sakranige
mArajA rati dakSha guruvRutta ari jAyA Saci svayaMBuvaru
Aru jana sama prANage avararu hattu guNadinda||15||
kAma putra aniruddha sItArAmana anuja Satruhana balarAmananuja
pautra aniruddhanoLage aniruddha
kAma BAryA rugmavati sannnAma lakShmaNaLu enisuvaLu
paulOmi citrAngadeyu tArA eraDu pesarugaLu||16||
tAra nAmaka traiteyoLu sItA ramaNana ArAdhisidanu
samIrayukta uddhavanu kRuShNage prIyanenisidanu
vArijAsana yukta drONanu mUriLeyoLu bRuhaspatige avatAraveMbaru
mahABArata tAtparyadoLage||17||
manu muKAdyariginta pravahA guNadi pancaka nIcanenisuva
#0CBF;na SaSAnkaru dharma mAnavi eraDu guNadinda kaniyareniparu pravahagintali
dinapa SaSi yama dharma rUpagaLu
anudinadi cintipudu santaru sarva kAladali||18||
marutana AvESayuta dharmaja karaDi viduranu satyajitu
IrereDu dharmana rUpa
brahmAviShTa sugrIva hariya rUpAviShTa karNanu taraNige eraDu avatAra
chandrama surapana AvESayutanu angadanu enisikoLutippa||19||
taraNigintali pAda pAdare varuNa nIcanu
mahaBiShaku durdara suSEShaNanu SantanU nAlvaru varuNa rUpa
suramunI nAradanu kincit korate varuNage
agni BRugu aja goraLa patni prasUti mUvaru nAradanige adhama||20||
nIla duShTadyumna lava I lElihAnana rUpagaLu
BRugu kAlili oddadariMda hariya vyAdhanenisidanu
ELu RuShigaLige uttamaru muni mauLi nAradage adhama mUvaru
GALiyuta prahlAda bAhlikarAyanu enisidanu||21||
janapa karmajaroLage nArada muni anugraha baladi
prahlAdanaLa BRugu dAkShAyaNiyarige samanu enisikoMba
manu vivasvAn gAdhija Irvaru anaLagintali kincitu adhama
eNeyenisuvaru saptarShigaLige ella kAladali||22||
kamalasaMBava Bavarenipa saMyami marIcI atri angirasumati
pulahAkrutu vasiShTha pulastya muni svAhA ramaNage adhamaru
mitranAmaka dyumaNi rAhuyukta BIShmaka yamaLarUpanu
tAranAmakanu enisi traiteyoLu||23||
nir^^Rutige eraDavatAra durmuKa harayuta GaTOtkacanu
prAvahi guru maDadi tArA samaru parjanyage uttamaru
karigoraLa saMyukta Bagadattarasu katthana dhanapa rUpagaLereDu
viGnapa cArudEShNanu aSvinigaLu sama||24||
DOnA dhruva dOShArka agni prANa dyuviBAvasugaLu enTu
kRuSAnu SrEShTha dyunAma vasu BIShmArya brahma yuta
drONa nAmaka nanda gOpa pradhAna agniyanu uLidu ELu samAnareniparu
tammoLage j~jAnAdi guNadinda||25||
BImaraivata Oja ajaikapada A mahanbahu rUpakanu Bava
vAma ugra vRuSAkapI ahir budhniyenisutiha I mahAtmara madhyadali
umA manOharOttamanu
daSanAmakaru samarenisikoMbaru tammoLu endendu||26||
BUri ajaikapa padAhva ahir budhni Iraidu rudragaNa saMyuta
BUriSravanu endenipa Sala virupAkSha nAmakanu
sUri kRupa viShkaMBa sahadEvA raNAgraNi
sOmadattanu tA racisida dvirUpa dhareyoLu patratApakanu||27||
dEva Sakra urukramanu mitrA varuNa parjanya Baga
pUShA vivasvAn savitRu dhAtA Aryama tvaShTru
dEvakI sutanalli savitRu viBAvasU suta BAnuyenisuva
jyAvanapayuta vIrasEnanu tvaShTru nAmakanu||28||
eraDadhika daSa sUryaroLu mUrereDu janaru uttama
vivasvAn varuNa Sakra urukramanu parjanya mitrAKya
marutana AvESayuta pAnDUvara parAvahanu endenipa
kEsari mRugapa saMpAti SvEtatrayaru marudaMSa||29||
pratiBavAtanu cEkitanu vipruthuvu enisuvanu saumya mAruta
vitata sarvOttunga gajanAmakaru prANa aMSa
dvitIya pAna gavAkSha gavaya tRutIya vyAna
udAna vRuShaparva atuLa SarvatrAta gandha sumAdanaru samAna||30||
aivaroLage I kuntiBOjanu Avi nAmaka nAgakRukalanu
dEvadatta dhananjayaru avatAra varjitaru
AvahOdvaha vivaha saMvaha prAvahI pati maruta pravahanige
AvakAlaku kincitu adhamaru marudgaNarella||31||
prANApAna vyAnOdAna samAnara aivaranu uLidu marutaru Unareniparu
hattu viSvEdEvaru ivarinda sUnugaLuyenisuvanu
aivara mAninI draupatige
kelavaru kShONiyoLu kaikEyaru eniparu ella kAladali||32||
prativindya Sruta sOmaSruta kIrti SatAnika Srutakarma
draupati kuvararu ivaroLage aBitAmra pramuKa citrarathanu gOpa kiSOra
balareMba atularu ai gandharvariMdali yutaru
dharma vRukOdara Adijaru endu karesuvaru||33||
vividamaindaru nakula sahadEva viBu triSiKa aSvinigaLu ivaroLu
divipana AvESavu ihudu endigu
dyAvA pRuthvi RuBu pavana suta viSvaksEnanu umA kuvara viGnapa
dhanapa modalAdavaru mitrage kincitu adhamaru enisikoLutiharu||34||
pAvakAgni kumAranu enisuva cAvanOcithya muni
cAkSuSha raivata svAvarOciSha uttama brahma rudra indra
dEvadharmanu dakShanAmaka sAvarNi SaSibindu pruthu
prIyavratanu mAndhAta gayanu kakustha dauShyanti||35||
Barata RuShaBaja hariNija dvija Barata modalAda aKiLarAyaroLirutihudu
SrI viShNu prANAvESa pratidinadi
vara divaspati SaMBu: adButa karesuvanu bali vidhRuta dhRuta
Suci nereKalU kRutadhAma modalAda aShTa gaMdharva||36||
arasugaLu karmajaru vaiSvAnarage adhama SataguNadi
viGnESvarage kiMcid guNa kaDime bali muKya pAvakaru
SaraBa parjanyAKya mEGapa taraNi BAryA saMj~je
SArvarIkarana patnI rOhiNI SAmalA dEvakiyu||37||
arasiyenipaLu dharmarAjage varuNa BArya uShAdi ShaTkaru
korateyeniparu pAvakAdyarige eraDu guNadinda
eraDu mUrjanarinda adhama svaha karesuvaLu
uShAdEvi vaiSvAnarana maDadige daSa guNa avaraLu aSvinI BAryA||38||
sudarSana SakrAdi surayuta budhanu tAnu aBimanyuvu enisuva
budhaniginta aSvinI BArya Salya mAgadhara udaraja
uShA dEvigintali adhamanenipa SanaiScaranu
Sanige adhama puShkara karmapanenisuvanu budharinda||39||
udvahA marutAnvita virAdha dvitIya saMjayanu tuMbura
vidvadOttama janmEjaya tvaShTruyuta citraratha
sadvinuta dama GOShaka kabaMdhadvayaru gandharvadanu
manupadmasaMBavayuta akrUra kiSOranenisuvanu||40||
vAyuyuta dhRutarAShTra divijara gAyakanu dhRutarAShTra
nakranurAya drupadanu vaha viSiShTa hUhu gandharva
nAyaka virAT vivaha hAhAj~jeya
vidyAdharane ajagara tA yenisuvanu ugrasEnane ugrasEnAKya||41||
bisaja saMBava yukta viSvAvasu yudhAmanyu
utta maujasa bisaja mitrAryama yuta parAvasuyenisutippa
asama mitrAnvitanu satyajitu vasudhiyoLu citrasEna
amRutAndhasaru gAyakarendu karesuvaru Ava kAladali||42||
uLida gandharvarugaLu ellaru bali modalu gOpAlareniparu
iLeyoLage sairendhri pingaLe apsara strIyaLu
tilOttameyu pUrvadali nakulana lalane pArvatiyenisuvaLu
gOkulada gOpiyaru ella SabarI muKya apsararu||43||
kRuShNavartmana sutaroLage SatadvAShTa sAvira strIyaralli
praviShTaLu Agi ramAMba tattannAma rUpadali kRuShNa mahiShiyaroLagippaLu
tvaShTru putri kaSEru ivaroLu SrEShThaLu enipaLu
uLida RuShi gaNa gOpikA samaru||44||
sUnugaLenisuvaru dEva kRuShAnuvige krathu sindhu Suci pavamAna
kauSikaraidu tuMburu UrvaSI Sataru mEnakI RuShi rAyarugaLu
AjAnu surarige samareniparu
surANakaru anAKyAta divijara janakaru enisuvaru||45||
pAvakariginta adhamaru enisuva dEva kulaja AnAKya suragaNa kOvidaru
nAnA suvidyadi sOttamara nitya sEviparu sadBakti pUrvaka
svavararige upadESisuvaru
nirAvalaMbana vimala guNagaLa prati divasadalli||46||
suraroLage varNASramagaLeMba eraDu dharmagaLilla
tammoLu nirupamarendenisi koMbaru tAratamyadali
guru suSiShyatvavu I RuShigaLoLage irutihudu
AjAna surarige cira pitRu SatAdhamaru enisuvaru ELu janaruLidu||47||
cira pitrugaLiMda adhama gandharvarugaLu eniparu
dEvanAmaka korateyenisuva cakravartigaLiMda gaMdharva
nararoLu uttamarenisuvaru hannereDu eMBatteMTu guNadali
hiriyareniparu kramadi dEvAvESa baladiMda||48||
dEvategaLiM prEShyareniparu dEva gaMdharvarugaLu
ivariMda Ava kAlaku SikShitaru naranAma gaMdharva
kEvala ati sadBaktipUrvaka yAvadindriyagaLa niyAmaka
SrIvaraneMdaridu Bajiparu mAnuShOttamaru||49||
bAdarAyaNa BAgavata modalAda SAstragaLali bahuvidha
dvAdaSa daSa supanca viMSati Sata sahasrayuta BEdagaLa pELidanu
sOttama AditEya AvESa baladi virOdha cintisabAradu
idu sAdhu jana sammatavu||50||
ivaru mukti yOgyareMbaru SravaNa mananAdigaLa
paramOtsavadi mADuta kELi naliyuta
dharma kAmArtha trividha Palava apEkShisade SrIpavana muKa dEvAMtarAtmaka
pravaratama SiShTEShTa dAyakanendu smarisuvaru||51||
nitya saMsArigaLu guNa dOShAtmakaru
brahmAdi jIvara BRutyareMbaru rAjana upAdiyali hariyeMba
kRuttivAsanu brahma SrI viShNutrayaru sama
duHKa suKOtpatti mRuti Bava pELuvaru avatAragaLige sadA||52||
tAratamya j~jAnavillade sUrigaLa niMdisuta nityadi
tOrutipparu sujanara upAdiyali nararoLage
krUra karmAsaktarAgi SarIra pOShaNe gOsugadi
saMcAra mALparu anya dEvate nIcara Alayadi||53||
daSa pramati matAbdhiyoLu sumanasarenipa ratnagaLanu
avalOkisi tegedu prAkRuta suBAShA tantugaLa racisi
asupati SrI ramaNanige samarpiside satjanaru idanu santOShisali
dOShagaLa eNisadale kAruNyadali nitya||54||
nirupamanu SrIviShNu lakShmI sarasijOdBava vAyu vANI
garuDa ShaNmahiShiyaru pArvati Sakra smara prANa guru
bRuhaspati pravaha sUryanu varuNa nArada vahni sapta angiraru
mitra gaNESa pRuthu gangA svAhA budhanu||55||
taraNi tanaya SanaiScaranu puShkaranu AjAnaja cirapitaru
gaMdharvarIrvaru dEva mAnuSha cakravartigaLu
nararoLuttama madhyama adhama karesuvaru madhya uttamaru
IrereDu jana kaivalya mArgastharige anamipe||56||
sAra Bakti j~jAnadiM bRuhattAratamyavanu aritu paThisuva
sUrigaLige anudinadi puruShArthagaLa pUraisi
kAruNika marutAntarAtmaka mAramaNa jagannAtha viThala
tOrikoMbanu hRutkamaladoLu yOgyateyanaritu||57||
*********