Showing posts with label ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ pranesha vittala. Show all posts
Showing posts with label ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ pranesha vittala. Show all posts

Tuesday, 19 November 2019

ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ankita pranesha vittala

ಪ್ರಾಣೇಶದಾಸರು

ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ 
ಪಕಂಜಹರನ ಪಿತನಪಾದ|ಕಂಜನಿರತಭಜಿಸುತಿರಲು ||ಅ.ಪ||

ಎರಡು ಒಂದು ಕೋಟಿರೂಪ|ಧರಿಸಿ ರಕ್ಕಸರೊಳು ಕಾದಿ ||
ಹರಿಯ ಕರುಣ ಗಳಿಸಿದವನ |ಚರಿತೆಗಳನು ಸ್ಮರಿಸುತಿರಲು 1

ತಾಸಿಗೆಂಟು ಒಂದು ನೂರು |ಶ್ವಾಸಜಪವ ಮಾಡಿ ಜಂತು ||
ರಾಶಿಗಳಿಗೆ ಸತತ ಬೇಡಿ |ದಾಸೆ ಪೂರ್ತಿಸುವವನಿರಲು2

ಜಂಗಮರಿಗೆಪಾಣಿಚರಣ|ಕಂಗಳುಕಿವಿಯಾಡಿಸುತಲಿ ||
ಪಿಂಗಳನಿಭಭಾರತೀಶ|ಹಿಂಗದನವರತ ಪೊರೆಯಲು 3

ಪರಿಹರಿಸುತಲಗ್ನಿ ಭಯವ |ತ್ವರದಿ ಹಿಡಿಂಬ ಕೀಚಕ ಪ್ರಮು |
ಖರನು ಕುರುಪತಿಯ ಕುಲವತರಿದ ಕುಂತೀ ಕುವರನಿರಲು 4

ಭುಜಕೆ ಗೋಪೀಚಂದನವನು |ವಿಜಯಚಕ್ರಗಳನು ಧರಿಸಿ ||ಕುಜನರಿಪುಪ್ರಾಣೇಶ ವಿಠಲ |ಭಜಕನ ದಯ ಪೂರ್ಣವಿರಲು 5
********

Wednesday, 6 November 2019

ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ankita pranesha vittala

ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ಪಕಂಜಹರನ ಪಿತನಪಾದ|ಕಂಜನಿರತಭಜಿಸುತಿರಲು ||ಅ.ಪ||

ಎರಡು ಒಂದು ಕೋಟಿರೂಪ|
ಧರಿಸಿ ರಕ್ಕಸರೊಳು ಕಾದಿ ||
ಹರಿಯ ಕರುಣ ಗಳಿಸಿದವನ |
ಚರಿತೆಗಳನು ಸ್ಮರಿಸುತಿರಲು 1

ತಾಸಿಗೆಂಟು ಒಂದು ನೂರು |
ಶ್ವಾಸಜಪವ ಮಾಡಿ ಜಂತು ||
ರಾಶಿಗಳಿಗೆ ಸತತ ಬೇಡಿ |
ದಾಸೆ ಪೂರ್ತಿಸುವವನಿರಲು2

ಜಂಗಮರಿಗೆಪಾಣಿಚರಣ|
ಕಂಗಳುಕಿವಿಯಾಡಿಸುತಲಿ ||
ಪಿಂಗಳನಿಭಭಾರತೀಶ|
ಹಿಂಗದನವರತ ಪೊರೆಯಲು 3

ಪರಿಹರಿಸುತಲಗ್ನಿ ಭಯವ |
ತ್ವರದಿ ಹಿಡಿಂಬ ಕೀಚಕ ಪ್ರಮು |
ಖರನು ಕುರುಪತಿಯ 
ಕುಲವತರಿದ ಕುಂತೀ ಕುವರನಿರಲು 4

ಭುಜಕೆ ಗೋಪೀಚಂದನವನು |
ವಿಜಯಚಕ್ರಗಳನು ಧರಿಸಿ ||
ಕುಜನರಿಪುಪ್ರಾಣೇಶ ವಿಠಲ |
ಭಜಕನ ದಯ ಪೂರ್ಣವಿರಲು 5
*******