ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ಸಕಲವೆನ್ನ ಸ್ವಾಮಿ ಶ್ರೀ ಹರಿಯೆ ದೀನ ದಯಾಳು ನೀನೆವೆ ನಿಜಧೊರಿಯೆ ಪ
ತಂದೆ ತಾಯಿಯು ನೀನೆ ಬಂಧುಬಳಗ ನೀನೆ ಹೊಂದಿಕಿ ಹೊಲಬು ನೀ ಎನ್ನ ನೀನೆ ಎಂದೆಂದು ಸಲಹುವಾನಂದ ಮೂರುತಿ ನೀನೆ ಕುಂದ ನೋಡದಿಹ್ಯ ಮಂದರಧರ ನೀನೆ 1
ಕುಲದೈವವು ನೀನೆ ಮೂಲಪುರಷ ನೀನೆ ಒಲಿವ ಭಾಗ್ಯದ ಫಲಶ್ರುತಿಯು ನೀನೆ ಸಾಲವಳಿಯು ನೀನೆ ಹಲವು ಭೂಷಣ ನೀನೆ ಕುಲಕೋಟಿ ಬಳಗಾದ ಭಕ್ತವತ್ಸಲ ನೀನೆ 2
ಧನದ್ರವ್ಯಾರ್ಜಿತ ನೀನೆ ಘನಸೌಖ್ಯಾಕರ ನೀನೆ ಅನುದಿನಲಿಗನುಕೂಲ ನೀನೆ ದೀನ ಮಹಿಪತಿಸ್ವಾಮಿ ಭಾನುಕೋಟಿ ತೇಜನೆ ಮನೋಹರ ಮಾಡುವ ಮಹಾಮಹಿಮ ನೀನೆ 3
****