Showing posts with label ಮರೆಯಬೇಡ ಮನವೇ ನೀನು ಹರಿಯ ಚರಣವ purandara vittala MAREYA BEDA MANAVE NEENU HARIYA CHARANAVA. Show all posts
Showing posts with label ಮರೆಯಬೇಡ ಮನವೇ ನೀನು ಹರಿಯ ಚರಣವ purandara vittala MAREYA BEDA MANAVE NEENU HARIYA CHARANAVA. Show all posts

Saturday 18 December 2021

ಮರೆಯಬೇಡ ಮನವೇ ನೀನು ಹರಿಯ ಚರಣವ purandara vittala MAREYA BEDA MANAVE NEENU HARIYA CHARANAVA

time 0.48


audio by student of swarapurna dallas


ಮರೆಯಬೇಡ ಮನವೆ ನೀನು |
ಹರಿಯ ಚರಣವ ಪ.

ಯಾಗ - ಯಜÕ ಮಾಡಲೇಕೆಯೋಗಿ - ಯತಿಯು ಆಗಲೇಕೆ |
ನಾಗಶಯನ ನಾರದವಂದ್ಯನಕೂಗಿ ಭಜನೆಮಾಡುಮನುಜ1

ಸತಿಯು ಸುತರು ಹಿತರು ಎಂದುಮತಿಯು ಕೆಟ್ಟು ತಿರುಗಲೇಕೆ |
ಗತಿಯು ತಪ್ಪಿ ಹೋಗುವಾಗಸತಿಸುತರು ಬಾಹೊರೇನೊ ? 2

ಹರಿಯ ಸ್ಮರಣೆ ಮಾತ್ರದಿಂದದುರಿತ ಘೋರವೆಲ್ಲ ನಾಶ
ಪರಮಪುರುಷ ಪುರಂದರವಿಠಲಪರದಪದವಿಕೊಡುವನೊ3
****

ರಾಗ ಶಂಕರಾಭರಣ ರೂಪಕ ತಾಳ (raga, taala may differ in audio)

Mareyabeda manave ninu
Hariya smaraneya ||pa||

Yaga yaj~ja madaleke
Yogi yatiyu agaleke
Nagasayana naradavandyana
Kugi Bajane mado bege ||1||

Satiyu sutaru hitaru endu
Matiyagettu kedalibeda
Gatiyu tappi hoguvaga
Satiyu sutaru bahorenu ||2||

Hariya smarane matradinda
Gora duritavella nasa
Paramapurusha puranmdaravithala
Padavi koduva pavananayya ||3||
***

pallavi

mareya bEDa manave nInu hariya caraNava aruNa kiraNa caraNa sharaNa pAdaka pAvana

caraNam 1

sAdhu sajjana sangava mADi vEda shAsravanOdu nI
mOdadindali vEdagamyana pAdapankaja dhyAnisO

caraNam 2

satiyu sutaru gatiyu endu matiyu keTTu tiruga bEDa
matiyu keTTu hOda mEle satiyu sutaru baruvarEnu

caraNam 3

mAnuSa janma durlabhavidu mAdhavana krpeyali bandide
hIna janara kUDi nInu hAni mADi koLalu bEDa

caraNam 4

bandha pagaDeyADi nInu vyartta kAla kaLeyabEDa
antakana dUtarige lEsha karuNa villavayya

caraNam 5

yAga yagjna mADalEke yOgi yatiyu AkalEke
nAga shayana nArada vandyana kUgi bhajane mADu bEga

caraNam 6

gOpurada kombeyante grAma gruha rakSipenendu
tApa paDuta hagalu iruLu tAmasa janara kUDade

caraNam 7

hariya smaraNe mAtradinda ghOra duritavella nAsha
varada purandara viTTalanna nirata bhajane mADu bEga
***

pallavi

mareya bEDa | manavE neenu | hariya sharaNa- | va ... ||

caraNam 1

yaaga yagnya | maaDa lEke || ,,yOgi yadiyu | aaga lEke || naaga shayana | naarada vandyana || koogi bhajane | maaDu manuja || (mareya) ||

caraNam 2

satiyu sudaru | hidaru yendu || ,,matiya keTTu | tiruga lEke || gatiyu tappi hOguvaaga sati suturu paruva rEnO || (mareya) ||

caraNam 3

hariya smaraNe | maatradinda || durita kulishaga Lella naasha || parama purusha purandara viThala || parama padavi koDuvanO || (mareya)
***

ಮರೆಯ ಬೇಡ ಮನವೆ ನೀನು, ಹರಿಯ ಚರಣವ
ಅರುಣ ಕಿರಣ ಚರಣ ಶರಣ, ಪಾತಕ ಪಾವನ ||ಪ ||

ಸಾಧು ಸಜ್ಜನ ಸಂಗವ ಮಾಡಿ, ವೇದ ಶಾಸ್ತ್ರವನೋದು ನೀ
ಮೋದದಿಂದಲಿ ವೇದಗಮ್ಯನ ಪಾದಪಂಕಜ ಧ್ಯಾನಿಸೋ ||

ಸತಿಯು ಸುತರು ಗತಿಯು ಎಂದು, ಮತಿಯು ಕೆಟ್ಟು ತಿರುಗ ಬೇಡ
ಮತಿಯು ಕೆಟ್ಟು ಹೋದ ಮೇಲೆ, ಸತಿಯು ಸುತರು ಬರುವರೇನು ||

ಮಾನುಷಜನ್ಮ ದುರ್ಲಭವಿದು, ಮಾಧವನ ಕೃಪೆಯಲಿ ಬಂದಿದೆ
ಹೀನಜನರ ಕೂಡಿ ನೀನು, ಹಾನಿ ಮಾಡಿಕೊಳಲುಬೇಡ ||

ಪಂಥ ಪಗಡೆಯಾಡಿ ನೀನು, ವ್ಯರ್ಥ ಕಾಲ ಕಳೆಯಬೇಡ
ಅಂತಕನ ದೂತರಿಗೆ ಲೇಶ ಕರುಣವಿಲ್ಲವಯ್ಯ ||

ಯಾಗಯಜ್ಞ ಮಾಡಲೇಕೆ, ಯೋಗಿಯತಿಯು ಆಗಲೇಕೆ
ನಾಗಶಯನ ನಾರದವಂದ್ಯನ, ಕೂಗಿ ಭಜನೆ ಮಾಡು ಬೇಗ ||

ಗೋಪುರದ ಗೊಂಬೆಯಂತೆ, ಗ್ರಾಮ ಗೃಹ ರಕ್ಷಿಪೆನೆಂದು
ತಾಪ ಪಡುತ ಹಗಲು ಇರುಳು, ತಾಮಸ ಜನರ ಕೂಡದೆ ||

ಹರಿಯ ಸ್ಮರಣೆ ಮಾತ್ರದಿಂದ, ಘೋರ ದುರಿತವೆಲ್ಲ ನಾಶ
ವರದ ಪುರಂದರವಿಠಲನ, ನಿರತ ಭಜನೆ ಮಾಡು ಬೇಗ ||
********

ರಾಗ :  ಪೂರ್ವಿ     ತಾಳ : ರೂಪಕ 

ಮರೆಯಬೇಡ ಮನವೇ ನೀನು 
ಹರಿಯ ಸ್ಮರಣೆಯಾ                       ।।ಪ।।

ಯಾಗ ಯಜ್ಞ ಮಾಡಲೇಕೆ 
ಯೋಗಿ ಯತಿಯು ಆಗಲೇಕೆ 
ನಾಗಶಯನ ನಾರದವಂದ್ಯನ 
ಕೂಗಿ ಭಜನೆ ಮಾಡೊ ಬೇಗೆ            ।।೧।।

ಸತಿಯು ಸುತರು ಹಿತರು ಎಂದು 
ಮತಿಯಗೆಟ್ಟು ಕೆಡಲಿಬೇಡ 
ಗತಿಯು ತಪ್ಪಿ ಹೋಗುವಾಗ 
ಸತಿಯು ಸುತರು ಬಾಹೊರೇನು        ।।೨।।

ಹರಿಯ ಸ್ಮರಣೆ ಮಾತ್ರದಿಂದ 
ಘೋರ ದುರಿತವೆಲ್ಲ ನಾಶ 
ಪರಮಪುರುಷ ಪುರಂದರವಿಠಲ 
ಪದವಿ ಕೊಡುವ ಪವನನಯ್ಯ            ।।೩।।
****

ಮರೆಯಬೇಡ ಮನವೇ ನೀನು ಹರಿಯ ಸ್ಮರಣೆಯ ||

ಸತಿಯು ಸುತರು ಹಿತರು ಎಂದು
ಮತಿಯು ಕೆಟ್ಟು ತಿರುಗಲೇಕೆ
ಗತಿಯು ತಪ್ಪಿ ಹೋಗುವಾಗ
ಸತಿಯು ಸುತರು ಬರುವರೇನು || ೧ ||

ಹರಿಯ ಸ್ಮರಣೆ ಮಾತ್ರದಿಂದ
ಘೋರ ದುರಿತವೆಲ್ಲ ನಾಶ
ಪರಮಪುರುಷ ಪುರಂದರವಿಠಲ
ಪದವಿ ಕೊಡುವ ವರದನಯ್ಯ || ೨ ||
***

MareyabEDa manave nInu hariya smaranNeya ||

satiyu sutaru hitaru eMdu
matiya keTTu tirugalEke
gatiyu tappi hOguvAga
satiyu sutaru baruvarEnu ||1||

hariya smaraNe mAtradiMda
GhOra duritavella nAsha
paramapuruSha puraMdaraviThala
padavi koDuva varadanayya ||2||
***