ಬಾರನ್ಯಾತಕ ಯದು ವೀರಾ|ಪದಾಂಬು ಜವದೋರಾ| ದಯರಸವಾಬೀರಾ| ಸಾರಿದವರಿಗಿನ್ನುದರಾವಾಗಿರಾ ಧೀರಾ ಪ
ಮಂದ ಮುಗುದೆಯು ನಾನೆಂದು ಅರಿತು ಮೊದಲಿಂದು| ಕೈಯ್ಯ ಪಿಡಿದು ಬಂದು| ಕುಂದಾಲಿಸುವ ದಯಸಿಂಧು|ಉಚಿತ ವೇನಿಂದು 1
ಎನ್ನ ಬಿನ್ನಹ ಹೇಳಲೇ ಜಾಣೇ| ತಾಪಕೌಷಧಕಾಣೆ| ಕ್ಷಣಯುಗವ ನಿನ್ನಾಣೆ| ಮನ್ನಿಸಿ ತಂದು ತೋರಿನ್ನೆನೆ ಬಾರೇ ಪ್ರವೀಣೇ 2
ಶರಣ ಹೊಕ್ಕವರೆಂದು ಮರೆಯಾ|ನೆಂಬ ಮಾತಿದು ಖರೆಯಾ ಬಂದು ಕೂಡಿದ ತ್ವರಿಯಾ| ಗುರು ಮಹಿಪತಿ ಸ್ವಾಮಿಚರಿಯಾ ಬೊಮ್ಮತಾನರಿಯಾ 3
***