Wednesday, 1 September 2021

ಬಾರನ್ಯಾತಕ ಯದು ವೀರಾಪದಾಂಬು ಜವದೋರಾ ankita mahipati

 ಬಾರನ್ಯಾತಕ ಯದು ವೀರಾ|ಪದಾಂಬು ಜವದೋರಾ| ದಯರಸವಾಬೀರಾ| ಸಾರಿದವರಿಗಿನ್ನುದರಾವಾಗಿರಾ ಧೀರಾ ಪ 


ಮಂದ ಮುಗುದೆಯು ನಾನೆಂದು ಅರಿತು ಮೊದಲಿಂದು| ಕೈಯ್ಯ ಪಿಡಿದು ಬಂದು| ಕುಂದಾಲಿಸುವ ದಯಸಿಂಧು|ಉಚಿತ ವೇನಿಂದು 1 

ಎನ್ನ ಬಿನ್ನಹ ಹೇಳಲೇ ಜಾಣೇ| ತಾಪಕೌಷಧಕಾಣೆ| ಕ್ಷಣಯುಗವ ನಿನ್ನಾಣೆ| ಮನ್ನಿಸಿ ತಂದು ತೋರಿನ್ನೆನೆ ಬಾರೇ ಪ್ರವೀಣೇ 2 

ಶರಣ ಹೊಕ್ಕವರೆಂದು ಮರೆಯಾ|ನೆಂಬ ಮಾತಿದು ಖರೆಯಾ ಬಂದು ಕೂಡಿದ ತ್ವರಿಯಾ| ಗುರು ಮಹಿಪತಿ ಸ್ವಾಮಿಚರಿಯಾ ಬೊಮ್ಮತಾನರಿಯಾ 3

***


No comments:

Post a Comment