ಜಯ ಜಯ ಶ್ರೀರಘುರಾಮ | ಜಯ ಜಯ ಸೀತಾರಾಮ ||ಪ||
ಜಯ ಜಯ ಭಜಕರ ಭಯಹರ ತ್ವತ್ಪದ | ದಯದಲಿ ತೋರಿಸೊ ರಾಮ ||ಅ.ಪ||
ದಶರತನೃಪಸುತ ದಶಕಂಧರ ಮುಖ್ಯ ನಿಶಿಚರಕುಲನಿರ್ಧೂಮ
ಸುರರರ್ಥಿತ ಹರಿ ಧರೆಯೊಳು ತಾನವ ತರಿಸಿದ ರಘಕುಲರಾಮ ||೧||
ದಶರಥನೃಪಸುತ ಶಿಶುಭಾವದಲಿ ವಸಮತಿ ಮೋಹಿಪ- ರಾಮ ||೨||
ಸುಂದರಸ್ವಾನನ ದಿಂದಲಿ ಜನಕಾನಂದವ ಬೀರಿದ-ರಾಮ ||೩||
ಒಂದಿನ ಮುನಿವರ ಬಂದಾನೃಪವರಕಂದನ ಪ್ರಾರ್ಥಿಸೆ-ರಾಮ ||೪||
ತಂದೆಗೆ ತಾನಭಿವಂದಿಸಿ ಮುನಿಸಹ ನಂದದಿ ನಡೆದನು-ರಾಮ ||೫||
ದನುಜರ ಸದೆದಾಮೂನಿಮಖ ಪೊರೆದ ಇನಕುಲಸಂಭವ- ರಾವು ||೬||
ಶಿಲೆಯನು ತನ ಪದಜಲಜದಲಿಂದ ಲಲನೆಯ ಮಾಡಿದ-ರಾವು ||೭||
ಇನಿಯನಿಂದಲಾ ವನಿತೆಯಗೂಡಿಸಿ ಮುನಿಸಹ ನಡೆದನು-ರಾಮ ||೮||
ಜನಕನ ಪುರವನು ಅನುಜನ ಸಹಿತದಿ ಮುನಿಯೊಡನೈದಿದ-ರಾಮ ||೯||
ನರವರಸಭೆಯಲಿ ಗಿರಿಶನ ಧನುವನು ಮುರಿದನು ರಾಘವ-ರಾಮ ||೧೦||
ಕ್ಷೋಣೀಶನ ಪಣಕ್ಷೀಣಿಸಿ ಸೀತೆಯ ಪಾಣಿಯ ಪಿಡಿದನು-ರಾಮ ||೧೧||
ಸುದತಿಯು ನೀಡಿದ ಪದುಮದ ಮಾಲೆಯ ಮುದದಲಿ ಧರಿಸಿದ-ರಾಮ ||೧೨||
ಜಾನಕಿ ಸೊಗಸಿನ ಆನನಕಮಲಕೆ ಭಾನುಮನಾದನು-ರಾಮ ||೧೩||
ಮಾರ್ಗಮಧ್ಯದಿ ಭಾರ್ಗವ ಬರಲು ಮಾರ್ಗಣ ಎಸೆದನು-ರಾಮ ||೧೪||
ಲಕ್ಮಸತಿಯೂತ ಲಕ್ಮಣ ಸಹಿತದಿ ತಕ್ಮಣ ನದೆದನು -ರಾಮ ||೧೫||
ಸೀತೆಯ ಸಹ ಸಾಕೇತದ ಜನರಿಗೆ ಪ್ರೀತಿಯಗೊಳಿಸಿದ-ರಾಮ ||೧೬||
ಧ್ವರಿತನಪಟ್ಟವ ಭರತಗೆ ನೇಮಿಸಿ ತ್ವರದಲಿ ನಡೆದನು-ರಾಮ ||೧೭||
ಖರಮುಖದನುಜರ ತರಿದಾ ರಘುವರ ಚರಿಸಿದ ವನವನ-ರಾಮ ||೧೮||
ರಾಕ್ಷಸರಾವಣ ವೀಕ್ಷಿಸಿ ಸೀತೆಯ ನಾಕ್ಷಣ ವೈದನು-ರಾಮ ||೧೯||
ಪೊಡವಿತನಯಳ ಪುಡುಕುವ ನೆವೆದಿ ಅಡವಿಯ ಚರಿಸಿದ- ರಾಮ||೨೦||
ಅರಸುತ ಬರುತಿಗೆ ಗಿರಿಯಲಿ ಅಂಜನೆ ತರುಳನ ಕಂಡನು-ರಾಮ ||೨೧||
ಅನುಪಮ ಕರುಣದಿ ಹನುಮನ ಗ್ರಹಿಸಿದ ಇನಕೂಲಸಂಭವ – ರಾಮ ||೨೨||
ಶೀಲ ಬಹುಬಲಶಾಲಿ ಎನಿಸಿಹ ವಾಲಿಯ ಕೊಂದನು-ರಾಮ ||೨೩||
ವನಿತೆಯ ಗೋಸುಗ ಹನುಮನು ವೇಗದಿ ವನಧಿಯ ದಾಟಿದ-ರಾಮ ||೨೪||
ಬಿಂಕದಿ ಹನುಮನು ಲಂಕೆಯ ಪೊಕ್ಕು ಮಂಕು ದನುಜರ-ರಾಮ ||೨೫||
ವನಗಿರಿ ದುರ್ಗದಿ ವನಜಾಕ್ಷಿಯನು ಮನದಣಿ ಪುಡಿಕಿದ-ರಾಮ ||೨೬||
ಧಾರುಣಿತನಯಳ ಸಾರುವೆನೆನುತ ಊರಲಿ ಪುಡುಕಿದ-ರಾಮ ||೨೭||
ಓಣಿಗಳೊಳು ತಾ ಕ್ಷೋಣಿತನಯಳಾ ಕಾಣದೆ ತಿರುಗಿದ-ರಾಮ ||೨೮||
ಲೋಕದ ಮಾತೆಯಾ ಶೋಕವನದೊಳಾ ಲೋಕನಗೈದನು-ರಾಮ ||೨೯||
ಕಾಮಿನಿಮಣಿಗೆ ರಾಮನ ವಾರ್ತೆಯ ಪ್ರೇಮದಿ ಪೇಳಿದ-ರಾಮ ||೩೦||
ರಾಮನ ಶುಭಕರನಾಮದ ವಾರ್ತೆಯ ಪ್ರೇಮದಿ ಪೇಳಿದ-ರಾಮ ||೩೧||
ರೂಢಿಜದೇವಿಯ ಚೂಡಾಮಣಿಯ ನೀಡುವೆನೆಂದನು-ರಾಮ ||೩೨||
ಕುಶಲದ ವಾರ್ತೆಯ ಶಶಿಮುಖಿ ಕೇಳಿ ವ್ಯಸನದಿ ನುಡಿದಳು-ರಾಮ ||೩೩||
ಕೋತಿಯೆ ಇಲ್ಲಿಗೆ ಯಾತಕೆ ಬಂದೆಯೊ ಘಾತಿಪರಸುರರು-ರಾಮ ||೩೪||
ಬಲಹೀನನು ನೀ ಬಲವಂತಸುರರು ಛಲಮಾಡದೆ ನಡಿ-ರಾಮ ||೩೫||
ಘನತರ ಲಂಕೆಗ ವನಚರ ಬಂದೆಯೊ ದನುಜರು ಕೊಲ್ವರು-ರಾಮ ||೩೬||
ರಾಕ್ಷಸಗುಣ ತಾ ವೀಕ್ಷಿಸಿ ನಿನ್ನನು ಶಿಕ್ಷೆಯ ಗೈವುದು-ರಾಮ ||೩೭||
ಮಾತೆಯೆ ತಿಳಿ ಎನಗ್ಯಾತರ ಭಯ ರಘು ನಾಥನು ಕಾಯುವ-ರಾಮ ||೩೮||
ಆಖಣಾಶಮ ನಾರಾಯನ ದಯದಲಿ ನೀ ಕರುಣಿಸಿ ತಾಯೆ-ರಾಮ ||೩೯||
ಮುತಾತ್ಮಜ ತಾ ಭರದಲಿ ನಡೆದು ತರುಗಳ ಕಿತ್ತಿದ-ರಾಮ ||೪೦||
ಅಶೊಕವನದ ಸಶೊಕವರ್ಥೆಯ ನಿಶಿಚರ ಕೇಲಿದ- ರಾಮ||೪೧||
ಕೋತಿಯ ಹಿಡಿಯಲು ಕಾತುರದಿಂದಲಿ ದೂತರು ಕಳುಹಿದ-ರಾಮ ||೪೨||
ಲಕ್ಷ್ಯಮಾಡದೆ ತಕ್ಷಣ ಕೋತಿಯ ಶಿಕ್ಷಿಪೆನೆನುತಲಿ-ರಾಮ ||೪೩||
ಬಂದಾ ರಾವಣಕಂದನ ನೋಡಿ ನಂದದಿ ನಲಿದನು-ರಾಮ ||೪೪||
ಅಕ್ಷಕುಮಾರನ ಲಕ್ಷಿಯ ಮಾಡದೆ ತಕ್ಷಣ ಕೊಂದನು-ರಾಮ ||೪೫||
ಯುದ್ಧದಲತಿ ಸನ್ನದ್ಧರಾದ ಪ್ರಸಿದ್ಧ ದಿತಿಜರು-ರಾಮ ||೪೬||
ಶಕ್ತಿಯು ಸಾಲದಶಕ್ತರಾಗಿ ಬಹುಯುಕ್ತಿಯ ಮಾಡ್ದರು-ರಾಮ ||೪೭||
ಇಂದ್ರಾರಾತಿಯು ನಂದದಿ ಬಂದು ನಿಂದನು ರಣದಲಿ-ರಾಮ ||೪೮||
ಬೊಮ್ಮನಸ್ತ್ರವ ಘಮ್ಮನೆ ಹಾಕಲು ಸುಮ್ಮನೆ ಸಿಕ್ಕನು-ರಾಮ ||೪೯||
ಮಾತೆಯ ಕಂಡಾರಾತಿಯ ಪುರವರ ನಾಥನ ಕಂಡನು-ರಾಮ ||೫೦||
ಮೂರ್ಖಾಗ್ರಣಿ ಕೇಳ್ ಲೇಖಾಗ್ರಣಿ ಶಿರಿ ಕಾಕುತ್ಸ್ಥಾನ್ವಯ-ರಾಮ ||೫೧||
ರಾಮನ ಪದಯುಗತಾಮರಸಕೆ ನಾ ಪ್ರೇಮದ ಭಕ್ತನು-ರಾಮ ||೫೨||
ಶ್ರೀನಿಧಿರಾಮನ ಮಾನಿನಿತಸ್ಕರ ದಾನವ ಕೇಳೆಲೊ-ರಾಮ ||೫೩||
ದುಷ್ಥನೆ ತಿಳಿ ನೀ ಸೃಷ್ಟಿಯೆ ಮೊದಲಾ ದಷ್ಠಕಕರ್ಥನು-ರಾಮ ||೫೪||
ಭ್ರಷ್ಥರಾವಣ ಸುರಶ್ರೇಷ್ಠನ ವೈರದಿ ನಷ್ಟನು ನೀನಾಗುವಿ-ರಾಮ ||೫೫||
ಜಾನಕಿರಮಣನು ಮಾನವನಲ್ಲವೊ ದಾನವಾಂತಕನು-ರಾಮ ||೫೬||
ಬಲವದ್ದ್ವಾಷವು ಸುಲಭಲ್ಲವೊ ತವ ಕುಲನಾಶಾಗೊದೊ-ರಾಮ ||೫೭||
ಕಾನನಕೋತಿಯೆ ಏನಾಡಿದಿ ನುಡಿ ಹಾನಿಯ ಮಾಡವೆ-ರಾಮ ||೫೮||
ಆ ಕ್ಷಣ ರಾವಣ ರಾಕ್ಷಸಜನರಿಗೆ ಶಿಕ್ಷಿಸಿರೆಂದನು-ರಾಮ ||೫೯||
ಕೋತಿಯ ಕೊಂದರೆ ಪಾತಕ ಬಪ್ಪೊದು ಘಾತವು ಸಲ್ಲದು-ರಾಮ ||೬೦||
ತರುವರನೇರಿದ ವಾನರಬಾಲದಿ ತರುವೈರಿಯನಿಟ್ಟರು-ರಾಮ ||೬೧||
ಹರಿವರ ತಾನೇ ಉರಿಯಲಿ ಲಂಕಾ ಪುರವನು ದಹಿಸಿದ-ರಾಮ ||೬೨||
ವಾನರನಾಥನು ಕಾನನ ಸುರವರ ರಾನನಕಿತ್ತನು-ರಾಮ ||೬೩||
ದಿತಿಜತತಿಯನು ಹತಗೈದಾ ಕಪಿ ನತಿಸಿದ ಸಾತೆಗೆ-ರಾಮ ||೬೪||
ಸಾಗರಲಂಘಿಸಿ ವೇಗದಿ ಬಂದು ಬಾಗಿದ ಸ್ವಾಮಿಗೆ-ರಾಮ ||೬೫||
ರಾಮನ ಪದಕೆ ಪ್ರೇಮದಿ ವಿಸಿವು ತಿಳಿಸಿ- ರಾಮ ||೬೬||
ಕಾಮಿನಿಕೊಟ್ಟಿಹ ಹೇಮದ ರಾಗಟೆ ಸ್ವಾಮಿಗೆ ನೀಡಿದ-ರಾಮ ||೬೭||
ಗಿರಿತರುಗಳ ತಾ ತ್ವರದಲಿ ತರಿಸಿ ಶರಧಿಯ ಕಟ್ಟಿದ-ರಾಮ ||೬೮||
ಕಾಮಿನಿ ನೆವದಲಿ ರಾಮ ದನುಜರಿಗೆ ಆ ಮಹಯದ್ಧವು-ರಾಮ ||೬೯||
ಪಾವಿನ ತಾ ಸಂಜೀವನಪರ್ವತ ತೀವ್ರದಿ ತಂದನು-ರಾಮ ||೭೦||
ಸೇವಕಹನುಮನು ದೇವನ ತಮ್ಮಗೆ ಜೀವನವಿತ್ತನು-ರಾಮ ||೭೧||
ತಂದೆಯ ಪುರದಲಿ ಇಂದ್ರನ ವೈರಿಯ ಕೊಂದನು ಲಕ್ಷ್ಮಣ-ರಾಮ ||೭೨||
ಮೂಲ ಬಲವನು ಲೀಲೆಯಿಂದ ನೀ ಗೈಸಿದ- ರಾವು ||೭೩||
ಅಂಬುಗಳೆಸೆದಾ ಕುಂಭಕರ್ಣನಾ ಕುಂಭಿಣಿಗಿಳಿಸಿದ-ರಾಮ ||೭೪||
ರಾಕ್ಷಸವರ್ಯನ ವಕ್ಷೋದಾರಣ ವಾಕ್ಷಣ ಗೈಸಿದ-ರಾಮ ||೭೫||
ಗುಣಯುತ ವಿಭೀಷಣನಿಗೆ ಪಟ್ಟವ ಕ್ಷಣದಲಿ ಕಟ್ಟಿದ – ರಾಮ ||೭೬||
ಮಂದಗಮನಿ ಸಹ ನಂದಿಗ್ರಾಮಕೆ ನಂದದಿ ಬಂದನು-ರಾಮ ||೭೭||
ರಾಮನು ಸಾರ್ವಭೌಮನಾಗಿ ಈ ಭೂಮಿಯನಾಳಿದ-ರಾಮ ||೭೮||
ರಮೆಯಿಂದಲಿ ತಾ ರಮಿಸಿದ ಸೀತಾ ರಮಣನು ರಘುಕುಲ-ರಾಮ ||೭೯||
ಅಂಜನಿತನಯಗೆ ಕಂಜಜಪಟ್ಟವ ರಂಜಿಸಿ ನೀಡಿದ-ರಾಮ ||೮೦||
ರಾಜ ರಾಜ ರಾಜೀವನಯನ ತವ ಭೋಜನ ನೀಡಿದ-ರಾಮ ||೮೧||
ಕಂಜಾಕ್ಷನಪದಕಂಜಭಜಕ ಪ್ರಾಭಂಜನಸುತ ಕಪಿ-ರಾಮ ||೮೨||
ಚಂಪಕ ತರುಲತ ಕಂಪಿತ ಶುಭತರ ಕಿಂಪುರುದಿದ-ರಾಮ ||೮೩||
ಮೋದವೆ ದಕ್ಷ ಪ್ರಮೋದೋತ್ತರ ನಿಜ ಮೋದಾವಯವನು-ರಾಮ ||೮೪||
ಪೂ ರ್ಣರೂ ತಾ ಪೂರ್ಣ ಗುಣಾರ್ಣ ಪೂರ್ಣನಿ -ರಾಮ||೮೫||
ದೂತಜನರ ಗತಿದಾತನು ಗುರುಜಗನ್ನಾಥವಿಠಲನು-ರಾಮ ||೮೬||
jaya jaya SrIraGurAma | jaya jaya sItArAma ||pa||
jaya jaya Bajakara Bayahara tvatpada | dayadali tOriso rAma ||a.pa||
daSaratanRupasuta daSakaMdhara muKya niSicarakulanirdhUma
surararthita hari dhareyoLu tAnava tarisida raGakularAma ||1||
daSarathanRupasuta SiSuBAvadali vasamati mOhipa- rAma ||2||
suMdarasvAnana diMdali janakAnaMdava bIrida-rAma ||3||
oMdina munivara baMdAnRupavarakaMdana prArthise-rAma ||4||
taMdege tAnaBivaMdisi munisaha naMdadi naDedanu-rAma ||5||
danujara sadedAmUnimaKa poreda inakulasaMBava- rAvu ||6||
Sileyanu tana padajalajadaliMda lalaneya mADida-rAvu ||7||
iniyaniMdalA vaniteyagUDisi munisaha naDedanu-rAma ||8||
janakana puravanu anujana sahitadi muniyoDanaidida-rAma ||9||
naravarasaBeyali giriSana dhanuvanu muridanu rAGava-rAma ||10||
kShONISana paNakShINisi sIteya pANiya piDidanu-rAma ||11||
sudatiyu nIDida padumada mAleya mudadali dharisida-rAma ||12||
jAnaki sogasina Ananakamalake BAnumanAdanu-rAma ||13||
mArgamadhyadi BArgava baralu mArgaNa esedanu-rAma ||14||
lakmasatiyUta lakmaNa sahitadi takmaNa nadedanu -rAma ||15||
sIteya saha sAkEtada janarige prItiyagoLisida-rAma ||16||
dhvaritanapaTTava Baratage nEmisi tvaradali naDedanu-rAma ||17||
KaramuKadanujara taridA raGuvara carisida vanavana-rAma ||18||
rAkShasarAvaNa vIkShisi sIteya nAkShaNa vaidanu-rAma ||19||
poDavitanayaLa puDukuva nevedi aDaviya carisida- rAma||20||
arasuta barutige giriyali aMjane taruLana kaMDanu-rAma ||21||
anupama karuNadi hanumana grahisida inakUlasaMBava – rAma ||22||
SIla bahubalaSAli enisiha vAliya koMdanu-rAma ||23||
vaniteya gOsuga hanumanu vEgadi vanadhiya dATida-rAma ||24||
biMkadi hanumanu laMkeya pokku maMku danujara-rAma ||25||
vanagiri durgadi vanajAkShiyanu manadaNi puDikida-rAma ||26||
dhAruNitanayaLa sAruvenenuta Urali puDukida-rAma ||27||
ONigaLoLu tA kShONitanayaLA kANade tirugida-rAma ||28||
lOkada mAteyA SOkavanadoLA lOkanagaidanu-rAma ||29||
kAminimaNige rAmana vArteya prEmadi pELida-rAma ||30||
rAmana SuBakaranAmada vArteya prEmadi pELida-rAma ||31||
rUDhijadEviya cUDAmaNiya nIDuveneMdanu-rAma ||32||
kuSalada vArteya SaSimuKi kELi vyasanadi nuDidaLu-rAma ||33||
kOtiye illige yAtake baMdeyo GAtiparasuraru-rAma ||34||
balahInanu nI balavaMtasuraru CalamADade naDi-rAma ||35||
Ganatara laMkega vanacara baMdeyo danujaru kolvaru-rAma ||36||
rAkShasaguNa tA vIkShisi ninnanu SikSheya gaivudu-rAma ||37||
mAteye tiLi enagyAtara Baya raGu nAthanu kAyuva-rAma ||38||
AKaNASama nArAyana dayadali nI karuNisi tAye-rAma ||39||
mutAtmaja tA Baradali naDedu tarugaLa kittida-rAma ||40||
aSokavanada saSokavartheya niSicara kElida- rAma||41||
kOtiya hiDiyalu kAturadiMdali dUtaru kaLuhida-rAma ||42||
lakShyamADade takShaNa kOtiya SikShipenenutali-rAma ||43||
baMdA rAvaNakaMdana nODi naMdadi nalidanu-rAma ||44||
akShakumArana lakShiya mADade takShaNa koMdanu-rAma ||45||
yuddhadalati sannaddharAda prasiddha ditijaru-rAma ||46||
Saktiyu sAladaSaktarAgi bahuyuktiya mADdaru-rAma ||47||
iMdrArAtiyu naMdadi baMdu niMdanu raNadali-rAma ||48||
bommanastrava Gammane hAkalu summane sikkanu-rAma ||49||
mAteya kaMDArAtiya puravara nAthana kaMDanu-rAma ||50||
mUrKAgraNi kEL lEKAgraNi Siri kAkutsthAnvaya-rAma ||51||
rAmana padayugatAmarasake nA prEmada Baktanu-rAma ||52||
SrInidhirAmana mAninitaskara dAnava kELelo-rAma ||53||
duShthane tiLi nI sRuShTiye modalA daShThakakarthanu-rAma ||54||
BraShtharAvaNa suraSrEShThana vairadi naShTanu nInAguvi-rAma ||55||
jAnakiramaNanu mAnavanallavo dAnavAMtakanu-rAma ||56||
balavaddvAShavu sulaBallavo tava kulanASAgodo-rAma ||57||
kAnanakOtiye EnADidi nuDi hAniya mADave-rAma ||58||
A kShaNa rAvaNa rAkShasajanarige SikShisireMdanu-rAma ||59||
kOtiya koMdare pAtaka bappodu GAtavu salladu-rAma ||60||
taruvaranErida vAnarabAladi taruvairiyaniTTaru-rAma ||61||
harivara tAnE uriyali laMkA puravanu dahisida-rAma ||62||
vAnaranAthanu kAnana suravara rAnanakittanu-rAma ||63||
ditijatatiyanu hatagaidA kapi natisida sAtege-rAma ||64||
sAgaralaMGisi vEgadi baMdu bAgida svAmige-rAma ||65||
rAmana padake prEmadi visivu tiLisi- rAma ||66||
kAminikoTTiha hEmada rAgaTe svAmige nIDida-rAma ||67||
giritarugaLa tA tvaradali tarisi Saradhiya kaTTida-rAma ||68||
kAmini nevadali rAma danujarige A mahayaddhavu-rAma ||69||
pAvina tA saMjIvanaparvata tIvradi taMdanu-rAma ||70||
sEvakahanumanu dEvana tammage jIvanavittanu-rAma ||71||
taMdeya puradali iMdrana vairiya koMdanu lakShmaNa-rAma ||72||
mUla balavanu lIleyiMda nI gaisida- rAvu ||73||
aMbugaLesedA kuMBakarNanA kuMBiNigiLisida-rAma ||74||
rAkShasavaryana vakShOdAraNa vAkShaNa gaisida-rAma ||75||
guNayuta viBIShaNanige paTTava kShaNadali kaTTida – rAma ||76||
maMdagamani saha naMdigrAmake naMdadi baMdanu-rAma ||77||
rAmanu sArvaBaumanAgi I BUmiyanALida-rAma ||78||
rameyiMdali tA ramisida sItA ramaNanu raGukula-rAma ||79||
aMjanitanayage kaMjajapaTTava raMjisi nIDida-rAma ||80||
rAja rAja rAjIvanayana tava BOjana nIDida-rAma ||81||
kaMjAkShanapadakaMjaBajaka prABaMjanasuta kapi-rAma ||82||
caMpaka tarulata kaMpita SuBatara kiMpurudida-rAma ||83||
mOdave dakSha pramOdOttara nija mOdAvayavanu-rAma ||84||
pU rNarU tA pUrNa guNArNa pUrNani -rAma||85||
dUtajanara gatidAtanu gurujagannAthaviThalanu-rAma ||86||
*****