ರಾಗ : ಸಾವೇರಿ ಆದಿತಾಳ
Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ " ಉಡುಪಿ ಮಧ್ವಸರೋವರ ಮಹಿಮಾ ಪದ "
ಮಧ್ವ ಸರೋವರದ ಸ್ನಾನವ ಮಾಡಿರೊ
ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು॥ಪ॥
ಕೃತಯುಗದಲಿ ಇದೇ ಅನಂತ ಸರೋವರ
ತ್ರೇತಾಯುಗದಲ್ಲಿ ವರುಣತೀರ್ಥ
ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ-
ನ್ನತ ಕಲಿಯುಗದಲ್ಲಿ ಮಹಾತೀರಿಥ ॥೧॥
ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ-
ಸ್ತರವಾಗಿ ಕೊಳುತಿಪ್ಪಳು ಉಪೇಕ್ಷದಿ
ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ
ನಿರುತದಲ್ಲಿ ತೀವ್ರಗತಿ ಕೊಡುವಳೂ॥೨॥
ಸಕಲ ವೇದಶಾಸ್ತ್ರ ಓದಿದವನಾದರೂ
ಶಕುತಿವಂತನಾಗಿ ಇದ್ದನಾಗೆ
ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು
ಶಕಲ ಮತಿಯಲಿ ಮಹಾನರಕ ಭುಂಜಿಸುವಾ ॥೩॥
ಒಂದೆ ಮಜ್ಜನ ಮಾಡೆ ಅನಂತ ಜನುಮಕೆ
ತಂದು ಕೊಡುವದು ನರಗೆ ಮಿಂದ ಫಲವೊ
ಎಂದೆಂದಿಗೆ ಇಲ್ಲಿ ಬಿಡದೆ ವಾಸವಾದ
ಮಂದಿಗಳ ಪುಣ್ಯ ಪ್ರತಾಪ ಎಣಿಸುವರಾರು ॥೪॥
ಆದಿಯಲ್ಲಿ ಇದ್ದ ಲಿಂಗ ಶರೀರವು
ಛೇದಿಸುವದಕೆ ಇದೇ ಸ್ನಾನವೆನ್ನಿ
ಮೋದ ಮೂರುತಿ ನಮ್ಮ ವಿಜಯವಿಠ್ಠಲ ಕೃಷ್ಣ
ಭೇದಾರ್ಥ ಮತಿಕೊಟ್ಟ ಖೇದವನು ತೊಲಗಿಸುವಾ॥೫॥
***
Madhva sarōvarada snānava māḍiro bud’dhivantaru kēḷi idara mahātmeyanu ||pa||
kr̥tayugadali idē ananta sarōvara trētāyugadalli varuṇatīrtha kṣitiyoḷage dvāparadi candra puṣkaraṇi u- nnata kaliyugadalli mahā tīritha ||1||
suranadī mikkāda sthānadali sēve vi- staravāgi koḷutippaḷu upēkṣadi dhareyoḷage illi guru madhvamuni sarvārtha nirutadalli tīvragati koḍuvaḷū||2||
sakala vēdaśāstra ōdidavanādarū śakutivantanāgi iddanāge sukha tīrtha sarōvarada snāna māḍadiralu śakala matiyali mahānaraka bhun̄jisuvā ||3||
onde majjana māḍe ananta janumake tandu koḍuvadu narage minda phalavo endendige illi biḍade vāsavāda mandigaḷa puṇya pratāpa eṇisuvarāru ||4||
ādiyalli idda liṅga śarīravu chēdisuvadake idē snānavenni mōda mūruti nam’ma vijayaviṭhṭhala kr̥ṣṇa bhēdārtha matikoṭṭa bhēdavanu tolagisuvā||5||
***
ವಿಜಯದಾಸ
ಮಧ್ವ ಸರೋವರದ ಸ್ನಾನವ ಮಾಡಿರೊ
ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು ಪ
ತ್ರೇತಾಯುಗದಲ್ಲಿ ವರುಣತೀರ್ಥ
ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ-
ನ್ನತ ಕಲಿಯುಗದಲ್ಲಿ ಮಹಾ ತೀರಿಥ 1
ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ-
ಸ್ತರವಾಗಿ ಕೊಳುತಿಪ್ಪಳು ಉಪೇಕ್ಷದಿ
ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ
ನಿರುತದಲ್ಲಿ ತೀವ್ರಗತಿ ಕೊಡುವಳೂ2
ಸಕಲ ವೇದಶಾಸ್ತ್ರ ಓದಿದವನಾದರೂ
ಶಕುತಿವಂತನಾಗಿ ಇದ್ದನಾಗೆ
ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು
ಶಕಲ ಮತಿಯಲಿ ಮಹಾನರಕ ಭುಂಜಿಸುವಾ 3
ಮಜ್ಜನ ತಂದು ಕೊಡುವದು ನರಗೆ ಮಿಂದ ಫಲವೊ
ಎಂದೆಂದಿಗೆ ಇಲ್ಲಿ ಬಿಡದೆ ವಾಸವಾದ
ಮಂದಿಗಳ ಪುಣ್ಯ ಪ್ರತಾಪ ಎಣಿಸುವರಾರು 4
ಛೇದಿಸುವದಕೆ ಇದೇ ಸ್ನಾನವೆನ್ನಿ
ಮೋದ ಮೂರುತಿ ನಮ್ಮ ವಿಜಯವಿಠ್ಠಲ ಕೃಷ್ಣ
ಭೇದಾರ್ಥ ಮತಿಕೊಟ್ಟ ಭೇದವನು ತೊಲಗಿಸುವಾ5
********