Showing posts with label ಬಂದರ್ನೋಡೀ ಸುಂದರ್ತುಲಶೀರಾಮದಾಸರ್ಬಂದರು tulasiramadasa. Show all posts
Showing posts with label ಬಂದರ್ನೋಡೀ ಸುಂದರ್ತುಲಶೀರಾಮದಾಸರ್ಬಂದರು tulasiramadasa. Show all posts

Sunday, 5 September 2021

ಬಂದರ್ನೋಡೀ ಸುಂದರ್ತುಲಶೀರಾಮದಾಸರ್ಬಂದರು ankita tulasiramadasa

 ಚನ್ನಪಟ್ಟಣದ ಅಹೋಬಲದಾಸರು


ಬಂದರ್ನೋಡೀ ಸುಂದರ್ತುಲಶೀರಾಮದಾಸರ್ಬಂದರು ಪ 


ಅಂದದೆಮ್ಮಾಕಂದರ್ಪಾಲಿಸೆಂದರ್ ತಾವೇ ಚಂದಾದಿಂದಾ ಇಂದ್ರರ್ಪದವಿಗಾಗಿ ಬೇಗಾ 1 

ಭಕ್ತಿ ಮುಕ್ತಿ ಯೆರಡಕ್ಕೊಂದೆಯುಕ್ತಿ ತೋರಿ ಮತ್ತೆ ತಾನ್ ಭಕ್ತಿಜ್ಞಾನ ಯೇತನ್ಮಧ್ಯೆ ಹೊಕ್ಕಿ ಶಕ್ತರಾಗಿ ಬೇಗಾ 2 

ಆಟಾಪಟಾವೆಂಬಳ ಕಳ್ಳ ಬೂಟಕಂಗಳನ್ನು ಬಿಡಿಸಿ ಸಾಟಿಯಾಗದ ತ್ರಿಕೂಟಮೆಂಬಟರಾರ್ಭಟಾ ತೋರಲ್ ಬೇಗಾ3 

ಪಕ್ಷೇಂದ್ರನೇರಿ ಬಂದ ಯಕ್ಷರಕ್ಷನಾಗಿ ನಿಂದಾ ಸಾಕ್ಷಿ ಕೇಳುವಂತಾ ಅಡಿಯರ್ಗಾಕ್ಷಣವೆ ಮೋಕ್ಷ ತೋರಲ್ 4 

ಆಶಪಾಶವೆಂಬೊದನ್ನು ನಾಶಮಾಡೊ ಈಶನಾಮಾ ದಾಸನಾದವರ್ಗೆ ಸಾಶಿರಾಂಗಾವಾಗಿ ಬೇಗಾ 5

***