Showing posts with label ಮುಕುತಿ ತಮಸು ಎರಡಿಲ್ಲೆ ಕಂಡ್ಯಾ ಮುಕುತಿ ಬೇರೆ vijaya vittala. Show all posts
Showing posts with label ಮುಕುತಿ ತಮಸು ಎರಡಿಲ್ಲೆ ಕಂಡ್ಯಾ ಮುಕುತಿ ಬೇರೆ vijaya vittala. Show all posts

Wednesday, 16 October 2019

ಮುಕುತಿ ತಮಸು ಎರಡಿಲ್ಲೆ ಕಂಡ್ಯಾ ಮುಕುತಿ ಬೇರೆ ankita vijaya vittala

ವಿಜಯದಾಸ
ಮುಕುತಿ ತಮಸು ಎರಡಿಲ್ಲೆ ಕಂಡ್ಯಾ
ಮುಕುತಿ ಬೇರೆ ತಮಸು ಬೇರಿಲ್ಲ ಕಂಡ್ಯಾ ಪ

ಗುರುಪಾದ ಒಡಗೊಂಡು ಮರುತ ಶಾಸ್ತ್ರವ ನೋಡಿ
ಹರಿಯ ಗುಣಂಗಳ ಕೊಂಡಾಡುತ
ಪರಮ ಉತ್ತಮರು ಬರಲು ಬನ್ನಿ ಬನ್ನೆಂದು
ಎರಗಿ ತಕ್ಕೈಸಿ ಕೊಂಡುಂಬುವದೆ ಮುಕ್ತಿ 1

ನಾನು ನೀನು ಎಂದು ಜ್ಞಾನವನೆ ತಿಳಿಕೊಂಡು
ತಾ ನಿಲ್ಲದಿಲ್ಲೆಂದು ಪೇಳಿಕೊಂಬಾ
ಈ ನಾಡಿನೊಳಗಿವ ಹೀನವನು ಎಂಬರ್ಥ
ಈ ನುಡಿ ಎನಿಸಿಕೊಂಬುದೆ ತಮಸು 2
ಒಂದರೊಳಾನಂತ ಅನಂತದಲಿ ಒಂದು
ಒಂದೊಂದು ಅನಂತ ಹರಿಪ್ರೇರಕ
ಎಂದು ಗ್ರಹಿಸಿ ಹರಿಗುರು ಹರಿದ್ವೇಷಿಗಳನ್ನ
ನಿಂದಕವಾಗಿ ಬಾಳುವದೆ ಮುಕ್ತಿ 3

ಅನ್ನದಾ ಸಮಯ ಇಲ್ಲದೆ ಕಂಡಲ್ಲಿ
ತಿನ್ನಲೋಡಿ ಸಮಯವೆನ್ನದೆ
ಅನ್ಯರ ಬದುಕ ಪಹರಿಸುವ ಖಲು
ಗನ್ನ ಫಾತಕನೆನಿಸಿಕೊಂಬುವದೆ ತಮಸು 4

ಮೀಸಲಾ ಮನದಲ್ಲಿ ವಾಸುದೇವನ ನಿಜ
ವಾಸರದಲ್ಲಿ ಜಾಗರಾ ಮಾಡುವಾ
ಆಶೆಬಡಕನಲ್ಲ ದೇಶದೊಳಗೆ ಹರಿ
ದಾಸನೆಂದು ಪೇಳುವುದೆ ಮುಕ್ತಿ 5

ವ್ರತವಿಲ್ಲ ವಾವಿಲ್ಲ ಮತಿ ಮೊದಲು ಇಲ್ಲಾ
ಕಥಾಶ್ರವಣ ಒಂದು ಕೇಳಲಿಲ್ಲ
ಪಿತ ಮಾತರನ್ನ ಬೊಗಳುವ ನಾಯಿ ಕು
ತ್ಸಿತನು ಎಂದೆನಿಸುವದೆ ತಮಸು 6

ಗುಣ ಒಳ್ಳೇದು ನೀತಿ ಮನ ಒಳ್ಳೇದು ಅಜ
ತೃಣ ಜೀವಾದಿಯ ಭೇದಬಲ್ಲನಿವ
ಗಣನೆಮಾಡ ವಿಜಯವಿಠ್ಠಲನಲ್ಲದೆ
ಕ್ಷಣ ಹೀಗೆ ಎಂದೆನಿಸುವದೆ ಮುಕ್ತಿ 7
**********