by ಗೋವಿಂದದಾಸ
ತೂಗಿದಳೆಶೋದಾದೇವಿ ಬಾಲಕನಾಸಾಗರ ಶಯನನ ಜೋಗುಳ ಹಾಡಿ ಪ
ಪುಟ್ಟಿದ್ಹನ್ನೊಂದನೆ ದಿವಸ ಶ್ರೀಕೃಷ್ಣನಾತೊಟ್ಟಿಲೊಳಗಿಟ್ಟು ಸಂತೋಷದಿ ಮಗನ ಅ.ಪ
ಜೋಜೋ ಸುಗುಣಶೀಲ ಗೋಪಾಲಜೋಜೋ ಯದುಕುಲ ಬಾಲ ಶ್ರೀಲೋಲನೆ ಎನುತಾ 1
ರಂಗ ಕೃಪಾಂಗ ಶ್ರೀರಂಗನೆ ಜೋಜೋಅಂಗಜಪಿತ ನರಸಿಂಗನೆ ಜೋ ಎಂದು 2
ನಂದನ ಕಂದನೆ ಜೋಜೋ ಗೋವಿಂದಾಮಂದರಗಿರಿಧರ ಜೋಜೋ ಎಂದೆನುತಾ 3
********