ಉಬ್ಬದಿರು ಉಬ್ಬದಿರು ಎಲೆ ಮಾನವ ||ಪ||
ಹೆಬ್ಬುಲಿಯಂತೆ ಯಮ ಬೊಬ್ಬಿಡುತ ಕಾದಿರುವ ||ಅಪ||
ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ
ಭೋಗಭಾಗ್ಯಗಳೆಂದು ಬಳಲಲೇಕೋ
ನಾಗಪೆಡೆ ನೆರಳಲ್ಲಿ ನಡುಗೊ ಕಪ್ಪೆಯ ರೀತಿ
ಕೂಗಿ ಚೀರಿದರೆ ನಿನ್ನಾಗ ಕೇಳುವರೆ ||೧||
ಮಾಳಿಗೆ ಮನೆಯೆಂದು ಮತ್ತೆ ಸತಿ ಸುತರೆಂದು
ಜಾಳಿಗೆ ಧನ ಧಾನ್ಯ ಪಶುಗಳೆಂದು
ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು
ಗಾಳಿಗಿಕ್ಕಿದ ದೀಪ ಬಾಳು ಬದುಕೆಲ್ಲ ||೨||
ಅಸ್ಥಿರದ ಭವದೊಳಗೆ ಅತಿಶಯಗಳೆಣಿಸದಲೆ
ವಸ್ತು ಇದರಲಿ ಕೇಳು ವೈರಾಗ್ಯವ
ವಿಸ್ತಾರಮಹಿಮ ಶ್ರೀ ಪುರಂದರವಿಠಲನ
ಸ್ವಸ್ಥಚಿತ್ತದಿ ನೆನೆದು ಮುಕ್ತಿ ಪಡೆ ಮನುಜ ||೩||
***
ubbadiru ubbadiru ele maanava ||pa||
hebbuliyaMte yama bobbiDuta kaadiruva ||apa||
saagarada tereyaMte saavu huTTiralaagi
bhOgabhaagyagaLeMdu baLalalEkO
naagapeDe neraLalli naDugo kappeya rIti
kUgi chIridare ninnaaga kELuvare ||1||
maaLige maneyeMdu matte sati sutareMdu
jaaLige dhana dhaanya pashugaLeMdu
vELe tappade tiMba kULu tanaguMTeMdu
gaaLigikkida dIpa baaLu badukella ||2||
asthirada bhavadoLage atishayagaLeNisadale
vastu idarali kELu vairaagyava
vistaaramahima shrI puraMdaraviThalana
swasthachittadi nenedu mukti paDe manuja ||3||***
ರಾಗ ಕಾಂಭೋಜ ಝಂಪೆತಾಳ (raga tala may differ in audio)
pallavi
ubbadiru ubbadiru ele mAnava
anupallavi
hebbuliyante yama bobbiDuda kAdiruva
caraNam 1
sAgarada tereyante sAvu huTTiralAgi bhOga bhAgyagaLendu baLalEkO
nAgabeDe neraLalli naDugo kappeya rIti kUgi cIridhare ninnAga kELuvare
caraNam 2
mALige maneyendu matte sati sutarendu jALIge dhana dhAnya pashagaLendu
vELe tappade dimba kULu tanaguNTendu gALigikkida dIpa bALu badukella
caraNam 3
asthirada bhavadoLage atishayagaLeNisadale vastu idarali kELu vairAgyava
vistAra mahima shrI purandara viTTalana svastha cittadi nenedu mukti paDe manuja
***
ಉಬ್ಬದಿರು ಉಬ್ಬದಿರು ಎಲೆ ಮಾನವ ||ಪ||
ಹೆಬ್ಬುಲಿಯಂತೆ ಹೆಬ್ಬುಲಿಯಂತೆ ಬೊಬ್ಬಿಡುತ ಕಾದಿರುವ ||ಅ||
ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ
ಭೋಗಭಾಗ್ಯಗಳೆಂದು ಬಳಲಲೇಕೋ
ನಾಗಹೆಡೆ ನೆರಳಲ್ಲಿ ನಡುಗೊ ಕಪ್ಪೆಯ ರೀತಿ
ಕೂಗಿ ಚೀರಿದರೆ ನಿನ್ನಾಗ ಕೇಳುವರೆ ||
ಮಾಳಿಗೆ ಮನೆಯೆಂದು ಮತ್ತೆ ಸತಿ ಸುತರೆಂದು
ಜಾಳಿಗೆ ಧನ ಧಾನ್ಯ ಪಶುಗಳೆಂದು
ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು
ಗಾಳಿಗಿಕ್ಕಿದ ದೀಪ ಬಾಳು ಬದುಕೆಲ್ಲ ||
ಅಸ್ಥಿರದ ಭವದೊಳಗೆ ಅತಿಶಯಗಳೆಣಿಸದಲೆ
ವಸ್ತು ಇದರಲಿ ಕೇಳು ವೈರಾಗ್ಯವ
ವಿಸ್ತಾರಮಹಿಮ ಶ್ರೀ ಪುರಂದರವಿಠಲನ
ಸ್ವಸ್ಥಚಿತ್ತದಿ ನೆನೆದು ಮುಕ್ತಿ ಪಡೆ ಮನುಜ ||
********
ಹೆಬ್ಬುಲಿಯಂತೆ ಹೆಬ್ಬುಲಿಯಂತೆ ಬೊಬ್ಬಿಡುತ ಕಾದಿರುವ ||ಅ||
ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ
ಭೋಗಭಾಗ್ಯಗಳೆಂದು ಬಳಲಲೇಕೋ
ನಾಗಹೆಡೆ ನೆರಳಲ್ಲಿ ನಡುಗೊ ಕಪ್ಪೆಯ ರೀತಿ
ಕೂಗಿ ಚೀರಿದರೆ ನಿನ್ನಾಗ ಕೇಳುವರೆ ||
ಮಾಳಿಗೆ ಮನೆಯೆಂದು ಮತ್ತೆ ಸತಿ ಸುತರೆಂದು
ಜಾಳಿಗೆ ಧನ ಧಾನ್ಯ ಪಶುಗಳೆಂದು
ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು
ಗಾಳಿಗಿಕ್ಕಿದ ದೀಪ ಬಾಳು ಬದುಕೆಲ್ಲ ||
ಅಸ್ಥಿರದ ಭವದೊಳಗೆ ಅತಿಶಯಗಳೆಣಿಸದಲೆ
ವಸ್ತು ಇದರಲಿ ಕೇಳು ವೈರಾಗ್ಯವ
ವಿಸ್ತಾರಮಹಿಮ ಶ್ರೀ ಪುರಂದರವಿಠಲನ
ಸ್ವಸ್ಥಚಿತ್ತದಿ ನೆನೆದು ಮುಕ್ತಿ ಪಡೆ ಮನುಜ ||
********