Showing posts with label ಮಂಗಳಂ ಕ್ಷೀರಸಾಗರಶಯನ ಮಂಗಳಂಮಂಗಳಂ ಬ್ರಹ್ಮಾದಿ hayavadana. Show all posts
Showing posts with label ಮಂಗಳಂ ಕ್ಷೀರಸಾಗರಶಯನ ಮಂಗಳಂಮಂಗಳಂ ಬ್ರಹ್ಮಾದಿ hayavadana. Show all posts

Wednesday, 1 September 2021

ಮಂಗಳಂ ಕ್ಷೀರಸಾಗರಶಯನ ಮಂಗಳಂಮಂಗಳಂ ಬ್ರಹ್ಮಾದಿ ankita hayavadana

 ..

ಮಂಗಳಂ ಕ್ಷೀರಸಾಗರಶಯನ ಮಂಗಳಂಮಂಗಳಂ ಬ್ರಹ್ಮಾದಿ ವಂದಿತನಿಗೆಮಂಗಳಂ ನಿತ್ಯ ಕರ್ಮೇಂದ್ರಿಯ ಸೇವಿತನಿಗೆಮಂಗಳಂ ಉಡುಪಿನ ಶ್ರೀಕೃಷ್ಣನಿಗೆಪ.


ನಂದನ ಕಂದನಿಗೆ ವೃಂದಾರಕೇಂದ್ರನಿಗೆಮಂದರ ಗಿರಿಧರಗೆ ಇಂದಿರಾಕಾಂತನಿಗೆನಂದ ಸುರವ್ರಾತನಿಗೆ ನಂದ ತೀ-ರ್ಥೇಂದ್ರ ಗೋವಿಂದ ಹರಿಗೆ1


ಮಕರ ಕುಂಡಲಧರ ರುಕುಮಿಣಿ ರಮಣನಿಗೆಅಕಳಂಕ ಮಹಿಮಗೆ ಅಕುಟಿಲನಿಗೆಶುಕವಾಹನನ ಪಿತಗೆ ಭಕುತವತ್ಸಲಗೆ ಅ-ಧಿಕ ಕೋಟಿರವಿತೇಜ ಮಕುಟ ದಿಟ್ಟನಿಗೆ 2


ಸರಸ ಮಂದಹಾಸನಿಗೆ ನರಹರಿ ರೂಪನಿಗೆವರ ಕೌಸ್ತುಭಹಾರ ಧರಿಸಿದವಗೆಕರುಣದಿ ಗೋಪಿಯರ ಧುರದಿ ರಕ್ಷಿಪನಿಗೆಸಿರಿಮುದ್ದು ಹಯವದನ ಮುರಹರನಿಗೆ 3

***