..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ಪ್ರಮಾದೀ ಸಂವತ್ಸರ ಹರಿಸ್ತೋತ್ರ
ಪೂರ್ಣ ಗುಣನಿಧಿ ಅನಘ ಸರ್ವೋತ್ತಮ ಜ್ಞಾನ - ಆನಂದ ಮಯ ಕೃಷ್ಣ ವಾಮನ ಸರ್ವೇಶ ಜನುಮಾದಿ ಕರ್ತಾ ಪ್ರಮಾದೀ ಸಂವತ್ಸರ ಸುನಾಮನೇ ಅನಿಷ್ಟಹರ ಇಷ್ಟಪ್ರದ ಶರಣು ಪ
ತೇಜಸ್ಸಲಿಲ ಪೃಥಿವಿ ಶ್ರೀವಾಯುರುದ್ರರೊಳು ರಾಜರಾಜೇಶ್ವರ ತ್ರಿವೃತ್ ಪ್ರಮಾದೀ ರಾಜೀವ ಜಾಂಡ ಕಾರಣ ದೊರೆಯೆ ನೀನಿಂತು ಪ್ರಜೆಗಳ ರಕ್ಷಿಸುವಿ ನೀ ಪೂರ್ಣಕಾಮ 1
ರಾಜರು ರಾಜ್ಯಾಧಿಕಾರಿಗಳು ಈ ವರುಷ ರಜಸ್ತಮೋನ್ನಾಹದಿ ಕ್ರೋಧ ಮತ್ಸರದಿಂ ರಾಜ್ಯ ಜನರ ಪೀಡಿಸದಂತೆ ನೀಮಾಡೋ ರಾಜೀವೇಷಣ ವೃಷ್ಟಿ ಸಸ್ಯವರ್ಧಿಸುವಿ 2
ಉತ್ತಿಷ್ಠ ಶ್ರೀಕರ ಶ್ರೀಯಃ ಪತೆ ಜಗನ್ನಾಥ ಪದ್ಮಭವಪಿತ ಶ್ರೀ ಪ್ರಸನ್ನ ಶ್ರೀನಿವಾಸ ಸದಾನಮೋ ಸುಹೃತ್ ತ್ರಿವೃತ್ ಪ್ರಮಾದೀವಾಮನಕೃಷ್ಣ ಹೇ ಧಯಾನಿಧೇ ಶರಣು ಅನಿಮಿತ್ತ ಬಂಧು 3
***