Showing posts with label ಪಾಹಿಮಾಂ ಪಾಹಿಮಾಂ ಕುಜ pranesha vittala. Show all posts
Showing posts with label ಪಾಹಿಮಾಂ ಪಾಹಿಮಾಂ ಕುಜ pranesha vittala. Show all posts

Wednesday, 13 November 2019

ಪಾಹಿಮಾಂ ಪಾಹಿಮಾಂ ಕುಜ ankita pranesha vittala

by ಪ್ರಾಣೇಶದಾಸರು
ಪಾಹಿಮಾಂ ಪಾಹಿಮಾಂ ಕುಜ-ನಾಹಿವಿಹಂಗಶ್ರೀರಂಗ ಕೃಪಾಂಗ ಪ

ಪಂಕಜೋದ್ಭವನಯ್ಯ ಸಂಕರುಷಣ ಚಕ್ರ |ಶಂಖವ ಧರಿಸಿದ ಪಂಕಜನಾಭ 1

ನರಕವತ್ಸಬಕಾಹ ಜರಿಜಾಹ ಮನೋವಾಸ |ನರಸಖಪರಮಾತ್ಮ ಗರುಡವಾಹನನೇ2

ಪನ್ನಗತಲ್ಪಪ್ರಪನ್ನಪೋಷಕಹರಿ|ಅನ್ನಾದ ಪ್ರಾಣೇಶ ವಿಠಲ ನಿಷ್ಕುಟಿಲ3
*******