Showing posts with label ಮೊರೆಯ ಹೊಕ್ಕೆನು ನಿನ್ನಾ ಚರಣ ಕಮಲಕ ಸಿರಿಪತಿ gurumahipati. Show all posts
Showing posts with label ಮೊರೆಯ ಹೊಕ್ಕೆನು ನಿನ್ನಾ ಚರಣ ಕಮಲಕ ಸಿರಿಪತಿ gurumahipati. Show all posts

Wednesday, 1 September 2021

ಮೊರೆಯ ಹೊಕ್ಕೆನು ನಿನ್ನಾ ಚರಣ ಕಮಲಕ ಸಿರಿಪತಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಮೊರೆಯ ಹೊಕ್ಕೆನು ನಿನ್ನಾ | ಚರಣ ಕಮಲಕ ಸಿರಿಪತಿ ಭವರೋಗ ವೈದ್ಯ ನೆಂಬದು ಕೇಳಿ ಪ 


ಅನ್ಯವಾರ್ತೆಯ ಕೇಳಿ ಕಿವಿಬಧಿರಾಗದೆ ನಿನ್ನ ಕಥಾಶ್ರವಣದ ರಸದೀ ಇನ್ನು ಕೇಳುವ ಪರಿಮಾಡೋ ಅವಿದ್ಯದಾ ಕಣ್ಣಿನ ಪರಿಗೆ ಜ್ಞಾನಾಂಜನವಿಡೋದೇವಾ 1 

ವಿಷಯನಂಜಲಿ ತಾಪವೆಡಗೋಂಡದೇಹಕೆ ಅಸಮಸತ್ಸಂಗ ಕಷಾಯಕೊಟ್ಟು ಹುಸಿ ನುಡಿ ಪರನಿಂದೆಯಾಡಿದ ರೋಗದಿ ಹಸಗೆಟ್ಟ ನಾಲಿಗೆ ನಾಮಾಮೃತವ ನೀಡೋ 2 

ನಾಸಿಕ ಕೊರಡಾಯಿತಿಭೋಗ ದ್ರವ್ಯದಿ ವಾಸನೆ ಕೊಡು ತುಳಸಿಯಾರ್ಪಿತವಾ ಧ್ಯಾಸತೈಲದಿ ಮನಸಿನ ಕರ್ಮವಾತವಾ ದೋಷಬಿಡಿಸಿ ಕಾಯೋ ಗುರು ಮಹಿಪತಿ ಸ್ವಾಮಿ 3

***