Showing posts with label ಏನಾದರೇನು ಗುರು ಪಡದನಕಾ ತಾನೊಲಿಯನು ಹರಿ ಕಾವನ ಜನಕಾ gurumahipati. Show all posts
Showing posts with label ಏನಾದರೇನು ಗುರು ಪಡದನಕಾ ತಾನೊಲಿಯನು ಹರಿ ಕಾವನ ಜನಕಾ gurumahipati. Show all posts

Wednesday, 1 September 2021

ಏನಾದರೇನು ಗುರು ಪಡದನಕಾ ತಾನೊಲಿಯನು ಹರಿ ಕಾವನ ಜನಕಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಏನಾದರೇನು ಗುರು ಪಡದನಕಾ | ತಾನೊಲಿಯನು ಹರಿ ಕಾವನ ಜನಕಾ ಪ 

ಪರಿಪರಿಸಾಧನದಲಿ ಬಳಲುವರೆ | ಪರಸ ಮುಟ್ಟದೆ ಲೋಹವಾಗುವದೇ ಕನಕಾ1 

ಪತಿತೋದ್ಧಾರಗುರು ಸ್ವಸುಖದಾನಿ | ವೃತ ತಪಸಿದ್ಧಿಯ ಬಹು ಸುಖ ಕ್ಷಣಿಕಾ2 

ಗುರು ಮಹಿಪತಿಪ್ರಭು ಜ್ಞಾನಾಂಜ ನಿಡದೇ | ಧರೆಯೊಳಾಹನೇ ನರ ಚಿದ್ಘನ ಧನಿಕಾ 3

***