Showing posts with label ರಥವನೇರಿದ ರಥಿಕನಾರೇ ಪೇಳಮ್ಮಯ್ಯ jagannatha vittala. Show all posts
Showing posts with label ರಥವನೇರಿದ ರಥಿಕನಾರೇ ಪೇಳಮ್ಮಯ್ಯ jagannatha vittala. Show all posts

Saturday, 14 December 2019

ರಥವನೇರಿದ ರಥಿಕನಾರೇ ಪೇಳಮ್ಮಯ್ಯ ankita jagannatha vittala

by ಜಗನ್ನಾಥದಾಸರು
ರಾಗ ಮಧ್ಯಮಾವತಿ (ರೇಗುಪ್ತಿ)(ಸಾರಂಗ) ಆದಿತಾಳ(ಧುಮಾಳಿ)

ರಥವನೇರಿದ ರಥಿಕನ್ಯಾರೆ ಪೇಳಮ್ಮಯ್ಯ ||ಪ||

ಕಥಿತದ್ಯಾತ ಸಂಸ್ತುತ ವಿತತಾನತ
ಹಿತಕರದಿ ವಿಷಸೃತಿ ಕಾಣಮ್ಮ||ಅ.ಪ||

ಹಾಟಕರತ್ನ ಸುಪೀಠ ಮಧ್ಯಮಂಟಪದಿ ನೋಡಮ್ಮಯ್ಯ
ತಾಟಂಕಯುತ ವಧೂಟಿಯರಿಕ್ಕೆಲದಿ ನೋಡಮ್ಮಯ್ಯ
ಕೋಟಿಭಾಸ್ಕರ ಪ್ರಭಾಲೋಪದಿ ರಾಜಿಸುವ ನೋಡಮ್ಮಯ್ಯ
ಆಟದಿ ಕುರುಜ ಮಹಾಟವಿ ಸವರಿ ಕಿ-
ರೀಟಿಯ ಸಲಹಿದ ಖೇಟವಾಹನನೆ ||೧||

ಭುಜಗರಾಜ ಫಣಮಂಡಲ ಮಂಡಿತನೆ ನೋಡಮ್ಮಯ್ಯ
ವಿಜಯದರಾರಿಗದಾಂಬುಜ ಕರಭೂಷಿತನೆ ನೋಡಮ್ಮಯ್ಯ
ಗಜಚರ್ಮಧರಾದ್ಯ ನಿಮಿಷಗಣ ಸೇವಿತನೆ ನೋಡಮ್ಮಯ್ಯ
ಅಜನ ನಾಭಿಯಲಿ ಪಡೆದು ಚರಾಚರ
ಸೃಜಿಸ್ಠೆಪೇಳ್ದ ನಿರಜ ಕಾಣಮ್ಮ ||೨||

ಏತಾದೃಶ ಮಹಾಮಹಿಮ ರಮಾವಲ್ಲಭನು ನೋಡಮ್ಮಯ್ಯ
ಶ್ವೇತದ್ವೀಪಾನಂತಾಸನ ವೈಕುಂಠ ಬಿಟ್ಟಿಳಿದು ನೋಡಮ್ಮಯ್ಯ
ವೀತಭಯ ಜಗನ್ನಾಥವಿಠ್ಠಲ ಬಾರನ್ಯಾಕೆ ಪೇಳಮ್ಮಯ್ಯ
ಭೂತಳ ಜನರಭಿಲಾಷೆಯ ಸಲಿಸಲು
ವಾತಾಶನ ಗಿರಿಗಿಳಿದ ಕಾಣಮ್ಮ ||೩||
***

pallavi

rathavanErida rathikanyArE pELammayya

anupallavi

kathita dhyAta samstuta vitatAnata hitakaradi viSasrati kANammA

caraNam 1

hATaka ratna supITha madhya maTapadi nODammmayyA tATankayuta vadhUTiyerikkeladi nODammayyA
kOTi bhAskara prabhAlOpadi rAjisuva nODammayyA AtaDi kuruja mahATavi savari kirITiya salahida khETa vAhanane

caraNam 2

bhujagarAja phaNa maNDal maNDitane nODammayyA vijayadarAri gadAmbuja kara bhUSitanE nODammayyA
gaja carmadharAdya nimiSagaNa sEvitanaE nODammayyA ajana nAbhiyeli paDedu carAcara shrajise pELda nIraja kANammA

caraNam 3

EtAdrasha mAhA mahima ramA vallabhanu nODammayyA shvEta dIpAnantAsana vaikuNTha biTTiLidu nODammayA vIta bhaya jagannAtha viThala bAranyAkE pELammayyA bhUtaLa janaradilAsaya salisalu vAtAshana giri giLida kANammA
***

ರಥವನೇರಿದ ರಥಿಕನಾರೇ ಪೇಳಮ್ಮಯ್ಯ
ಕಥಿತಧ್ಯಾತ ಸಂಸ್ತುತ ವಿತತಾನತ
ಹಿತಕರ ದಿವಿಷÀತ್ಪತಿ ಕಾಣಮ್ಮ ಪ

ಕೋಟಿ ಭಾಸ್ಕರ ಪ್ರಭಾಟೋಪದಿ ರಾಜಿಸುವ ಪೇಳಮ್ಮಯ್ಯ ಅ.ಪ.

ತಾಟಂಕಯುತ ವಧೂಟಿಯರಿಕ್ಕೆಲದಲಿಹ ನೋಡಮ್ಮಯ್ಯ
ಆಟದೆ ಕುರುಜ ಮಹಾಟವಿ ಸವರಿ ಕಿ
ರೀಟಯ ಸಲಹಿದ ಖೇಟವಾಹನನೇ ಕೇಳಮ್ಮಯ್ಯ 1

ಭುಜಗರಾಜ ಫಣಿಮಣಿ ಮಂಡಲ ಮಂಡಿತನೇ ನೋಡಮ್ಮಯ್ಯ
ವಿಜಯವರದ ಅರಿಗದಾಂಬುಜಧರ ಭುಜನೇ ನೋಡಮ್ಮಯ್ಯ
ಗಜಚರ್ಮಧರಾದ್ಯನಿಮಿಷಗಣಸೇವಿತನ ನೋಡಮ್ಮಯ್ಯ
ಅಜನ ನಾಭಿಯಲಿ ಪಡೆದು ಚರಾಚರ
ಸೃಜಿಸಿ ಪೇಳ್ದ ನೀರಜಲೋಚನ ಕಾಣಮ್ಮ 2

ಏತಾದೃಶ ಮಹಾಮಹಿಮ ರಮಾವಲ್ಲಭನೆ ಪೇಳಮ್ಮಯ್ಯ
ಶ್ವೇತ ದ್ವೀಪಾನಂತಾಸನ ವೈಕುಂಠನುಳಿದು ಪೇಳಮ್ಮಯ್ಯ
ವೀತಭಯ ಜಗನ್ನಾಥವಿಠಲ ಬರಲೇಕೆ ಪೇಳಮ್ಮಯ್ಯ
ಭೂತಳ ಜನರಭಿಲಾಷೆ ಸಲಿಸಲು
ವಾತಾಶನ ಗಿರಿಗಿಳಿದ ಕಾಣಮ್ಮಯ್ಯ 3
*********