ರಾಗ ಸೌರಾಷ್ಟ್ರ ಆದಿತಾಳ
Audio by Mrs. Nandini Sripad
ಶ್ರೀ ಪುರಂದರದಾಸರ ಕೃತಿ
ಚಿತ್ತೈಸಿದ ವ್ಯಾಸರಾಯ । ಚಿತ್ತಜನಯ್ಯನ ಸಭೆಗೆ ॥ ಪ ॥
ನಿತ್ಯ ಮುತ್ತೈದೆಯರೆಲ್ಲ । ಎತ್ತೆ ರತುನದಾರತಿಯ ॥ ಅ.ಪ ॥
ಹೇಮಮಯವಾದ ದಿವ್ಯ । ವ್ಯೋಮಯಾನವನ್ನೆ ಏರಿ ।
ಸ್ವಾಮಿ ವ್ಯಾಸರಾಯ ಪೊರಟ । ಪ್ರೇಮದಿ ಹರಿಪುರಕೆ ॥ 1 ॥
ಹಾಟಕದ ಬೆತ್ತಕೋಟಿ । ಸಾಟಿ ಇಲ್ಲದೆ ಪಿಡಿದು ।
ನೀಟಾದ ಓಲಗದವರ । ಕೂಟಗಳ ಮಧ್ಯದಲ್ಲಿ ॥ 2 ॥
ಸಾಧು ವಿಪ್ರಜನರೆಲ್ಲ । ವೇದ ಘೋಷಣೆಯ ಮಾಡೆ ।
ನಾದವುಳ್ಳ ನಗಾರಿಯು । ಭೇದಿಸಿತು ನಾಲ್ಕು ದಿಕ್ಕು ॥ 3 ॥
ಹೇಮಮಯ ಪಿಡಿಯುಳ್ಳ । ಚಾಮರಂಗಳನ್ನೆ ಪಿಡಿದು ।
ಕಾಮಿನಿಮಣಿಯರ್ ಕೆಲದಿ । ಸ್ವಾಮಿಯೆಂದು ಬೀಸುತ್ತಿರೆ ॥ 4 ॥
ಅರವಿಂದಾಸನನಯ್ಯ । ಪುರಂದರವಿಟ್ಠಲನು ।
ಸಿರಿ ಸಹಿತದಿ ಬಂದು । ಕರ ಪಿಡಿದೆತ್ತಿದ್ದು ಕಂಡೆ ॥ 5 ॥
***
pallavi
cittaisida vyAsarAya cittajanayyana sabhege
anupallavi
nitya muttaideyarella ette ratunadAratiya
caraNam 1
hEma mayavAda divya vyOmayAnavanne Eri svAmi vyAsarAya poraTa prEmadi haripurage
caraNam 2
hATakada bettakOTi sATi illade piDidu nIDAda Olagadavara kUDagaLa madhyadalli
caraNam 3
sAdhu vipra janarella vEda ghOSaNeya mADe nADavuLLa nagAriyu bhEdisitu nAlku dikku
caraNam 4
hEmamaya piDiyuLLa cAmarangaLanne piDidu kAmini maNiyarkeladi svAmiyendu bIsuttire
caraNam 5
aravindAsananayya purandara viTTalanu siri sahitadi bandu kara piDidettiddu kaNDe
***
ಪುರಂದರದಾಸರು
ರಾಗ ಭೈರವಿ. ಅಟ ತಾಳ
ಚಿತ್ತೈಸಿದ ವ್ಯಾಸರಾಯ
ಚಿತ್ತಜನಯ್ಯನ ಸಭೆಗೆ ||ಪ||
ನಿತ್ಯ ಮುತ್ತೈದೆಯರೆಲ್ಲ
ಎತ್ತೆ ರತುನದಾರತಿಯ ||ಅ.ಪ||
ಹೇಮ ಮಯವಾದ ದಿವ್ಯ
ವ್ಯೋಮಯಾನವನ್ನೆ ಏರಿ
ಸ್ವಾಮಿ ವ್ಯಾಸರಾಯ ಪೊರಟ
ಪ್ರೇಮದಿ ಹರಿಪುರಕೆ
ಹಾಟಕದ ಬೆತ್ತಕೋಟಿ
ಸಾಟಿ ಇಲ್ಲದೆ ಪಿಡಿದು
ನೀಟಾದ ಓಲಗದವರ
ಕೂಟಗಳ ಮಧ್ಯದಲ್ಲಿ
ಸಾಧು ವಿಪ್ರ ಜನರೆಲ್ಲ
ವೇದ ಘೋಷಣೆಯ ಮಾಡೆ
ನಾದವುಳ್ಳ ನಗಾರಿಯು
ಭೇದಿಸಿತು ನಾಲ್ಕು ದಿಕ್ಕು
ಹೇಮಮಯ ಪಿಡಿಯುಳ್ಳ
ಚಾಮರಂಗಳನ್ನೆ ಪಿಡಿದು
ಕಾಮಿನಿಮಣಿಯರ್ಕೆಲದಿ
ಸ್ವಾಮಿಯೆಂದು ಬೀಸುತ್ತಿರೆ
ಅರವಿಂದಾಸನನಯ್ಯ
ಪುರಂದರವಿಠಲನು
ಸಿರಿ ಸಹಿತದಿ ಬಂದು
ಕರ ಪಿಡಿದೆತ್ತಿದ್ದು ಕಂಡೆ
********
ಚಿತ್ತೈಸಿದ ವ್ಯಾಸರಾಯ ಚಿತ್ತಜನಯ್ಯನ ಬಳಿಗೆ ಪ.
ಮುತ್ತಿ ಮುತ್ತೈದೆಯರೆಲ್ಲಎತ್ತೆ ರತುನದಾರತಿಯ ಅಪಹೇಮಪಿಡಿಗಳುಳ್ಳಂತಹ |ಚಾಮರಂಗಳನು ಪಿಡಿದು ||ಕಾಮಿನಿ ಮಣಿಯರು ಕೆಲವರು |ಸ್ವಾಮಿಯೆಂದು ಬೀಸುತಿರೆ 1
ಹಾಟಕದ ಬೆತ್ತನೂರು |ಸಾಟಿಯಿಲ್ಲದಲೆ ಪಿಡಿದು ||ನೀಟಾದ ಓಲಗದವರ |ಕೂಟಗಳ ಮಧ್ಯದಲಿ 2
ಸಾಧುವಿಪ್ರಜನಂಗಳು |ವೇಧಘೋಷ ಮಾಡುತಿರೆ ||ಮೋದದಿಂದ ಗೋವಿಂದನ |ಸಾಧನ ಮಾರ್ಗವ ಪಿಡಿದು 3
ಭೇರಿ ತುತ್ತೂರಿ ಮೃದಂಗ |ಮೌರಿ ಚಾರುವೇದ್ಯಂಗಳು ||ಬಾರಿಬಾರಿಗೆ ಹೊಡೆಯೆ |ನಾರದರು ತಾ ಕೂಡಿಯೆ | 4
ಅರವಿಂದಾಸನನಯ್ಯ |ಪುರಂದರವಿಠಲನು||ಸಿರಿಸಹಿತದಿ ಬಂದು |ಕರಪಿಡಿದೆತ್ತಿದ್ದು ಕಂಡೆ 5
*********
ಪುರಂದರದಾಸರು
ರಾಗ ಭೈರವಿ. ಅಟ ತಾಳ
ಚಿತ್ತೈಸಿದ ವ್ಯಾಸರಾಯ
ಚಿತ್ತಜನಯ್ಯನ ಸಭೆಗೆ ||ಪ||
ನಿತ್ಯ ಮುತ್ತೈದೆಯರೆಲ್ಲ
ಎತ್ತೆ ರತುನದಾರತಿಯ ||ಅ.ಪ||
ಹೇಮ ಮಯವಾದ ದಿವ್ಯ
ವ್ಯೋಮಯಾನವನ್ನೆ ಏರಿ
ಸ್ವಾಮಿ ವ್ಯಾಸರಾಯ ಪೊರಟ
ಪ್ರೇಮದಿ ಹರಿಪುರಕೆ
ಹಾಟಕದ ಬೆತ್ತಕೋಟಿ
ಸಾಟಿ ಇಲ್ಲದೆ ಪಿಡಿದು
ನೀಟಾದ ಓಲಗದವರ
ಕೂಟಗಳ ಮಧ್ಯದಲ್ಲಿ
ಸಾಧು ವಿಪ್ರ ಜನರೆಲ್ಲ
ವೇದ ಘೋಷಣೆಯ ಮಾಡೆ
ನಾದವುಳ್ಳ ನಗಾರಿಯು
ಭೇದಿಸಿತು ನಾಲ್ಕು ದಿಕ್ಕು
ಹೇಮಮಯ ಪಿಡಿಯುಳ್ಳ
ಚಾಮರಂಗಳನ್ನೆ ಪಿಡಿದು
ಕಾಮಿನಿಮಣಿಯರ್ಕೆಲದಿ
ಸ್ವಾಮಿಯೆಂದು ಬೀಸುತ್ತಿರೆ
ಅರವಿಂದಾಸನನಯ್ಯ
ಪುರಂದರವಿಠಲನು
ಸಿರಿ ಸಹಿತದಿ ಬಂದು
ಕರ ಪಿಡಿದೆತ್ತಿದ್ದು ಕಂಡೆ
********
ಚಿತ್ತೈಸಿದ ವ್ಯಾಸರಾಯ ಚಿತ್ತಜನಯ್ಯನ ಬಳಿಗೆ ಪ.
ಮುತ್ತಿ ಮುತ್ತೈದೆಯರೆಲ್ಲಎತ್ತೆ ರತುನದಾರತಿಯ ಅಪಹೇಮಪಿಡಿಗಳುಳ್ಳಂತಹ |ಚಾಮರಂಗಳನು ಪಿಡಿದು ||ಕಾಮಿನಿ ಮಣಿಯರು ಕೆಲವರು |ಸ್ವಾಮಿಯೆಂದು ಬೀಸುತಿರೆ 1
ಹಾಟಕದ ಬೆತ್ತನೂರು |ಸಾಟಿಯಿಲ್ಲದಲೆ ಪಿಡಿದು ||ನೀಟಾದ ಓಲಗದವರ |ಕೂಟಗಳ ಮಧ್ಯದಲಿ 2
ಸಾಧುವಿಪ್ರಜನಂಗಳು |ವೇಧಘೋಷ ಮಾಡುತಿರೆ ||ಮೋದದಿಂದ ಗೋವಿಂದನ |ಸಾಧನ ಮಾರ್ಗವ ಪಿಡಿದು 3
ಭೇರಿ ತುತ್ತೂರಿ ಮೃದಂಗ |ಮೌರಿ ಚಾರುವೇದ್ಯಂಗಳು ||ಬಾರಿಬಾರಿಗೆ ಹೊಡೆಯೆ |ನಾರದರು ತಾ ಕೂಡಿಯೆ | 4
ಅರವಿಂದಾಸನನಯ್ಯ |ಪುರಂದರವಿಠಲನು||ಸಿರಿಸಹಿತದಿ ಬಂದು |ಕರಪಿಡಿದೆತ್ತಿದ್ದು ಕಂಡೆ 5
*********