ರಾಗ ಮಾಲಕೌಂಸ
singer Jayaramacharya Benkal
ಶ್ರೀ ಜಗನ್ನಾಥ ದಾಸರ ಹರಿಕಥಾಮೃತ ಸಾರದ ತಿರುಳನ್ನೊಳಗೊಂಡಿರುವ ಅದ್ಭುತ ರಚನೆ.
ಬಯಸದಿರಹಿತ ಸುಖಗಳನುದಿನ | ನಿ
ರ್ಭಯದಿ ಬಯಸು ಹರಿಯ |
ವಯನ ಗಮ್ಯ ವಾಂಛಿತ ಫಲಗಳ | ಸ
ದ್ದಯದಿ ಕೊಡುವ ತ್ವರಿಯಾ || ಪಲ್ಲವಿ ||
ಐಹಿಕ ಸುಖಗಳು ನಿಜವಾದ ಸುಖಗಳನ್ನು ಎಂದಿಗೂ ಕೊಡುವದಿಲ್ಲ. ಕಾರಣ ನಿತ್ಯ, ಸತ್ಯ, ಸುಖ ಪ್ರಾಪ್ತಿಗಾಗಿ ನಿರ್ಭಯದಿಂದ ಹರಿಯನ್ನೇ ಭಜಿಸಿದರೆ ಜೀವನ ಅಧಿಕಾರಾನುಸಾರ ಬಯಸಿದ ಫಲಗಳನ್ನು ಬಹುಬೇಗ ಕೊಡುತ್ತಾನೆ ಎಂಬ ದಾಸರ ಹಿತನುಡಿ ನಡೆಯಾಗಬೇಕು.
****