Showing posts with label ಈತನೀಗ ನಮ್ಮ ದೇವನು ಪ್ರೀತಿಯಿಂದಲಿ ankita gopala vittala EETANEEGA NAMMA DEVANU PREETIYINDALI. Show all posts
Showing posts with label ಈತನೀಗ ನಮ್ಮ ದೇವನು ಪ್ರೀತಿಯಿಂದಲಿ ankita gopala vittala EETANEEGA NAMMA DEVANU PREETIYINDALI. Show all posts

Friday, 13 December 2019

ಈತನೀಗ ನಮ್ಮ ದೇವನು ಪ್ರೀತಿಯಿಂದಲಿ ankita gopala vittala EETANEEGA NAMMA DEVANU PREETIYINDALI


ರಾಗ ಪೂರ್ವಿಕಲ್ಯಾಣಿ    ರೂಪಕತಾಳ 

Audio by Mrs. Nandini Sripad


ಶ್ರೀ ಗೋಪಾಲದಾಸರ ಕೃತಿ 

ಈತನೀಗ ನಮ್ಮ ದೇವನು ॥ ಪ ॥

ಪ್ರೀತಿಯಿಂದಲಿ ಸ್ಮರಿಸುವವರ । 
ಪಾತಕಗಳ ಪರಿಹರಿಪ ॥ ಅ ಪ ॥

ಅಕ್ರೂರನ ಪ್ರೀತನೀತ । 
ಚಕ್ರ ಶಂಖ ಧರಿಸಿದಾತ ।
ನಕ್ರ ಬಾಧೆಯ ತರಿದು ತನ್ನ । 
ಭಕ್ತನನ್ನ ಕಾಯಿದಾತ ॥ 1 ॥

ಅಜಮಿಳನ ಸಲಹಿದಾತ । 
ವ್ರಜದ ಗೋವು ಕಾಯಿದಾತ ।
ಭಜಿಸುವವರ ಬಿಡನು ಈತ । 
ತ್ರಿಜಗದೊಳಗೆ ಮೆರೆವದಾತ ॥ 2 ॥

ಸಕಲಗುಣಪೂರ್ಣನೀತ । 
ಸಕಲ ದೋಷದೂರನೀತ ।
ಸಕಲಾನಂದಭರಿತನೀತ । 
ಭಕುತಿ ಮಂತ್ರಕ್ಕೊಲಿವದಾತ ॥ 3 ॥

ಅನಾಥಬಾಂಧನೀತ । 
ಅನಾದಿಕಾಲದವನಾತ ।
ಆ ನಾರಿ ಮೊರೆಯ ಕೇಳಿ । 
ಅನಿಮಿಷರೊಳು ಒದಗಿದಾತ ॥ 4 ॥

ಕಮಲಮುಖಿಯ ರಮಣನೀತ । 
ಕಮಲಾಸನ ಜನಕನೀತ ।
ಕಮಲಾಕ್ಷ ಗೋಪಾಲವಿಠಲ ಹೃ।
ತ್ಕಮಲದೊಳು ನಿಲುವದಾತ ॥ 5 ॥
***

eetaneega namma devanu || pa ||

preetiyindali smarisuvavara patakagalanella pariharipa || a.pa. ||

akrurana preetaneeta | chakra lanka dharisidata |
nakra badheya taridu tanna bhaktananna kayidata || 1 ||

ajamilana salahidata | prajada govu kayidata |
bhajisuvavara bidanu preetaneeta | trijagadolage merevadata ||2 ||

sakalagunapurna neeta | sakala dola duraneeta |
sakalananda bharitanita | bhakutimantrakolivadata || 3 ||

anadikaladi bandhavaneeta | anadi kaladavaneeta |
a nari moreya keli | animishadolu odagidata ||4||

kamalamukiya ramananeeta | kamalasana janaengeeta |
kamalaksha gopala vittala hrut kamaladolu niluvadata || 5 ||
***

 ರಾಗ ಹಂಸಾನಂದಿ             ರೂಪಕತಾಳ 

ಈತನೀಗ ನಮ್ಮ ದೇವನೋ ॥ ಪ ॥

ಪ್ರೀತಿಯಿಂದಲೆ ಸ್ಮರಿಸುವವರ 
ಪಾತಕಗಳ ಪರಿಹರಿಪ ॥ ಅ ಪ ॥

ಅಕ್ರೂರನ ಪ್ರೀತನೀತ । 
ಚಕ್ರ ಶಂಖ ಧರಿಸಿದಾತ ।
ನಕ್ರ ಬಾಧೆಯ ತರಿದು ತನ್ನ । 
ಭಕ್ತನನ್ನ ಕಾಯಿದಾತ ॥ 1 ॥

ಅಜಮಿಳನ್ನ ಸಲಹಿದಾತ । 
ವ್ರಜದ ಗೋವು ಕಾಯಿದಾತ ।
ಭಜಿಸುವವರ ಬಿಡನು ಪ್ರೀತ 
ತ್ರಿಜಗದೊಳಗೆ ಮೆರೆವದಾತ ॥ 2 ॥

ಸಕಲಗುಣಪೂರ್ಣನೀತ । 
ಸಕಲದೋಷ ದೂರನೀತ ।
ಸಕಲಾನಂದ ಪೂರ್ಣನೀತ । 
ಭಕುತಿಮಂತ್ರಕೊಲಿವದಾತ ॥ 3 ॥

ಅನಾಥ ಬಾಂಧ ನೀತಾ । 
ಅನಾದಿ ಕಾಲದವನಾತ ।
ಅನಾದಿ ಮೊರೆಯ ಕೇಳಿ । 
ಅನಿಮಿಷದೊಳು ವದಗಿದಾತ ॥ 4 ॥

ಕಮಲಮುಖಿಯರಮಣ ನೀತ । 
ಕಮಲಾಸನಜನಕ ನೀತ ।

ಕಮಲಾಕ್ಷ ಗೋಪಾಲವಿಠಲ ಹೃ।
ತ್ಕಮಲದೊಳು ನಿಲುವ ದಾತ ॥ 5 ॥
***********