Showing posts with label ಕೈಲಾಸದ ಹುಲಿಯೇ ಕಲಿಕಲುಶವ ಕಳೆಯೊಕಾಳಿಯಾಗಿಳಿಯೇ tandevaradagopala vittala. Show all posts
Showing posts with label ಕೈಲಾಸದ ಹುಲಿಯೇ ಕಲಿಕಲುಶವ ಕಳೆಯೊಕಾಳಿಯಾಗಿಳಿಯೇ tandevaradagopala vittala. Show all posts

Thursday, 5 August 2021

ಕೈಲಾಸದ ಹುಲಿಯೇ ಕಲಿಕಲುಶವ ಕಳೆಯೊಕಾಳಿಯಾಗಿಳಿಯೇ ankita tandevaradagopala vittala

 ..


kruti: tandevaradagopala vittala (ಪ್ರಹ್ಲಾದಗೌಡರು)


ಕೈಲಾಸದ ಹುಲಿಯೇ ಕಲಿಕಲುಶವ ಕಳೆಯೊಕಾಳಿಯಾಗಿಳಿಯೇ ಪ


ಕಾಲಕಾಲಕೆ ನಿನ್ನ ಕಾಲಿಗೆರಗುವೆ ಕರುಣಾಲಯತೋರೋ ಕರುಣಾಳುಗಳರಸನೆ ಅ.ಪ.


ತುಳಸಿಗೆ ಕಳಸೀದರೆನ್ನ ತುಳಸಿಯ ತಾರದೆ ನಾ ಹೊಲಸಿನೊಳಳುತಿರೆ ಘಳಿಗೆಯಾ ತಾಳದೆ ಘಳಿಸಿದೆ ತುಳಸಿಯಾ ಕಳಸವ ಕಳ್ಳ ನಾ ಗೆಳೆಯನೆ ಕಳವಳಿಗಳು ಕಳುಹಿಸಿ ಕಾಳ್ವಗೈಸುವ ಕಾಳಿರಮಣ ನಿನ್ನ ಧೂಳಿ ಧರಿಸುವಂತೆ ಖೂಳನಾ ಮಾಡದೆ 1

ಚಲುವ ಚನ್ನಿಗ ನೀನಹುದೋ ಚಂಚಲ ನಯನಾ ಕರುಣಾ ಚಲ ನೀನಹುದೊ ಚಾಲೂವರಿಯಲು ಎನಗೆ ಕಾಲವು ತಿಳಿಯದು ಶೂಲಿ ಚಂಚಲ ಎನ್ನ ಸಂಚಿತಗಾಮಿ ವಂಚಿಸದೆ ಕಾಯ್ವುದೊ ಇದೇ ಕೊಡುವುದೋಕಂಬು ಕಂಧರಮಣಿ ಹಂಚುವುಗಾಣದೆ ಚಂಚಲೂ ನಯನದಿ ಸುರವಂಚಕನಾಗಿ ಪ್ರಪಂಚದಿ ಶರಪಂಚನ ಚಿಂತಿಸಿಸಂತೆಯಾನರುಹಿದ 2

ಅಕಳಂಕ ಮಹಿಮನೆ ದೋಷದೂರ ನೀ ಗುಣವಂತನೇ ಸಹಸ ಬಲವಂತನೆ ಕಾಂತಿಯ ತಂದನೆ ಕಾಂತಿಯುಳ್ಳ ಕಂತಿಯು ಧರಿಸಿದ ದಿಗಂತ ನಿಷ್ಕಿಂಜನರ ಕಾಂತನೆ ಭುಜಬಲ ಮಹಬಲವಂತನೆ ಕುರುಕಂತನೆ ಅಂತು ಇಂತು ತಂತು ಬಿಡದೆ ನಿಜ ಕುಂತಿಯ ಮಗನನ ಕಂತೆಯುಪೂಜಿಪ ಮಂತ್ರಿಯೆನಿಸಿ ಸುಖತಂತ್ರ ಪಠಿಸಿ ಶೃತಿಪಂಶವಿಂಶತಿ ದ್ವಿಪಿಂಚಕಲ್ಪವ ಮಿಂಚಿನಂದದಿ ತಪವಗೈದು ಪಂಚಪದವಿಯ ಪೊ0ದುಕೊಂಡು ಪಂಚ ಬಾಣನ ಪಿತನು ಯನಿಸಿದ ಮಾಂಗಲ್ಯ ಲಕುಮಿಯ ರಮಣ ಯೆನ ತಂದೆವರದಗೋಪಾಲವಿಠ್ಠಲನ ಆತಂಕವಿಲ್ಲದೇ ಚಿಂತಿಸುವ ನಾರಾಯಣಾಚಾರ್ಯನೇ3

***