Showing posts with label ದತ್ತಾತ್ರೇಯನ್ನಮೋ ದತ್ತಾತ್ರೇಯಾ ಅತ್ರಿ ವರದಾಯಕನೇ ದತ್ತಾತ್ರೇಯಾ gurumahipati. Show all posts
Showing posts with label ದತ್ತಾತ್ರೇಯನ್ನಮೋ ದತ್ತಾತ್ರೇಯಾ ಅತ್ರಿ ವರದಾಯಕನೇ ದತ್ತಾತ್ರೇಯಾ gurumahipati. Show all posts

Wednesday, 1 September 2021

ದತ್ತಾತ್ರೇಯನ್ನಮೋ ದತ್ತಾತ್ರೇಯಾ ಅತ್ರಿ ವರದಾಯಕನೇ ದತ್ತಾತ್ರೇಯಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ದತ್ತಾತ್ರೇಯನ್ನಮೋ ದತ್ತಾತ್ರೇಯಾ ಅತ್ರಿ ವರದಾಯಕನೇ ದತ್ತಾತ್ರೇಯಾ ಪ 


ಭಕುತಿ ಮಾಡಲು ಮೆಚ್ಚಿ ಅನಸೂಯಾ ಕರದೊಳಗ ಸುಕುಮಾರ ವೇಷದವತಾರ ತಾಳಿ ಪಥ ದೋರಲಿಕೆ ಅಕಳಂಕ ಯೋಗ ರೂಪವ ಭರಿಸಿದೆ 1 

ಉದಯದೊಳು ವಾರ್ಣಾಸಿಸುರನದಿಯಲಿ ಸ್ನಾನ ವದಗಿ ಕೊಲ್ಹಾಪುರಕ ಮಧ್ಯಾಹ್ನದೀ ವಿದಿತ ಭಿಕ್ಷವನುಂಡು ಪೋಗಿ ಸಂಜೆಗೆ ಮಾಹು ನಿತ್ಯ ವಿಧಿಯಲಿ ಚರಿಸುವೇ2 

ದತ್ತಹರಿ ಸಾಕ್ಷಾತ ಉನ್ಮದೋನಂದದಾಯಕ ದತ್ತವರ ಮುನಿ ದಿಗಂಬರ ಬಾಲಕಾ ನಿತ್ಯ ಪ್ರಕಾಶಮಯ ಜ್ಞಾನಸಾಗರನೆಂಬರ ದುರಿತ ಭಯವಾರಿಸುವೆ3 

ಆವನಾಗಲಿ ಮರೆದು ನಿಮ್ಮ ನಾಮವ ನೆನೆವ ಠಾವಿನಲಿಸುಳಿವ ಪ್ರತ್ಯಕ್ಷದಿಂದಾ ಭಾವದಿಂದಲಿ ಸ್ಮರಿಸಿದವಗ ಇಹಪರ ಸುಖವ ನೀವ ಕರುಣಾಳು ದೀನೋದ್ಧಾರಕಾ 4 

ಇಪ್ಪತ್ತು ನಾಲ್ಕು ಗುರುಗಳ ಕ್ರಮವ ದೋರಿಭವ ಮುಪ್ಪು ಬಿಡಿಸಿದೆ ಯದುರಾಯಗಂದು ಒಪ್ಪಿನಿಂದಲಿ ಗುರು ಮಹಿಪತಿ ಪ್ರಭುಯನಿಸಿ ತಪ್ಪ ನೋಡದೆ ನಂದ ನುದ್ಧರಿಸಿದೆಲೆ ದೇವಾ5

****