RSS song
ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ
ಮನುಜರಾಗಿ ಹುಟ್ಟಲಿಲ್ಲಿ ಜನುಮಜನುಮ ಸುಕೃತ ||ಪ||
ನಾಲ್ಕುದಿನದ ಬಾಳು ನಮದು ಆಗಲಿಂದು ಸಾರ್ಥಕ
ತ್ಯಾಗ ಮೆರೆದು ಅಮರರಾದ ಸಂತರೆಮಗೆ ಪ್ರೇರಕ
ಮಣ್ಣ ಋಣವ ಕಳೆವುದಕ್ಕೆ ಸೇವೆಯೊಂದೇ ಸಾಧಕ
ನಗುತ ನಲಿವ ರಾಷ್ಟ್ರಕಾಗಿ ಸಾಗಬೇಕು ಕಾಯಕ ||೧||
ಧ್ಯೇಯ ಪಥವ ಬಿಟ್ಟ ಬಾಳ್ವೆ ಬೇಡ ನಮಗೆ ನೀರಸ
ಪರರಿಗಾಗಿ ಸತತ ಮಿಡಿವ ಹೃದಯದಿಂದ ಸಂತಸ
ಕಳೆದು ಬಿಡುವ ರೋಷ ದ್ವೇಷ ಎಲ್ಲ ಮನದ ಕಲ್ಮಶ
ವಿರಸ ಸರಿಸಿ ಹರಿಸಿ ಬಿಡುವ ಶುದ್ಧ ಸ್ನೇಹ ಮಾನಸ ||೨||
ಸ್ವಾರ್ಥ ಲಾಭ ಸ್ತುತಿಯ ಮೋಹ ಬೇರು ಸಹಿತ ಕೀಳುವ
ತರುವಿನಂತೆ ನೆರಳ ನೀಡಿ ಬದುಕ ಧನ್ಯಗೊಳಿಸುವ
ತಮವು ನಮಗೆ ಬೆಳಕು ಜಗಕೆ ದೀಪದಂತೆ ಬೆಳಗುವ
ಅಳುವನಳಿಸಿ ಪ್ರೀತಿ ಬೆಳೆಸಿ ನಾಡಿನೇಳ್ಗೆ ಕಾಣುವ ||೩||
***
BOga meTTi tyAga mereda karmaBUmi BArata
manujarAgi huTTalilli janumajanuma sukRuta ||pa||
nAlkudinada bALu namadu AgaliMdu sArthaka
tyAga meredu amararAda saMtaremage prEraka
maNNa RuNava kaLevudakke sEveyoMdE sAdhaka
naguta naliva rAShTrakAgi sAgabEku kAyaka ||1||
dhyEya pathava biTTa bALve bEDa namage nIrasa
pararigAgi satata miDiva hRudayadiMda saMtasa
kaLedu biDuva rOSha dvESha ella manada kalmaSa
virasa sarisi harisi biDuva Suddha snEha maanasa ||2||
svArtha lABa stutiya mOha bEru sahita kILuva
taruvinaMte neraLa nIDi baduka dhanyagoLisuva
tamavu namage beLaku jagake dIpadaMte beLaguva
aLuvanaLisi prIti beLesi nADinELge kANuva ||3||
***
ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ
ಮನುಜರಾಗಿ ಹುಟ್ಟಲಿಲ್ಲಿ ಜನುಮಜನುಮ ಸುಕೃತ || ಪ ||
ನಾಲ್ಕುದಿನದ ಬಾಳು ನಮದು ಆಗಲಿಂದು ಸಾರ್ಥಕ
ತ್ಯಾಗ ಮೆರೆದು ಅಮರರಾದ ಸಂತರೆಮೆಗೆ ಪ್ರೇರಕ
ಮಣ್ಣ ಋಣವ ಕಳೆವುದಕ್ಕೆ ಸೇವೆಯೊಂದೇ ಸಾಧಕ
ನಗುತ ನಲಿವ ರಾಷ್ಟ್ರಕ್ಕಾಗಿ ಸಾಗಬೇಕು ಕಾಯಕ || 1 ||
ಧ್ಯೇಯ ಪಥವ ಬಿಟ್ಟ ಬಾಳ್ವೆ ಬೇಡ ನಮಗೆ ನೀರಸ
ಪರರಿಗಾಗಿ ಸತತ ಮಿಡಿವ ಹೃದಯದಿಂದ ಸಂತಸ
ಕಳೆದು ಬಿಡುವ ರೋಷ ದ್ವೇಷ ಎಲ್ಲ ಮನದ ಕಲ್ಮಶ
ವಿರಸ ಸರಿಸಿ ಹರಿಸಿ ಬಿಡುವ ಶುದ್ಧ ಸ್ನೇಹ ಮಾನಸ || 2 ||
ಸ್ವಾರ್ಥ ಲಾಭ ಸ್ತುತಿಯ ಮೋಹ ಬೇರು ಸಹಿತ ಕೀಳುವ
ತರುವಿನಂತೆ ನೆರಳ ನೀಡಿ ಬದುಕ ಧನ್ಯಗೊಳಿಸುವ
ತಮವು ನಮಗೆ ಬೆಳಕು ಜಗಕೆ ದೀಪದಂತೆ ಬೆಳಗುವ
ಅಳುವನಳಿಸಿ ಪ್ರೀತಿ ಬೆಳೆಸಿ ನಾಡಿನೇಳ್ಗೆ ಕಾಣುವ || 3 ||
***