ನಾರಾಯಣನೆಂಬ ನಾಮವೇ ಮೂಲಮಂತ್ರಓರಂತೆ ಜಪಿಸುವೆನು ಶ್ರೀಹರಿ ಹರಿ ಪ.
ಆರ ಬಿಡುವೆನು ಮತ್ತಾರ ಕೂಡುವೆನುಆರಾರಿಗೊಡಲನೀವೆಆರಂಘ್ರಿಗೆರಗುವೆ ಆರಾರ ಮನ್ನಿಸುವೆಆರಿಂದ ಉದರ ಪೂರ್ತಿ 1
ಆರಿದ್ದರೇನುಫಲ ಆರು ಬಗೆಯನರಿತುಆರುಸಾವಿರವನೋದಿನೂರ ನೀರೊಳಗಿಟ್ಟು ಆರೆಂಟ ನೆನೆದು ಹದಿ-ನಾರನಾದರು ಕೊಟ್ಟನೆ 2
ಇಬ್ಬರೊಳಗೆ ಎನಗೊಬ್ಬನೆ ಸಾಕು ಕಣ್ಗೆಹಬ್ಬವಾವನ ಕಂಡರೆಒಬ್ಬನಿಗೋಸುಗ ಮತ್ತೊಬ್ಬನ ಭಜಿಸುವೆಅಬ್ಜಾಕ್ಷ ಹಯವದನ3
***