Showing posts with label ಕಂತುಪಿತನೆ ನಿನ್ನ ಎಂತು ವರ್ಣಿಪೆ rangavittala. Show all posts
Showing posts with label ಕಂತುಪಿತನೆ ನಿನ್ನ ಎಂತು ವರ್ಣಿಪೆ rangavittala. Show all posts

Wednesday 11 December 2019

ಕಂತುಪಿತನೆ ನಿನ್ನ ಎಂತು ವರ್ಣಿಪೆ ankita rangavittala

ಕಾಂಬೋಧಿ ರಾಗ , ರೂಪಕ(ಆದಿ?)ತಾಳ

ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ-
ಕಾಂತ ಪಾಲಿಸೆನ್ನನು ನಿರಂತರದಲಿ ||ಪ||
ಕುಂತೀಪುತ್ರಗೆ ನೀನತ್ಯಂತ ಸಾರಧಿತ್ವವ ಮಾಡಿ
ನಿಂತು ದುರ್ಯೋಧನನ ಶಿರವ ಅಂತಕನಿಗೊಪ್ಪಿಸಿದ ಧೀರ ||ಅ.ಪ||

ಸುಂದರವದನ ನಿನ್ನ ಕಂದ ಭಜಿಸಲು ಮುದ-
ದಿಂದ ಕಂಬದೊಳ್ಬಂದೆ ಮಂದರೋದ್ಧರ
ಸಿಂಧುಶಾಯಿ ರಕ್ಕಸನ ಕೊಂದು ಕರುಳಮಾಲೆಯನ್ನು
ಚೆಂದದಿಂ ಕಂಧರದೊಳ್ಧರಿಸಿದಾನಂದಮೂರ್ತಿ ಇಂದಿರೇಶ ||೧||

ಜಂಭವೈರಿ ಮುಖ್ಯ ಸುರಕದಂಬ ಪೂಜಿತಾಂಘ್ರಿಯುಗಳ
ನಂಬಿದ ಭಕ್ತರ ಕಾಯ್ವ ಅಂಬುಜನೇತ್ರ
ಅಂಬರೀಷ ದ್ವಾದಶಿ ವ್ರತವ ಸಂಭ್ರಮದಿ ಮಾಡುತಿರೆ
ಡೊಂಬಿಯಿಂ ದೂರ್ವಾಸ ಶಪಿಸೆ ಬೆಂಬಿಡದೆ ಚಕ್ರದಿ ಸಲಹಿದ ||೨||

ಗಂಗೆಯ ಜನಕ ನಿನ್ನ ಅಂಗನೆ ದ್ರೌಪದ ದೇವಿ
ಭಂಗಬಿಡಿಸೆಂದು ಕೂಗೆ ಮಂಗಳಾಂಗನೆ
ಸಾಂಗದಿಂದ ವಸ್ತ್ರಂಗಳ ಹಿಂಗದೆ ಪಾಲಿಸಿದಂಥ
ರಂಗವಿಠಲ ಪಾಲಿಸೀಗ ತುಂಗವಿಕ್ರಮ ಎನ್ನ ಮಾತು ||೩||
********