" ಶ್ರೀಶೇಷದೇವರ ಸ್ತುತಿ "
ಶೇಷದೇವನೇ
ಪೋಷಿಸೆನ್ನನು ।। ಪಲ್ಲವಿ ।।
ಶೇಷದೇವ ಕರುಣಾ-
ಸಮುದ್ರ ಭವ ।
ಕ್ಲೇಶವ ಕಳೆಯೋ ಸುರೇಶ
ಮುಖ ವಿನುತ ।। ಅ ಪ ।।
ವಾಸುದೇವನ ಶಯ್ಯಾಸನ ।
ರೂಪದಿ ಸೇವಿಸುವಿ ಚರಣ ।
ಸಾಸಿರ ವದನದಿ
ಶ್ರೀಶನ ಶುಭಗುಣ ।
ಲೇಶ ವರ್ಣಿಪ ಭಾಸುರ
ವಪುಷಾ ।। ಚರಣ ।।
ಹೇ ಮಹಾತ್ಮನೇ
ಭೂಮಿ ಪಾತಾಳ ।
ವ್ಯೋಮ ವ್ಯಾಪ್ತನೇ ।
ರಾಮನ ಸೇವಿಸಿ
ಪ್ರೇಮವ ಪಡೆದಿಹ ।
ಸೌಮಿತ್ರಿಯ ಶುಭ ನಾಮದಿ
ಮೆರೆದ ।। ಚರಣ ।।
ವಾರುಣೀವರ ಧಾರುಣಿಯೊಳು ।
ಕೃಷ್ಣಾತೀರ ಕಾರ್ಪರ ।
ನಾರಸಿಂಹನ ಪಾ-
ದಾರವಿಂದ ಯುಗ ।
ಸೇರಿ ಸುಖಿಸುತಿಹ
ಶೌರಿಯ ಅಗ್ರಜ ।। ಚರಣ ।।
***
ರಾಗ : ಆರಭಿ ತಾಳ : ಆದಿ (raga tala may differ in audio)