Showing posts with label ಲಾಲಿ ಲಾಲಿ ರಂಗಯ್ಯಗೆ ಕೃಷ್ಣಯ್ಯಗೆ ಲಾಲಿ ಲಾಲಿ purandara vittala. Show all posts
Showing posts with label ಲಾಲಿ ಲಾಲಿ ರಂಗಯ್ಯಗೆ ಕೃಷ್ಣಯ್ಯಗೆ ಲಾಲಿ ಲಾಲಿ purandara vittala. Show all posts

Friday, 6 December 2019

ಲಾಲಿ ಲಾಲಿ ರಂಗಯ್ಯಗೆ ಕೃಷ್ಣಯ್ಯಗೆ ಲಾಲಿ ಲಾಲಿ purandara vittala

ರಾಗ ಕೇದಾರಗೌಳ. ಅಟ ತಾಳ 

ಲಾಲಿ ಲಾಲಿ ರಂಗಯ್ಯಗೆ ( / ಕೃಷ್ಣಯ್ಯಗೆ) ಲಾಲಿ ಲಾಲಿ ||ಪ||

ಗೋಕುಲದಲಿ ಪುಟ್ಟಿದವನಿಗೆ ಲಾಲಿ
ಗೋವುಗಳನು ನೆರೆ ಕಾಯ್ದವಗೆ ಲಾಲಿ
ಗೋವರ್ಗಳ ಜಗಪಿತನಿಗೆ ಲಾಲಿ
ಗೋವಿಂದ ಪರಮ ವಿನೋದಿಗೆ ಲಾಲಿ ||

ಗಗನವ ಮುರಿಯಲೊದ್ದವನಿಗೆ ಲಾಲಿ
ನಿಗಮವ ತಂದಿತ್ತವನಿಗೆ ಲಾಲಿ
ಹಗೆಯ ತೊಟ್ಟು ಕೊಂದವನಿಗೆ ಲಾಲಿ
ಜಗವನುದರದಿ ಧರಿಸಿದವನಿಗೆ ಲಾಲಿ ||

ನಖದಲಿ ಗಂಗೆಯ ಪಡೆದವಂಗೆ ಲಾಲಿ
ಶಕಟನ ಮುರಿದಿಟ್ಟವನಿಗೆ ಲಾಲಿ
ನಿಖಿಲ ದೈತ್ಯದಲ್ಲಣನಿಗೆ ಲಾಲಿ
ರುಕುಮಿಣೀಶ ಸುರವಂದಿತಗೆ ಲಾಲಿ ||

ಬೆಟ್ಟಿಲಿ ಬೆಟ್ಟವ ಹೊತ್ತವಗೆ ಲಾಲಿ
ಜಟ್ಟಿಗಳನು ತರಿದೊಟ್ಟಿದವಗೆ ಲಾಲಿ
ಮೆಟ್ಟಿ ಭೂಮಿಯನಳೆದವಗೆ ಲಾಲಿ
ಕಟ್ಟುಗ್ರ ಶ್ರೀ ನರಸಿಂಹಗೆ ಲಾಲಿ ||

ಶರಧಿಗೆ ಸೇತು ಕಟ್ಟಿದವಗೆ ಲಾಲಿ
ಸುರರ ಸೆರೆಯ ಬಿಡಿಸಿದಾತಗೆ ಲಾಲಿ
ಕರಿ ಮೊರೆಯಿಡಲೊದಗಿದವಗೆ ಲಾಲಿ
ವರದ ಪುರಂದರವಿಠಲಗೆ ಲಾಲಿ ||
***

pallavi

lAli lAli rangayyage lAli lAli

caraNam 1

gOkuladali puttidavanige lli gOvugaLanu nere kAidavage lAli
kOvargaLa jagapitanige lAli gOvinda parama vinOdige lAli

caraNam 2

gaganava muriyalottavanige lAli nigamava tandittavanige lAli
hageyadoTTu kondavanige lAli jagavanudaradi dharisidavanige lAli

caraNam 3

nakhadali gangeya paDedavange lAli shakaTana muridiTTavanige lAli
nikhila daityadallaNannige lAli rukumiNIya suravanditage lAli

caraNam 4

beTTilibeTTava hottavage lAli jaTTigaLanu taridoTTidavage lAli
meTTi bhUmiyanadeLade lAli kaTTUgra shrI narasimahage lAli

caraNam 5

sharadhige sEtu kaTTidavage lAli surara sereya biDisidAtage lAli
kari moreyiDalodagidavage lAli varada purandara viTTalage lAli
***