ವಿಜಯದಾಸ
ನಿನ್ನ ಮಾತಿಗೆ ಮೆಚ್ಚುವನಾವಾವಾ
ಪರಾಕು ಎಲೊ ಎಚ್ಚರಿಕೆ ಪ
ಎಂತಾಗುವದೆಂದು ನುಡಿಯದಿರಿ
ಕಂತುವಿನ ಪಿತ ನಿನಗೆ ನಮೊ ನಮೊ ಬಿನ್ನೈಪೆ
ಸಂತು ಧ್ರುವರಾಯನು ಸಂತತ ಇದಕೆ ಸಾಕ್ಷಿ 1
ಒಂದೆ ರೂಪದಲಿ ಪೂಜೆಯಗೊಂಬೆ ಎನಗೆ ಮ
ತ್ತೊಂದು ರೂಪಕೆ ಶಕ್ತಿ ಇಲ್ಲೆನ್ನದಿರು
ಸಂದೇಹ ಎನಗಿಲ್ಲ ಎಲ್ಲಿದ್ದರು ದೇವ
ನಂದನಂದನ ಇದಕೆ ರಾಯ ಬ್ರಾಹ್ಮಣ ಸಾಕ್ಷಿ 2
ಬದಿಯಲಿದ್ದರೆ ಇಷ್ಟೆ ಮುಂದೆ ಬರುವ ಆಪತ್ತು
ಒದಗಿ ಕಳೆವೋಪಾಯ ಕಡಿಮೆನ್ನದಿರೊ
ಮುದದಿಂದ ನಿನ್ನಂಘ್ರಿಗೆರಗುವೆನು ಗತಿಪ್ರದಾ
ಕದನದೊಳು ಬದುಕಿ ನರಧ್ವಜನೆ ಸಾಕ್ಷಿ3
ಆಪತ್ತು ಕಳೆವೆ ಬೇಡಿದ ಭೋಜನ ಕೊಡುವೆ
ಈ ಪರಾಕ್ರಮ ನಿನಗಲ್ಲೆನ್ನದಿರು
ಶ್ರೀಪತಿ ನಿನ್ನ ಲೀಲೆಗೆ ಬೆರಗಾಗುವೆನೊ
ತಾಪಸರ ಮಧ್ಯದಲಿ ದುರ್ವಾಸಮುನಿ ಸಾಕ್ಷಿ 4
ನಾನಾ ಭಕ್ತರು ಇನಿತು ಸಾಕ್ಷಿಯಾಗಿರಲಿಕ್ಕೆ
ಏನು ಸೋಜಿಗವೆಂಬೊ ಸೋಗು ಯಾಕೆ
ಸಿರಿ ವಿಜಯವಿಠ್ಠಲರೇಯಾ
ನಾನು ಬೇಡುವದೇನು ಸರ್ವಪ್ರೇರಕೆ ಪ್ರೀಯಾ5
***********
ನಿನ್ನ ಮಾತಿಗೆ ಮೆಚ್ಚುವನಾವಾವಾ
ಪರಾಕು ಎಲೊ ಎಚ್ಚರಿಕೆ ಪ
ಎಂತಾಗುವದೆಂದು ನುಡಿಯದಿರಿ
ಕಂತುವಿನ ಪಿತ ನಿನಗೆ ನಮೊ ನಮೊ ಬಿನ್ನೈಪೆ
ಸಂತು ಧ್ರುವರಾಯನು ಸಂತತ ಇದಕೆ ಸಾಕ್ಷಿ 1
ಒಂದೆ ರೂಪದಲಿ ಪೂಜೆಯಗೊಂಬೆ ಎನಗೆ ಮ
ತ್ತೊಂದು ರೂಪಕೆ ಶಕ್ತಿ ಇಲ್ಲೆನ್ನದಿರು
ಸಂದೇಹ ಎನಗಿಲ್ಲ ಎಲ್ಲಿದ್ದರು ದೇವ
ನಂದನಂದನ ಇದಕೆ ರಾಯ ಬ್ರಾಹ್ಮಣ ಸಾಕ್ಷಿ 2
ಬದಿಯಲಿದ್ದರೆ ಇಷ್ಟೆ ಮುಂದೆ ಬರುವ ಆಪತ್ತು
ಒದಗಿ ಕಳೆವೋಪಾಯ ಕಡಿಮೆನ್ನದಿರೊ
ಮುದದಿಂದ ನಿನ್ನಂಘ್ರಿಗೆರಗುವೆನು ಗತಿಪ್ರದಾ
ಕದನದೊಳು ಬದುಕಿ ನರಧ್ವಜನೆ ಸಾಕ್ಷಿ3
ಆಪತ್ತು ಕಳೆವೆ ಬೇಡಿದ ಭೋಜನ ಕೊಡುವೆ
ಈ ಪರಾಕ್ರಮ ನಿನಗಲ್ಲೆನ್ನದಿರು
ಶ್ರೀಪತಿ ನಿನ್ನ ಲೀಲೆಗೆ ಬೆರಗಾಗುವೆನೊ
ತಾಪಸರ ಮಧ್ಯದಲಿ ದುರ್ವಾಸಮುನಿ ಸಾಕ್ಷಿ 4
ನಾನಾ ಭಕ್ತರು ಇನಿತು ಸಾಕ್ಷಿಯಾಗಿರಲಿಕ್ಕೆ
ಏನು ಸೋಜಿಗವೆಂಬೊ ಸೋಗು ಯಾಕೆ
ಸಿರಿ ವಿಜಯವಿಠ್ಠಲರೇಯಾ
ನಾನು ಬೇಡುವದೇನು ಸರ್ವಪ್ರೇರಕೆ ಪ್ರೀಯಾ5
***********