..
kruti by shreesha keshava vittala dasaru (subbanna dasa)
ಬಾರಯ್ಯ ಬಾರೋ ಮಾರುತಿ ಪ
ಅಕ್ಷಯಕುವರನ | ಕುಕ್ಷಿಯನೋಡಲು |
ಪಕ್ಷಿವಾಹನರಾಮ | ಈಕ್ಷಣ ಕರೆವ ಬಾ 1
ದುರುಳ ದುಶ್ಶಾಸನನ | ಉದರವ ಭಂಗಿಸೆ |
ತರಳೆದ್ರೌಪತಿ ದೇವಿ | ಕರೆದಳೊ ಬೇಗ 2
ಮಧ್ವಮುನಿಯೆ ನಿನ್ನ | ಶುದ್ಧತತ್ವದಿ ನಮ್ಮ |
ಉದ್ಧರಿಸಲು | ಅನಿರುದ್ಧನು ಕರೆವ ಬಾ 3
ಜಗದಿ ಭ್ರಾಂತೇಶನೆ | ಮೃಗಯಾಪುರದೊಳು |
ಮಿಗಿಲು ರಥವನೇರಿ | ಸೊಗಸಿಲಿ ಬೇಗ ಬಾ 4
ಶ್ರೀಶಕೇಶವದೂತ | ಭೂಸುರವಿನುತ |
ದಾಸರ ಸಲಹಲಿನ್ | ಈ ಸಮಯದಿ ಬೇಗ5
***