by kanakadasaru
ಪಕ್ಕಿಯ ಕುರುಹು ಬಲ್ಲರು ಹೇಳಿರಿ ಪಕ್ಕಿಯ ಕುರುಹು ಬಲ್ಲರು ಹೇಳಿರಿ ||
ತನ್ನ ಮಕ್ಕಳಿಗೆ ವೈರಿ ಮೂಜಗದೊಳಗೆಲ್ಲ || ಪ ||
ಬಣ್ಣಬಣ್ಣದ ಪಕ್ಷಿ ಅದಕೆ ವೆಜ್ಜಗಳುಂಟು ಕಣ್ಣು ಮುಚ್ಚಲಿಲ್ಲ ತೆರೆಯಲಿಲ್ಲ ಹುಣ್ಣಿಮೆ ಮುಂದಿನ ಬೆಳಗಲಿ ಬಾಹೋದು ತಣ್ಣನೆ ಹೊತ್ತಲಿ ತವಕಗೊಂಬುವುದು || 1 ||
sorry incomplete
ಯಾವ ಹಕ್ಕಿ ಇದು ಎಂದು ಯೋಚಿಸಿ ತಿಣುಕುವಂತೆ ಮಾಡುವ ಕನಕದಾಸರ ಈ ಮತ್ತೊಂದು ಮುಂಡಿಗೆ ನೋಡಿ:
ಪಕ್ಕಿಯ ಕುರುಹು ಬಲ್ಲರು ಹೇಳಿರಿ ಪಕ್ಕಿಯ ಕುರುಹು ಬಲ್ಲರು ಹೇಳಿರಿ || ತನ್ನ ಮಕ್ಕಳಿಗೆ ವೈರಿ ಮೂಜಗದೊಳಗೆಲ್ಲ || ಪ || ಬಣ್ಣಬಣ್ಣದ ಪಕ್ಷಿ ಅದಕೆ ವೆಜ್ಜಗಳುಂಟು ಕಣ್ಣು ಮುಚ್ಚಲಿಲ್ಲ ತೆರೆಯಲಿಲ್ಲ ಹುಣ್ಣಿಮೆ ಮುಂದಿನ ಬೆಳಗಲಿ ಬಾಹೋದು ತಣ್ಣನೆ ಹೊತ್ತಲಿ ತವಕಗೊಂಬುವುದು || 1 ||
ಪಕ್ಕಿಯ ಕುರುಹು…………… ಇದು ಓಂಕಾರ ಸ್ವರೂಪವೆಂಬ ಜ್ಞಾನದ ಪಕ್ಷಿ. ಆದರೆ ಪ್ರಪಂಚದ ಜನರು ಭಗವಂತನ ಜ್ಞಾನದ ಬಗ್ಗೆ ಆಸಕ್ತಿ ಇಲ್ಲದೆ ಲೌಕಿಕ ಸುಖವನ್ನು ಪಡೆಯುವುದರಲ್ಲೇ ಮಗ್ನರಾಗಿರುವುದರಿಂದ ತನ್ನ ಮಕ್ಕಳಿಗೇ ಹಿತವೆನಿಸದೆ ದೂರವಾದ ಜ್ಞಾನ ಅವರಿಗೆ ವೈರಿಯ ಸ್ವರೂಪ ಬಣ್ಣ ಬಣ್ಣದ ಪಕ್ಷಿ ಅದಕೆ ವೆಜ್ಜಗಳುಂಟು………ಜ್ಞಾನವು ಅಪರಂಪಾರ.
ಅದರ ಹರಹು ಬಹಳ ವಿಸ್ತಾರವಾಗಿ ವೈವಿಧ್ಯಮಯವಾದ ಶಾಖೋಪಶಾಖೆಗಳಲ್ಲಿ ಹರಡಿರುವುದರಿಂದ ಅದು ಬಣ್ಣಬಣ್ಣದ ಪಕ್ಷಿ. ಜ್ಞಾನೋಪಾಸನೆ, ಧ್ಯಾನೋಪಾಸನೆ ಮಾಡುವ ಸಾಧಕ ಅರ್ಧನಿಮೀಲಿತ ನೇತ್ರನಾಗಿ ಧ್ಯಾನಸ್ಥನಾಗಿರುವುದರಿಂದ ಅವನ ಕಣ್ಣು ಮುಚ್ಚಿದಂತೆಯೂ ಅಲ್ಲ ತೆರೆದುಕೊಂಡಿರುವಂತೆಯೂ ಅಲ್ಲ. ಇನ್ನು ಹುಣ್ಣಿಮೆಯನ್ನು ವೃದ್ಧಾಪ್ಯಕ್ಕೆ ಸಂವಾದಿಯಾಗಿ ಬಳಸುವ ಕನಕದಾಸರು, ತಣ್ಣನೆ ಹೊತ್ತಲ್ಲಿ ಅಂದರೆ ದೇಹ ಪ್ರಾಣವಿಹೀನವಾಗಿ ತಣ್ಣಗಾಗುವ ಕಾಲ ಹತ್ತಿರವಾದಂತೆ ಮನುಷ್ಯನಿಗೆ ತಾನು ಇಷ್ಟು ಕಾಲ ಜ್ಞಾನಾರ್ಜನೆ ಮಾಡಲಿಲ್ಲ, ಬದುಕು ವ್ಯರ್ಥವಾಯಿತು ಇನ್ನೇನು ಗತಿ ಎಂಬ ಕಳವಳ, ಭೀತಿ, ತವಕ ಉಂಟಾಗುವುದನ್ನು ಈ ಸಾಲುಗಳಲ್ಲಿ ಬಿಂಬಿಸುತ್ತಾರೆ.
- ರತ್ನಾ ಮೂರ್ತಿ
***