Showing posts with label ಬಂದೆನಿಲ್ಲಿಗೆ ಸಂದರುಶನಕ್ಕೆ ಬಂದೆನಿಲ್ಲಿಗೆನ್ನ ಮನದಿ bheemesha krishna. Show all posts
Showing posts with label ಬಂದೆನಿಲ್ಲಿಗೆ ಸಂದರುಶನಕ್ಕೆ ಬಂದೆನಿಲ್ಲಿಗೆನ್ನ ಮನದಿ bheemesha krishna. Show all posts

Wednesday 1 September 2021

ಬಂದೆನಿಲ್ಲಿಗೆ ಸಂದರುಶನಕ್ಕೆ ಬಂದೆನಿಲ್ಲಿಗೆನ್ನ ಮನದಿ ankita bheemesha krishna

 ..

ಬಂದೆನಿಲ್ಲಿಗೆ ಸಂದರುಶನಕ್ಕೆ ಬಂದೆನಿಲ್ಲಿಗೆನ್ನ ಮನದಿ

ಬಂದು ನಿಲ್ಲೆಂದು ನಿನ್ನ ವಂದಿಸ್ವರವ ಬೇಡುವೆ ನಾ

ನಂದನ ಸುಂದರ ಕೃಷ್ಣ ಬಂದೆನಿಲ್ಲಿಗೆ ಪ


ಪಾಲಶರಧಿ ಆಲದೆಲೆಯಲ್ಯೋಗನಿದ್ರೆ ಮಾಡಿ ನಿನ್ನ

ನಾಭಿಕಮಲನಾಳದಿಂದ ಆಗ ಅಜನ ಪಡೆದ ಹರಿಯೆ 1


ಸಾಗರವ ಬಿಟ್ಟು ನಾಗಶಯನ ಶೂರಸುತನಲ್ಲುದಿಸಿ

ಯೋಗಿಗಳ ಹೃದಯಕಮಲ ಆಲಯವ ಮಾಡಿದ್ದ ದೊರೆಯೆ2


ಕಂದನಾಗಿ ಬಂದು ಕಾಳಿಂದಿ ದಾಟಿ ನಂದಗೋಕುಲ

ವೃಂದಾವನದಿ ಗೋವುಕಾಯ್ದ ಇಂದಿರೇಶ ಅಜನಪಿತನೆ 3


ಅಷ್ಟಮಠದ ಯತಿಗಳಿಂದ ಮುಟ್ಟಿಪೂಜೆಗೊಂಬುವಂಥ

ಶ್ರೇಷ್ಠರೊಳಗೆ ಶ್ರೇಷ್ಠ ನಿನ್ನುತ್ಕøಷ್ಟಮಹಿಮೆ ನೋಡಲೀಗ4


ಕುಜನಜನರ ತುಳಿವೊ ಕಾಲಕಡಗ ಪೆಂಡೆ ಗೆಜ್ಜೆ ಸರಪಳಿ

ಧ್ವಜ ವಜ್ರಾಂಕುಶ ರೇಖವುಳ್ಳ ಪದುಮಪಾದ ನೋಡಲೀಗ5


ದೊಡ್ಡ ಮುತ್ತು ವಜ್ರದ್ಹರಳಿನಡ್ಡಿಕೆ ಉಡಿದಾರ ಹೊಳೆಯೆ

ಒಡ್ಯಾಣವನೆಯಿಟ್ಟ ಜಂಘÉ ಜಾನುದ್ವಯವ ನೋಡಲೀಗ6


ಉದರದಲ್ಲೀರೇಳುಲೋಕ ಅಡಗಿಸಿದನಂತಶಯನ

ಪದುಮ ಪೊಕ್ಕಳಿಂದ ಬ್ರಹ್ಮನ ಪಡೆದ ಪರಮಾತ್ಮನ್ನ ನೋಡ7


ವಂಕಿ ಬಾಹುಪುರಿಗಳಿಂದ ಕಂಕಣ ಭೂಷಣಗಳೊಪ್ಪೆ

ಶಂಖ ಚಕÀ್ರಪಿಡಿದ ಅಕಳಂಕ ಮಹಿಮನ ಕರವ ನೋಡ8


ನೀಲವರಣ ನಿನ್ನ ಬೆರಳು ಸಾಲು ಮಾಣಿಕ್ಯ ಮುದ್ರಿಕಿಂದ್ಹೊಳೆಯೆ

ಲೀಲೆಯಿಂದ ಗಿರಿಯೆತ್ತಿದ ಗೋಪಾಲಕೃಷ್ಣ ನಿನ್ನ ನೋಡ 9


ಹಾರ ಪದಕ ವೈಜಯಂತಿ ತೋರ ಮುತ್ತಿನೆಳೆÀಗಳ್ಹೊಳೆವೋ

ಶ್ರೀದೇವೇರಿಗಾಶ್ರಯವಾಗಿದ್ದಿ ್ವಶಾಲ ವಕ್ಷಸ್ಥಳವ ನೋಡ10


ಪಚ್ಚೆಪದಕ ಪಾರಿಜಾತ ಅಚ್ಚ ಮಲ್ಲಿಗೆ ತುಳಸಿಮಾಲೆ ಶ್ರೀ-

ವತ್ಸ ಕೌಸ್ತುಭ ಶೃಂಗಾರ ಕೊರಳ ಸಿರಿಯರಸು ನಿನ್ನ ನೋಡ11


ಮಧ್ವರಾಯರು ಕೈಯ ಬೀಸೆ ಎದ್ದು ಬಂದು ಹಡಗದಿಂದಿ

ಲ್ಲಿದ್ದಾನುಡುಪಿಕ್ಷೇತ್ರದಿಯೆಂದು ಮುದ್ದುಕೃಷ್ಣನ ಮುಖವ ನೋಡ12


ಕ್ರೂರಕಂಸನ(ಅ)ಪ್ಪಳಿಸಿ ದ್ವಾರಾವತಿಯಲ್ಲಿದ್ದ ಅಷ್ಟಭಾರ್ಯೇರಿಂದ್ವಿ-

ಹಾರ ಮಾಡಿದ್ವಾರಿಜಾಕ್ಷನ್ವದನ ನೋಡ 13


ಚಂದ್ರನಂತೆ ಹೊಳೆವೊ ಮುಖದಿ ದುಂಡು ಮುತ್ತಿನ ಮೂಗುತಿನಿಟ್ಟು

ಕುಂದಣದ್ವಜ್ರ ಬಿಗಿದ ಕರ್ಣಕುಂಡಲವನ್ನು ನೋಡಲೀಗ14


ಕರ್ಪೂರ ಕೇಸರಿ ಗಂಧ ಕಸ್ತೂರಿಯ ನಾಮ ತಿಲಕ

ಒಪ್ಪೋವಜ್ರದರಳೆಲೆ ದೇವಕೀಸುತನ (ನೋಡ) 15


ಬಾಲಭಾಸ್ಕರ ಕೋಟಿಲಾವಣ್ಯರೂಪಗೆಲುವ ಕಾಂತಿ

ಸಾಲುದೀವಿಗೆ ಸೊಬಗು ಕಮಲದಳಾಯತಾಕ್ಷ ಹರಿಯ ನೋಡ16


ಕೆಂಪುಹರಳು ಝಗ ಝಗಿಸುವೊ ಪಂಚರತ್ನದ ಕಿರೀಟ

ಚಂಚಲಾಕ್ಷ ಹರಿಯ ಶಿರದಿ ಮುಂಚೆ ನೋಡಿ ಮುಗಿವೆ ಕೈಯ17


ಅಸುರರ್ವಂಚಿಸಮೃತ ಬೀರಿ ಪಶುವಾಹನಗೆ ಮೋಹ ತೋರಿ

ಮೋಸದಿಂದ ಭಸ್ಮಾಸುರನ ನಾಶಮಾಡಿದ ನಾರಿ ನೋಡ18


ಲವಣಶರಧಿತೀರ ಮಧ್ವ ಸರೋವರದಲಿ ಶುದ್ಧಸ್ನಾನ

ಪರಮ ಮಂತ್ರ ಜಪಿಸೋ ನಿನ್ನ ಶರಣು ಸುಜನಜನರ ನೋಡ19


ಉತ್ತಮ ವೈಕುಂಠ ಬಿಟ್ಟೀ ಉಡುಪಿಯಲ್ಲಿ ವಾಸವಾಗಿ

ಭಕ್ತಜನರಭೀಷ್ಟಕೊಡುವೋ ನಿತ್ಯಮುಕ್ತ ನಿನ್ನ ನೋಡ20


ಶ್ರೀಶನೊಲಿಸಿದ್ಹನುಮ ಭಾರತೀಶನಾದ ಮಧ್ವರಾಯರ

ದಾಸರ ದಾಸತ್ವಕೊಡು ಭೀಮೇಶಕೃಷ್ಣಂದಯದಿ ನೋಡ 21

***