Showing posts with label ಮಂಗಳಂ ಶ್ರೀಶ್ರೀನಿವಾಸಗೆ ಶೃಂಗಾರರೂಪಗೆ ankita gopalakrishna vittala. Show all posts
Showing posts with label ಮಂಗಳಂ ಶ್ರೀಶ್ರೀನಿವಾಸಗೆ ಶೃಂಗಾರರೂಪಗೆ ankita gopalakrishna vittala. Show all posts

Monday, 2 August 2021

ಮಂಗಳಂ ಶ್ರೀಶ್ರೀನಿವಾಸಗೆ ಶೃಂಗಾರರೂಪಗೆ ankita gopalakrishna vittala

ಮಂಗಳಂ ಶ್ರೀ ಶ್ರೀನಿವಾಸಗೆ ಶೃಂಗಾರರೂಪಗೆ

ಮಂಗಳಂ ಶ್ರೀ ಶ್ರೀನಿವಾಸಗೆ ಪ.


ಪದ್ಮನಾಭ ಪದ್ಮ ಮುಖಗೆ

ಪದ್ಮಪಾದಗೆ

ಪದ್ಮವತಿಯ ವರಿಸಿದವಗೆ

ಪದ್ಮೋದ್ಭವನ ಸೇವೆ ಕೊಂಬಗೆ 1

ಆರ್ತ ಜನರ ಪೊರೆಯುವನಿಗೆ

ಪಾರ್ಥಸಾರಥಿಗೆ

ಕೀರ್ತಿಸುವರ ಕಾಯ್ದೆನೆಂದು

ಅರ್ಥಿಯಿಂದ ನಿಂತಿರುವಗೆ 2

ಯೋಗಿಗಳಿಗೆ ನಿಲುಕದವಗೆ

ಭೋಗಿಶಯನಗೆ

ಭಾಗವತರು ಸ್ತುತಿಸಲು ಅನು-

ರಾಗದಿಂದ ಲಾಲಿಪನಿಗೆ 3

ಭಕ್ತ ಜನರ ಕಾಯುವನಿಗೆ

ಮುಕ್ತಿದಾಯಕನಿಗೆ

ನಿತ್ಯಮುಕ್ತ ನಿಗಮವೇದ್ಯ

ಸತ್ಯಸಂಕಲ್ಪ ಹರಿಗೆ 4

ಭೂಪರೈವರ ಪೊರೆದವಗೆ

ತಾಪಹರನಿಗೆ

ಗೋಪಾಲಕೃಷ್ಣವಿಠ್ಠಲಗೆ

ಶ್ರೀಪತಿ ಶ್ರೀ ಶ್ರೀನಿವಾಸಗೆ 5

****