Showing posts with label ಆಡಿಸು ನೀ ಬಾರೋ ಹರಿಗೋಲ್ಹಾಕಿಸು ನೀ ಬಾರೊ purandara vittala. Show all posts
Showing posts with label ಆಡಿಸು ನೀ ಬಾರೋ ಹರಿಗೋಲ್ಹಾಕಿಸು ನೀ ಬಾರೊ purandara vittala. Show all posts

Wednesday, 4 December 2019

ಆಡಿಸು ನೀ ಬಾರೋ ಹರಿಗೋಲ್ಹಾಕಿಸು ನೀ ಬಾರೊ purandara vittala

ರಾಗ ಧನಶ್ರೀ. ಆದಿ ತಾಳ

ಆಡಿಸು ನೀ ಬಾರೋ ಹರಿಗೋಲ್ಹಾಕಿಸು ನೀ ಬಾರೊ ||ಪ||
ಮಿತ್ರೇರಾಡಿದ ಮಾತನು ಕೇಳಿ ಶ್ರೀ ಕೃಷ್ಣನು ತಾ ಬಂದ ||ಅ||

ಹುಟ್ಟನೆ ತೆಗೆದು ಹೆಗಲಲ್ಲಿಟ್ಟು ಥಟ್ಟನೆ ಕೈ ಕೊಟ್ಟ
ನೀರು ತುಂಬಿತು ನಾವೆಯೊಳಗೆ ಕೇಳೋ ಅಂಬಿಗನೆ
ತಡಮಾಡದಲೆ ದಡದಲಿ ಸೇರಿಸು ನಡೆ ನಡೆ ಅಂಬಿಗನೆ
ಏನು ಮಾಡಲಿ ಮಾನಿನಿರನ್ನೆ ಸೋತುವು ಕೈಯೆಲ್ಲ ||

ನೀರು ಒಳಗೆ ಸೆಳೆದು ಸೆಳೆದು ಸೋತಿತು ಮೈಯೆಲ್ಲ
ಇನ್ನಾದರು ನೀವು ನೀರೊಳಗೆ ಕರಗಳ ಹಾಕಿ ಸಾಗಿಸಿರೆ
ನಿಮ್ಮ ದೇವರಿಗೆಲ್ಲ ಹರಕೆ ಹರಸಿ ಬೇಡಿ ಕೊಳ್ಳಿರೆ
ಒಡವೆ ವಸ್ತುವು ಬೇಡಿದ್ದು ಕೊಡುವೇವು ಹಿಡಿ ಹಿಡಿ ಅಂಬಿಗನೆ||

ನಗ ನಾಣ್ಯಗಳು ಯಾರಿಗೆ ಬೇಕೆ ನಗೆಯು ಬರುತದೆನಗೆ
ನಾರಿ ನೀವೆಲ್ಲರು ತೊಟ್ಟ ಕಂಚುಕ ಬಿಚ್ಚಿ ನೀರೊಳಗ್ಹಾಕಿರೆ
ಏತಕೆ ಬಂದೇವು ಈತನ ಸಂಗತಿ ಎಂದೆಂದಿಗು ಸಾಕು
ದಾಸಿಯರೆಲ್ಲರು ನಿಮ್ಮವರೆಂದೂ ಕೇಳೊ ಗುಣಸಿಂಧು||

ಬಾ ಬಾರೆನುತಲಿ ಬಣ್ಣಿಸಿ ನಿಮ್ಮನು ಕರೆದವರು ಯಾರೆ
ನಾರಿ ನಿಮ್ಮ ಪ್ರಾಣ ಉಳಿಯ ಬೇಕಾದರೆ ಸೀರೆ ಬಿಚ್ಚಿ ತಾರೆ
ಕೊಟ್ಟರು ಕೈಯಲ್ಲಿ ನಾಚುತ ಕಣ್ಣನು ಮುಚ್ಚಿಕೊಂಡರು ಬೇಗ ||

ಹೆಣ್ಣುಗಳೇ ನೀವು ಮುಚ್ಚಲಿಬೇಡಿ ಕಣ್ಣಗಳಾ ಕೇಳಿ
ಸಣ್ಣ ಕುಪ್ಪಸವಿದು ಚಿದ್ರಕೆ ಸಾಲದು ಕಣ್ಣು ಬಿಟ್ಟು ನೋಡಿರೆಂದ
ನಾರಿಯರೆಲ್ಲರು ನಾಚುತ ಶಿರಗಳ ಬಾಗಿ ಕುಳಿತರವರು
ಉದಧಿಶಯನ ಸಿರಿ ಪುರಂದರವಿಠಲ ವಸ್ತ್ರವ ಕೊಟ್ಟನು ಕರುಣದಲಿ ||
***

pallavi

Adisu nI bArO harigOl hAkisu nI bAro

anupallavi

mitrErODida mAtanu kELi shrI krSNanu tA banda

caraNam 1

huTTane tegedu hegalalliTTu dhaTTane kaikoTTu nIru tumbidu nAveyoLage kELO ambigane
taDa mADadale daDadali sErisu naDe naDe ambigane Enu mADali mAniniranne sOdavu kaiyalla

caraNam 2

nIru oLage seLedu seLedu sOtidu maiyella innAdaru nIvu nIroLage karagaLa hAki sAgisire
nimma dEvarigella harake harasi bEDi koLLire oDave vastuvu bEDiddu koDuvEvu hiDi hiDi ambigane

caraNam 3

naga nANyagaLu yArige bEke nageyu barutadenage nAri nIvellaru toTTa kancuka bicci nIroLaghAkire
Etage bandEvu Itana sangati endendigu sAku dAsiyarellaru nimmavarendU kELo guNasindhu

caraNam 4

bA bArenutalibaNNisi nimmanu karedavaru yAre nAri nimma prANa uLiya bEkAdare sIre bicci tAre
koTTaru kaiyalli nAcuta kaNNanu muccikoNDaru bEka 

caraNam 5

heNNugalE nIvu muccali bEDi saNNagaLA kELi saNNa kuppasavidu chatrake sAladu kaNNu biTTu nODirenda
nAriyarellaru nAcuta shiragaLa bAgi kuLitaravaru udadhi shayana siri purandara viTTala vastrava koTTanu karuNadali
***