ಸದ್ಗುರು ಭಕ್ತಿ ಲೇಸು ಲೇಸು ಸದ್ಭಕ್ತಿಗೊಂದು ಗುರುಕೃಪೆಯೆ ಲೇಸು ಪ
ಒಂದೆ ಸುಪಥ ಲೇಸು ಹೊಂದಿ ಬಾಳುವದು ಲೇಸು ಪಾದ ಕಾಂಬುವದೆ ಲೇಸು 1
ನಡೆ ನುಡಿ ಒಂದೆ ಲೇಸು ದೃಢಭಾವನೆಯು ಲೇಸು ಪಿಡಿಯುವನು ಸಂಧಾನಧ್ಯಾತ್ಮದ ಲೇಸು 2
ಗುರುದೈವೆಂಬುದೆ ಲೇಸು ಅರಿತು ಬೆರೆವುದು ಲೇಸು ಸರಕ್ಕನೆ ಸಾಧಿಸಿಕೊಂಬಾನುಭವ ಲೇಸು 3
ಒಳಮುಖನಾಗುವದೆ ಲೇಸು ತಿಳಿಯುವಾತನ ಮನ ಲೇಸು ಬೆಳಗಿನೊಳಿಹ್ಯ ಬೆಳಗು ಹೊಳೆವ ಲೇಸು 4
ತನ್ನ ತಾ ತಿಳಿವದೆ ಲೇಸು ಉನ್ಮನವಾಗುದೆ ಲೇಸು ಪಾದ ನಂಬುದೆ ಲೇಸು 5
ಅರ್ತರೆ ಗುರುವಾಕ್ಯ ಲೇಸು ಬೆರ್ತರೆ ಗುರುಪಾದ ಲೇಸು ನಿರ್ತದಿಂದಾಗುವ ಪೂರ್ಣ ಗುರ್ತವೆ ಲೇಸು 6
ಗುರುಶರಣ್ಹೋಗುದೇ ಲೇಸು ಕರುಣ ಪಡೆವದೆ ಲೇಸು ತರಳ ಮಹಿಪತಿಗಿದೆ ಸುಖವೆ ಲೇಸು 7
***