ಕಂದ ಮಾಡುವುದೇನು ಕಂಡಿರೆ ಗೋ-
ವಿಂದನ್ನ ದೂರ್ಹೇಳ ಬಂದಿರಾ ಪ
ಏನುಮಾಡಿದನೀಗ ನಮರಂಗ
ಬೇಡಿ ಬಯಸಿದ್ದಿರವನಂಗಸಂಗ
ಜೋಡೇನೆ ನಿಮಗೆ ಕೋಮಲಾಂಗ
ಮರನೇರಿ ಮಾಡಿದನೆ ಮಾನವು ಭಂಗ 1
ಅತ್ತೆ ಮಾವಂದಿರಂಜಿಕೆಯೇನೆ
ಕರ್ತೃಪತಿಯ ಪರ ನೀಯೆಂಬೋದನು ಕಾಣೆ
ಕೃಷ್ಣ ಕೊಳಲನೂದೊ ವನಕಿನ್ನು
ಕತ್ತಲೊಳಗೆ ಬರುವ ಬುದ್ಧಿ ತರವೇನೆ 2
ಪುರುಷ ಮಕ್ಕಳನ್ನೆಲ್ಲ ತೊರೆದಿರೆ ನಮ್ಮ
ಸರಸಿಜಾಕ್ಷನ ಹಿಂದೆ ತಿರುಗುವಿರÉ
ಸರಿಬಂದ ಕ್ರೀಡ್ಯವಗರುಹಿರೆ
ಅರಗಳಿಗೆ ಎನ್ನರಮನ್ಯಾಗಿರಗೊಡಿರೆ 3
ಕದ್ದುಬೆಣ್ಣೆಯ ಮೆಲ್ಲುವನೇನೆ
ಮುದ್ದು ಕೂಸಿಗೀಪರಿ ಅಂಬುವರೇನೆ
ಪದ್ಮಪಾದದ ಪರಮಾತ್ಮನೆ ಬಂ-
ದಿದ್ದಲ್ಲೆ ನಿಮಗೆ ದಯಮಾಡುವನೆ 4
ಮಾನವಿಲ್ಲದೆ ಮಾರನಯ್ಯನ ಕೂಡಿ ವೃಂದಾ-
ವನದೊಳಾಡುವುದೇನೆ
ದೂರಿಕೊಂಬುವುದೇನು ಕಾರಣ ಭೀ-
ಮೇಶ ಕೃಷ್ಣನು ನಿಮ್ಮನ್ಸಲಹುವನೆ 5
****