Wednesday, 1 December 2021

ಕಂದ ಮಾಡುವುದೇನು ಕಂಡಿರೆ ಗೋವಿಂದನ್ನ ankita bheemesha krishna KANDA MAADUVUDENU KANDIRE GOVINDANNA



ಕಂದ ಮಾಡುವುದೇನು ಕಂಡಿರೆ ಗೋ-

ವಿಂದನ್ನ ದೂರ್ಹೇಳ ಬಂದಿರಾ ಪ


ಏನುಮಾಡಿದನೀಗ ನಮರಂಗ

ಬೇಡಿ ಬಯಸಿದ್ದಿರವನಂಗಸಂಗ

ಜೋಡೇನೆ ನಿಮಗೆ ಕೋಮಲಾಂಗ

ಮರನೇರಿ ಮಾಡಿದನೆ ಮಾನವು ಭಂಗ 1


ಅತ್ತೆ ಮಾವಂದಿರಂಜಿಕೆಯೇನೆ

ಕರ್ತೃಪತಿಯ ಪರ ನೀಯೆಂಬೋದನು ಕಾಣೆ

ಕೃಷ್ಣ ಕೊಳಲನೂದೊ ವನಕಿನ್ನು

ಕತ್ತಲೊಳಗೆ ಬರುವ ಬುದ್ಧಿ ತರವೇನೆ 2


ಪುರುಷ ಮಕ್ಕಳನ್ನೆಲ್ಲ ತೊರೆದಿರೆ ನಮ್ಮ

ಸರಸಿಜಾಕ್ಷನ ಹಿಂದೆ ತಿರುಗುವಿರÉ

ಸರಿಬಂದ ಕ್ರೀಡ್ಯವಗರುಹಿರೆ

ಅರಗಳಿಗೆ ಎನ್ನರಮನ್ಯಾಗಿರಗೊಡಿರೆ 3


ಕದ್ದುಬೆಣ್ಣೆಯ ಮೆಲ್ಲುವನೇನೆ

ಮುದ್ದು ಕೂಸಿಗೀಪರಿ ಅಂಬುವರೇನೆ

ಪದ್ಮಪಾದದ ಪರಮಾತ್ಮನೆ ಬಂ-

ದಿದ್ದಲ್ಲೆ ನಿಮಗೆ ದಯಮಾಡುವನೆ 4


ಮಾನವಿಲ್ಲದೆ ಮಾರನಯ್ಯನ ಕೂಡಿ ವೃಂದಾ-

ವನದೊಳಾಡುವುದೇನೆ

ದೂರಿಕೊಂಬುವುದೇನು ಕಾರಣ ಭೀ-

ಮೇಶ ಕೃಷ್ಣನು ನಿಮ್ಮನ್ಸಲಹುವನೆ 5

****


No comments:

Post a Comment