ಬಾ ಬಾ ಬಾ ಮೆಲ್ಲಡಿ ಇಡುತಲಿ ಕರಿಗಿರಿ ನರಹರಿ ಪ.
ಪದ್ಮಸಂಭವ ಪಿತ ಪದ್ಮನಾಭ ಹೃ
ತ್ಪದ್ಮದಿ ನೆಲಸುತ ಪದ್ಮಿನಿಯೊಡನೇ 1
ದಾಸರ ಮೇಳವ ಶ್ರೀಶನೆ ಕೇಳುತ
ವಾಸುದೇವ ನಮ್ಮ ಆಶೆ ಪೂರೈಸಲು 2
ರಂಗ ಉತ್ತುಂಗ ಕಾಳಿಂಗಮರ್ದನ ಯದು
ಪುಂಗವ ಶ್ರೀ ಭೂ ಸಂಗದಿ ರಥದಲಿ 3
ಶುದ್ಧ ಸಾತ್ವಕ ನಮ್ಮ ಉದ್ಧಾರಕ ತಂದೆ
ಮುದ್ದು ಮೋಹನರಾ ಮುದ್ದಿನ ದೇವನೆ 4
ಆಪದ್ಬಾಂಧರ ಶ್ರೀಪತಿ ಕರುಣದಿ
ಗೋಪಾಲಕೃಷ್ಣವಿಠ್ಠಲ ಸರ್ವೇಶ್ವರ5
****