Showing posts with label ಎಂದೆಂದೆನ್ನ ಮನದಿಂದ ಅಗಲದಿರೋನಂದ ನಂದನನೆ ಆನಂದ ಮೂರುತಿಯೆ shree krishna. Show all posts
Showing posts with label ಎಂದೆಂದೆನ್ನ ಮನದಿಂದ ಅಗಲದಿರೋನಂದ ನಂದನನೆ ಆನಂದ ಮೂರುತಿಯೆ shree krishna. Show all posts

Wednesday, 1 September 2021

ಎಂದೆಂದೆನ್ನ ಮನದಿಂದ ಅಗಲದಿರೋನಂದ ನಂದನನೆ ಆನಂದ ಮೂರುತಿಯೆ ankita shree krishna

 ..

ಎಂದೆಂದೆನ್ನ ಮನದಿಂದ ಅಗಲದಿರೋನಂದ ನಂದನನೆ ಆನಂದ ಮೂರುತಿಯೆ ಪ


ಬಹುಕಾಲ ನಿನ್ನ ಶ್ರವಣವೆಂಬ ಹೊನ್ನೋಲೆಯಬಹುಮಾನದಿಂದೆನ್ನ ಕಿವಿಯೊಳಿಟ್ಟುಮಹಿತ ಮಂಗಳಸೂತ್ರವೆಂಬೊ ದಾಸ್ಯವನ್ನು ಮಹದಾನಂದದಿ ಎನ್ನ ಕೊರಳೊಳ್ ಕಟ್ಟಿದೆಯಾಗಿ1


ಸುಲಲಿತ ಸೈರಣೆಯೆಂಬ ಭೂಷಣವಿತ್ತುಸಲಹಿದೆ ಬಹು ಪ್ರೀತಿ ಸಖಿಯೆಂದೆನ್ನಬೆಲೆಯಿಲ್ಲದ ಸುಜ್ಞಾನ ನಿಧಿಯನಿತ್ತುಜಲಜಾಕ್ಷ ಎನ್ನನು ಒಲಿದು ಆಳಿದೆಯಾಗಿ 2


ಎಲ್ಲಿ ನೀ ನಿಲಿಸಿದರೆನಗೇನು ಭಯವಿಲ್ಲಬಲ್ಲೆನೊ ವಿಶ್ವವ್ಯಾಪಕನೆಂಬುದಸಲ್ಲದೊ ಈ ಮುನಿಸೆನ್ನೊಳು ಸಿರಿಕೃಷ್ಣಒಲ್ಲದಿದ್ದರೆ ನಿನ್ನ ಸೆರಗಪಿಡಿದೆಳೆವೆ 3

***