ಸ್ವಾಮಿ ನೀನಹುದೋ ಶ್ರೀಗುರು ಸಾರ್ವಭೌಮ ನೇಮದಿಂದಲಿ ಹೊರೆವ ದಯಗುಣನಿಸ್ಸೀಮ ಪ
ಜಗತ್ರಯಕ ಜೀವಭಗತ ಜನಕಾವ ಸುಗಮ ಸುಪಥವೀವ ಸುಗುಣ ಶ್ರೀದೇವ 1
ದಾತ ದೀನದಯಾಳು ನೀನಹುದು ಶ್ರೀನಾಥ2
ನಿಜದಾಸರ ಪಕ್ಷ ಸುಜನರ ಸಂರಕ್ಷ ಗಜವರ ಸಮೋಕ್ಷ ಭಜಕರಿಗೆ ಸುಭಿಕ್ಷ 3
ತೇಜೋಮಯ ಸಾಂದ್ರ ನಿಜಸುಖ ಸಮುದ್ರ ರಾಜಾಧಿರಾಜ ಮಹಾ ರಾಜರಾಜೇಂದ್ರ 4
ಶರಣಜನಪಾಲ ಸಿರಿಯ ಸುಖಲೋಲ ತರಳ ಮಹಿಪತಿ ಸ್ವಾಮಿ ನೀನಹುದೊ ಕೃಪಾಲ 5
***