Showing posts with label ಗುರುರಾಘವೇಂದ್ರರ ಚರಣವ ಸ್ಮರಿಸಿರೊ lakumikanta. Show all posts
Showing posts with label ಗುರುರಾಘವೇಂದ್ರರ ಚರಣವ ಸ್ಮರಿಸಿರೊ lakumikanta. Show all posts

Monday 6 September 2021

ಗುರುರಾಘವೇಂದ್ರರ ಚರಣವ ಸ್ಮರಿಸಿರೊ ankita lakumikanta

 ankita ಶ್ರೀಕಾಂತ / ಲಕುಮೀಕಾಂತ 

ರಾಗ: ಬೇಹಾಗ್ ತಾಳ: ಆದಿ


ಗುರುರಾಘವೇಂದ್ರರ ಚರಣವ ಸ್ಮರಿಸಿರೊ


ಗುರುರಾಘವೇಂದ್ರರ ಚರಣವ ಸ್ಮರಿಸಲು

ದುರಿತ ರಾಶಿಗಳೆಲ್ಲ ಕರಗಿ ಪೋಗುವುವು ಅ.ಪ.


ಮಧ್ವ ಮತಾಬ್ಧಿಯೊಳುದ್ಭವಿಸಿದಂಥ

ಮಧ್ವ ಮತಾಬ್ಧಿಯೊಳುದ್ಭವಿಸಿದಂಥ

ಶುದ್ಧ ಪೂರ್ಣಿಮ ಚಂದ್ರ ಸದ್ಗುಣ ಸಾಂದ್ರ 1

ಸುಧೀಂದ್ರ ಯತಿ ಕರ ಪದುಮ ಸಮುದ್ಭವ

ಸುಧೀಂದ್ರ ಯತಿ ಕರ ಪದುಮ ಸಮುದ್ಭವ

ಸದಯ ಸದಾರ್ಚಿತ ಪದನುತ ಖ್ಯಾತ 2

ಬಂದಂಥ ಭಕುತರ ವೃಂದವ ಪೊರೆಯಲು1 

ಬಂದಂಥ ಭಕುತರ ವೃಂದವ ಪೊರೆಯಲು1 

ಕುಂದದೆ ವರಮಂತ್ರ ಮಂದಿರದೆಸೆವ 3

ನರಹರಿ ಮುರವೈರಿ ರಘುವರ ವ್ಯಾಸರ 

ನರಹರಿ ಮುರವೈರಿ ರಘುವರ ವ್ಯಾಸರ 

ನಿರುತದಿ ಭಜಿಸುವ ವರಗಳ ಕೊಡುವ  4

ಸಕಲಾಂತರ್ಯಾಮಿಯು ಲಕುಮಿಕಾಂತನೆಂದು

ಸಕಲಾಂತರ್ಯಾಮಿಯು ಲಕುಮಿಕಾಂತನೆಂದು

ಪ್ರಕಟಿಸಿ ಮೆರೆದರ್ಭಕನಂಶಜರೆಂದು 5

***

1 ಚೆಂದದಿ ಪೊರೆಯುವ - ಪಾಠ