Showing posts with label ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ ತನುವನಾಗಿದ್ದವಗೆಲ್ಲಿಹುದು ಜ್ಞಾನ mahipati. Show all posts
Showing posts with label ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ ತನುವನಾಗಿದ್ದವಗೆಲ್ಲಿಹುದು ಜ್ಞಾನ mahipati. Show all posts

Wednesday, 1 September 2021

ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ ತನುವನಾಗಿದ್ದವಗೆಲ್ಲಿಹುದು ಜ್ಞಾನ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ ತನುವನಾಗಿದ್ದವಗೆಲ್ಲಿಹುದು ಜ್ಞಾನ  ಪ 


ನಿಗಮ ಓದಿದರೇನು ಅಗಮ ಹೇಳಿದರೇನು ಬಗೆ ಬಗೆ ವೇಷ ಜಗದೊಳುದೋರಿದರೇನು 1 

ಮಠವು ಮಾಡಿದರೇನು ಅಡವಿ ಸಾರಿದರೇನು ಸಠೆ ಮಾಡಿ ಸಂಸಾರ ಹಟವಿಡಿದರೇನು 2 

ನಿಗದಿ ಹಾಕಿದರೇನು ಗಗನಕ್ಹಾರಿದರೇನು ಮಿಗಿಲಾಗಿದೋರಿ ಬಗವಿಯ ಪೊದ್ದರೇನು 3 

ಗುಹ್ಯ ಸೇರಿದರೇನು ಬಾಹ್ಯ ಮೆರೆದರೇನು ದೇಹ ದಂಡಿಸಿ ಹರವ ತೊರೆದರೇನು 4 

ಮನಕೆ ಮೀರಿಹ್ಯ ಸ್ಥಾನ ಘನಸುಖದಧಿಷ್ಠಾನ ದೀನಮಹಿಪತಿ ನೀ ಸಾಧಿಸೊ ಗುರುಜ್ಞಾನ 5

****