Showing posts with label ಯಥಾ ದೇವೋ ತಥಾಗುರೌ ಶ್ರುತಿ ಹೇಳಿದ mahipati. Show all posts
Showing posts with label ಯಥಾ ದೇವೋ ತಥಾಗುರೌ ಶ್ರುತಿ ಹೇಳಿದ mahipati. Show all posts

Thursday, 12 December 2019

ಯಥಾ ದೇವೋ ತಥಾಗುರೌ ಶ್ರುತಿ ಹೇಳಿದ ankita mahipati

ಭೈರವಿ ರಾಗ ದೀಪಚಂದಿ ತಾಳ

ಯಥಾದೇವೋ ತಥಾಗುರೌ
ಶ್ರುತಿ ಹೇಳಿದ ಸನ್ಮತದಲಿರೋ ||ಧ್ರುವ||

ವೃಥಾ ಅಭಾವ ನೀ ಹಿಡುವರೆ
ಸ್ವತಃ ಸಿದ್ಧವ ತಾಂ ಬಿಡುವರೆ
ಸತ್ಸಂಗದಲಿ ನೋಡಿನ್ನಾರೆ
ಚಿತ್ಸುಖ ಹೊಳೆವುದು ಕಣ್ಣಾರೆ ||೧||

ಮುಗಿಲಿಗೆ ಮತ್ತೆ ಮುಗಿಲುಂಟೆ
ಹಗಲಿಗೆ ಮತ್ತು ಹಗಲಾಗುದುಂಟೆ
ಜಗ ಇಹುದಕೆ ಜಗಮುಂಟೆ
ಹೀಗಾದ ಮ್ಯಾಲೆ ವಸ್ತು ಎರಡುಂಟೆ ||೨||

ಅನುಭವಕಿದರಿಟ್ಟು ಬಾಹುದು
ಖೂನ ಹೇಳ್ಯಾವು ನೋಡು ವೇದ
ದೀನ ಮಹಿಪತಿಗಿದೆ ಬೋಧ
ಭಾನುಕೋಟಿ ತೇಜವೊಂದೇ ತಾನಾದ ||೩||
*********