Showing posts with label ವೇಣುಗೋಪಾಲವಿಠ್ಠಲರೇಯ ನಿನ್ನ ಪದರೇಣು ನಂಬಿದ vijaya vittala. Show all posts
Showing posts with label ವೇಣುಗೋಪಾಲವಿಠ್ಠಲರೇಯ ನಿನ್ನ ಪದರೇಣು ನಂಬಿದ vijaya vittala. Show all posts

Thursday, 17 October 2019

ವೇಣುಗೋಪಾಲವಿಠ್ಠಲರೇಯ ನಿನ್ನ ಪದರೇಣು ನಂಬಿದ ankita vijaya vittala

ವಿಜಯದಾಸ
ವೇಣು ಗೋಪಾಲವಿಠ್ಠಲರೇಯ ನಿನ್ನ ಪದ
ರೇಣು ನಂಬಿದ ಮಾನವ
ಏನು ಅರಿಯದಲಿಪ್ಪ ನೀನೊಲಿದು ಕರುಣದಲಿ
ಜ್ಞಾನ ಭಕುತಿಯ ಕೊಡುವುದು ಸ್ವಾಮಿ ಪ

ಪರದೈವ ನೀನೆಂದು ಮೂಢಮತಿಯಾದವನು |
ಪರಿಪೂರ್ಣವಾಗಿ ನಿರುತ |
ನೆರೆ ನಂಬಿದೆನು ನಾನಾ ಪ್ರಕಾರದಲಿ
ಸ್ಮರಣೆ ಮಾಡುತ ಮನದಲಿ |
ತರತಮ್ಯ ಭಾವದಲಿ ಮಾರ್ಗವನೆ ತೋರಿ ವಿ
ಸ್ತರ ಮಾಡು ಇವನ ಕೀರ್ತಿ
ಕರುಣಾಕರನೆ ನಿನ್ನ ಮೊರೆಹೊಕ್ಕ ಶರಣನ್ನ
ಕರಪಿಡಿದು ಪಾಲಿಸುವುದು ಸ್ವಾಮಿ1

ಲೌಕಿಕವೆಲ್ಲಿನಗೆ ವೈದಿಕವೆಂದೆನಿಸಿ |
ಸಾಕುವುದು ಸಾಕಾರನೆ
ನೂಕು ದುರಳದಿಂದ ಬಂದ ವಿಪತ್ತುಗಳ
ತಾಕಗೊಡದಂತೆ ವೇಗ
ಶುಭ |
ವಾಕು ನೇಮಿಪುದು ಸತತ
ನಾಕಜನ ಬಲವಾಗಿ ರಕ್ಷಿಸಲಿ ಸುರತರುವೆ
ಶ್ರೀ ಕಾಂತ ನಿನ್ನಿಂದಲಿ ಸ್ವಾಮಿ 2

ಓರ್ವನ ಪೆಸರುಗೊಂಡು ಪೇಳಲೇತಕೆ ಇನ್ನು |
ಸರ್ವರನು ಈ ವಿಧದಲಿ |
ಊರ್ವಿಯೊಳಗೆ ಇಟ್ಟು ಉದ್ಧರಿಸಿ ಉರುಕಾಲ
ನಿವ್ರ್ಯಾಜದವನ ಮಾಡಿ
ಸರ್ವರಗೋಸುಗ ತುತಿಸುತಲಿ ಯೋಗ್ಯರಿಗೆ
ಸರ್ವದಾ ಕೃಪೆಮಾಡು ಎಂಬೆ
ಸಿರಿ ವಿಜಯವಿಠ್ಠಲ ನಿನ್ನ
ಶರ್ವ ತುತಿಸಿ ಕಾಣ ನಾನೊಬ್ಬ ಪೊಗಳುವನೆ 3
***********