Showing posts with label ದುಷ್ಟ ರಕ್ಕಸರನು ಜಯಿಸಿದ ಪರಮವಾಯುಸುತಗೆ ಮಂಗಳಂ hanumesha vittala. Show all posts
Showing posts with label ದುಷ್ಟ ರಕ್ಕಸರನು ಜಯಿಸಿದ ಪರಮವಾಯುಸುತಗೆ ಮಂಗಳಂ hanumesha vittala. Show all posts

Tuesday 1 June 2021

ದುಷ್ಟ ರಕ್ಕಸರನು ಜಯಿಸಿದ ಪರಮವಾಯುಸುತಗೆ ಮಂಗಳಂ ankita hanumesha vittala

 ದುಷ್ಟ ರಕ್ಕಸರನು ಜಯಿಸಿದ ಪರಮವಾಯುಸುತಗೆ ಮಂಗಳಂ

ಪ್ರಾಣೇಶಗೆ ಮಂಗಳಂ ಪ


ಬೆಟ್ಟ ಪುಚ್ಛದಿ ತಂದಿಟ್ಟು ಸಂಜೀವನ

ಕೊಟ್ಟ ಶ್ರೀ ರಾಮನ ಭಕ್ತನಿಗೆ ಮಂಗಳಂ 1


ಸಿಟ್ಟಿಲಿ ದುಶ್ಶಾಸನನ ಹೊಟ್ಟೆ ಬಿಗಿದು

ಇಷ್ಟ ಪೂರೈಸಿದ ಕೃಷ್ಣನ ದಾಸಗೆ ಮಂಗಳಂ 2


ಹನುಮೇಶ ವಿಠಲನ ಪ್ರೀತಿಪಾತ್ರನೆಂದೆನಿಸಿದ

ಮುನಿವರ ಗುರು ಮಧ್ವರಾಯಗೆ ಮಂಗಳಂ 3

****