Showing posts with label ಎಂಥ ರಾಸಿಯೊ ಶ್ರೀಕಾಂತನ ಮುಖಸೂನು bheemesha krishna. Show all posts
Showing posts with label ಎಂಥ ರಾಸಿಯೊ ಶ್ರೀಕಾಂತನ ಮುಖಸೂನು bheemesha krishna. Show all posts

Tuesday, 1 June 2021

ಎಂಥ ರಾಸಿಯೊ ಶ್ರೀಕಾಂತನ ಮುಖಸೂನು ankita bheemesha krishna

ಎಂಥ ರಾಸಿಯೊ ಶ್ರೀಕಾಂತನ ಮುಖಸೂನು

ನಿಂತು ಏರುವೋ ರಾಶಿನ್ಯಾವುದೊ ಇದನೆಲ್ಲರು ಪೇಳಿರಿ 1

ರಂಗ ಮೂರುತಿ ಸುತನ್ವೊೈರಿ ಏರಿಪೋ ಹೆಸ-

ರೆಂದುಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 2

ಹರಿಸುತನಟ್ಟುಳಿಯಿಂದ ಪುಟ್ಟುವುದೇನು

ಪರಮ ಗುಪ್ತದ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 3

ಇರುಳು ಹಗಲು ಮೈಯ್ಯ ತೊಳೆಯುತ ಮಣ್ಣಿನ

ಲ್ಲೊ ್ಹರಳುತಿಪ್ಪುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 4

ಒದ್ದು ಮಾತಂಗನ ಗದ್ರಿಸ್ತಮುರಿದ ಪ್ರ-

ಸಿದ್ಧನೆನಿಪ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 5

ಜೋಡು ವಂಶುದ್ಧಾರ ಮಾಡುವುದೀ ರತ್ನೆಂ-

ದಾಡಿಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 6

ಜಗದೊಳಗೆಲ್ಲ ಭಾರಕರ್ತನಾಗಿ

ಏರಿಸಿಳುಹೋ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 7

ಅಂಧಕಾರದಲಿದ್ದು ಬಂದ ಜನರ ಮುಟ್ಟಿ

ದುಂದೆಬ್ಬಿಸುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 8

ದೊರೆಸುತ ತಾ ಬಂದು ಸರುವ ಜನರ ಮುಂದೆ

ಮುರಿದುಬಿಷ್ಠುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 9

ಭರದಿ ಬಂದು ಕಾಲಕೆದರುತ ತನ್ನ ್ಹಲ್ಲು

ಮುರಿಸಿಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 10

ರುಂಡ ಮಾಲೆಗಳೆಲ್ಲ ಗುಂಡಿನಂಥ ದೇಹ-

ಕ್ಕ್ಹೊಂದೇರಿಳಿವೊ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 11

ಹತ್ತರೊಳಗೆ ಒಂಬತ್ತು ಬಿಟ್ಟ ಹೆಸ

ರಿಟ್ಟುಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 12

ಯೋಚನೆ ಮಾಡಿ ಆಲೋಚಿಸಿ ನೋಡರನೇಕ

ಮೂಢಜÁ್ಞನಿಗೆ ತಿಳಿವೊದೆ ಇದನೆಲ್ಲರು ಪೇಳಿರಿ 13

ಈಸು ರಾಶಿಗಳು ಭೀಮೇಶಕೃಷ್ಣನ ದಯ-

ದೀಕ್ಷಣದಲ್ಲೆ ತಿಳಿದು ಪೇಳಿ ಇದನೆಲ್ಲರು ಪೇಳಿರಿ 14

****