Showing posts with label ರೌದ್ರಿ ಭದ್ರಿ ಮಹಕ್ಷುದ್ರ ಛಿದ್ರಿ ಹಿ ಮಾದ್ರಿಯುದ್ಭವಿಗೆ ನಮೋ ನಮೋ ramadasa. Show all posts
Showing posts with label ರೌದ್ರಿ ಭದ್ರಿ ಮಹಕ್ಷುದ್ರ ಛಿದ್ರಿ ಹಿ ಮಾದ್ರಿಯುದ್ಭವಿಗೆ ನಮೋ ನಮೋ ramadasa. Show all posts

Sunday, 5 September 2021

ರೌದ್ರಿ ಭದ್ರಿ ಮಹಕ್ಷುದ್ರ ಛಿದ್ರಿ ಹಿ ಮಾದ್ರಿಯುದ್ಭವಿಗೆ ನಮೋ ನಮೋ ankita ramadasa

 ರಾಮದಾಸರು

ರೌದ್ರಿ ಭದ್ರಿ ಮಹಕ್ಷುದ್ರ ಛಿದ್ರಿ ಹಿ ಮಾದ್ರಿಯುದ್ಭವಿಗೆ ನಮೋ ನಮೋ ಪ 


ರುದ್ರರೂಪೆ ದಾರಿದ್ರ್ಯಮರ್ದನಿ ರುದ್ರನರ್ಧಾಂಗಿಗೆ ನಮೋ ನಮೋ ಅ.ಪ 


ನಿಗಮಾತೀತೆ ಮಹದಾಗಮನುತೆ ತ್ರೈ ಜಗದ ಮಾತೆಗೆ ನಮೋ ನಮೋ ಸುಗುಣಸಂತಜನರಘನಾಶಿನಿ ಸುಖ ಸ್ವರ್ಗಾಧಿಕಾರಿಗೆ ನಮೋ ನಮೋ 1 

ಮೃಡಮೃತ್ಯುಂಜನನೆಡದೊಡೆಯೊಳು ಕಡುಸಡಗರವಾಸಿಗೆ ನಮೋ ನಮೋ ದೃಢತರ ಭಕ್ತರ ದೃಢದ್ವಾಸಿನಿ ಜಗ ದೊಡೆಯ ಮೃಡಾಣಿಗೆ ನಮೋ ನಮೋ 2 

ಕಮಲೆ ಕಾತ್ಯಾಯಿನಿ ಉಮೆ ಶಿವೆ ಸಾವಿತ್ರಿ ಕಮಲನೇತ್ರೆಗೆ ನಮೋ ನಮೋ ಸುಮನ ಸೌಭಾಗ್ಯ ಶಮೆ ದಮೆ ದಯಾನ್ವಿತೆ ವಿಮಲ ಚರಿತ್ರೆಗೆ ನಮೋ ನಮೋ 3 

ಭಂಡದನುಜಕುಲ ರುಂಡ ಚೆಂಡಾಡಿದ ಪುಂಡ ಉದ್ದಂಡೆಗೆ ನಮೋ ನಮೋ ಖಂಡ ಕಿತ್ತು ಖಳರ್ಹಿಂಡು ಭೂತಕಿತ್ತ ಚಂಡಿ ಚಾಮುಂಡಿಗೆ ನಮೋ ನಮೋ 4 

ರಕ್ತಬೀಜರೆಂಬ ದೈತ್ಯರ ಮದ ಮುರಿ ದೊತ್ತಿದ ವೀರೆಗೆ ನಮೋ ನಮೋ ಮತ್ತೆ ಶುಂಭರ ಶಿರ ಮುತ್ತಿ ಕತ್ತಿರಿಸಿದ ಶಕ್ತಿ ಶಾಂಭವಿಗೆ ನಮೋ ನಮೋ 5 

ಓಂಕಾರರೂಪಿಣಿ ಹ್ರೀಂಕಾರಿ ಕಲ್ಯಾಣಿ ಶಂಕರಿ ಶರ್ವಾಣಿಗೆ ನಮೋ ನಮೋ ಮ ಹಂಕಾಳಿ ನತಸುಖಂಕರಿ ಪಾರ್ವತಿ ಶಂಕರನರಸಿಗೆ ನಮೋ ನಮೋ 6 

ಶೌರಿ ಔದರಿಯ ಶಾರದೆ ಶ್ರೀಕರಿ ಶೂರ ಪರಾಂಬೆಗೆ ನಮೋ ನಮೋ ಪಾರಾವಾರ ದಯೆಕಾರಿ ನಿರಾಮಯೆ ಧೀರ ಚಿದ್ರೂಪೆಗೆ ನಮೋ ನಮೋ 7 

ಉಗ್ರರೂಪಿ ಭವನಿಗ್ರಹ ದುಷ್ಟ ಸ ಮಗ್ರ ಹರಿಣಿಗೆ ನಮೋ ನಮೋ ಆಗ್ರಭಕ್ತರಿಷ್ಟ ಶೀಘ್ರ ಕೊಡುವ ಜೈ ದುರ್ಗಾದೇವಿಗೆ ನಮೋ ನಮೋ 8 

ಹೈಮಾವತಿಯೆ ನಿರ್ಮಾಯೆ ಮೂರುತಿ ಕೋಮಲ ಹೃದಯೆಗೆ ನಮೋ ನಮೋ ಭೀಮಪರಾಕ್ರಮಿ ರಾಮದಾಸಜನ ಪ್ರೇಮಪೂರ್ಣಿಗೆ ನಮೋ ನಮೋ 9

***