RAO COLLECTIONS SONGS refer remember refresh render DEVARANAMA
kruti by Srida Vittala Dasaru Karjagi Dasappa
ನೋಡು ನೋಡೆಂಥಾ ರಘುವೀರ ದೀನೋದ್ಧಾರ ಪ
ತನು ಮನ ಧನಗಳ ತನಗೊಪ್ಪಿಸದೆ
ನೆನೆವ ಮನುಜರಿಗೆ ದೂರಾದೂರಾ 1
ಸೇರಿದ ಸುಜನರ ದೂರುವ ದುರುಳರ
ಬೇರಿಗೆರೆವ ಬಿಸಿ ನೀರಾ ನೀರಾ 2
ಶ್ರೀದವಿಠಲ ನಿಜಪಾದಾಶ್ರಿತರಪ-
ರಾಧವ ಮನಸಿಗೆ ತಾರಾ ತಾರಾ 3
***