Showing posts with label ಕಲ್ಕಿಯಾಗಿ ತುರಗವನೇರಿ hayavadana ankita suladi ಸ್ತೋತ್ರ ಭಾಗ ಸುಳಾದಿ KALKIYAAGI TURAGAVANERI STOTRA BHAAGA SULADI. Show all posts
Showing posts with label ಕಲ್ಕಿಯಾಗಿ ತುರಗವನೇರಿ hayavadana ankita suladi ಸ್ತೋತ್ರ ಭಾಗ ಸುಳಾದಿ KALKIYAAGI TURAGAVANERI STOTRA BHAAGA SULADI. Show all posts

Sunday, 8 December 2019

ಕಲ್ಕಿಯಾಗಿ ತುರಗವನೇರಿ hayavadana ankita suladi ಸ್ತೋತ್ರ ಭಾಗ ಸುಳಾದಿ KALKIYAAGI TURAGAVANERI STOTRA BHAAGA SULADI

Audio by Mrs. Nandini Sripad

ಶ್ರೀ ವಾದಿರಾಜ ಗುರುಸಾರ್ವಭೌಮ ವಿರಚಿತ  ಸ್ತೋತ್ರ ಭಾಗ ಸುಳಾದಿ 

 ರಾಗ ಸಿಂಧುಭೈರವಿ 

 ಧ್ರುವತಾಳ 

ಕಲ್ಕಿಯಾಗಿ ತುರಗವನೇರಿ ಖಳರ ಕಟಕವ
ಪೊಕ್ಕು ಹಿಂಭಾಗದ ಮೂರ್ಖರ ಶಿಕ್ಷಿಪೆನೆಂದು
ಸೊಕ್ಕು ಮುರಿವದಕ್ಕೆ ಭೂಚಕ್ರಗಳು ವಕ್ರದಿಂದ
ಲೆಖ್ಖವಿಲ್ಲದೆ ಗಣವ ಲೆಕ್ಕಿಸದವನ ಜೀವ
ಐಕ್ಯವ ಪೇಳ್ದವನ್ನ ತಮಕ್ಕೆ ನೂಕಬೇಕೆಂದು
ಉಕ್ಕು ತಗ್ಗಿಸುವದಕ್ಕೆ ಚಿನ್ನಾದ್ಯೆರೊಡನೆ ಜಯವ
ಇಕ್ಕೆಲದಲ್ಲಿಟ್ಟುಕೊಂಡ ರಕ್ಕಸ 
ರಕ್ಕಸಾ ವೈರಿ ಲಕ್ಷುಮಿಯ 
ರಕ್ಷೆಯಾಗಿ ಪಚ್ಚೆಯದ ಕಠಾರಿಯ ಪಕ್ಕದಿ
ಸಿಕ್ಕಿಸಿದ ಪರಾಕ್ರಮ ಸಿರಿ ಹಯವದನ ॥ 1 ॥

 ಮಠ್ಯತಾಳ 

ಕಟ್ಟಿದ ಹೊನ್ನ ಕಠಾರಿಯ ನೋಡು
ಮೆಟ್ಟಿದ ರನ್ನಧ್ಹಾವಿಗೆ ನೋಡು
ತೊಟ್ಟಿಹ ಕನಕ ಕವಚವ ನೋಡು ಹತ್ತಿ -
ಲಿಟ್ಟಿಹ ಖರಾ ಚೂರಿಯ ಕಾಂತಿಯ ನೋಡು
ದುಷ್ಟರ ತರಿವಾ ತನ್ನಿಷ್ಟರ ಪೊರೆವ ಜಗ -
ಜಟ್ಟಿಯು ನಮ್ಮ ಧಿಟ್ಟ ಹಯವದನಾ ॥ 2 ॥

 ರೂಪಕತಾಳ 

ಹಂಸರ ನೊಯಿಸಿದ ಹಂಸಾಡಿಬಿಕರ
ಹಿಂಶೆಯ ಮಾಡುವನಿವ ವೈರಿ ಕೋಲಾಹಲ
ಅಂಶಿ ಅಂಶನ್ನ ಜರಾಸಂಧ ತರಿದ ಸೈನ್ಯ ವಿ -
ಧ್ವಂಸ ವಿನೋದಿ ಸುರ ನಿಃಶಂಕ
ಹಂಸವಾಹನ ಗುರು ಹಯವದನ ಖಳ -
ರಂಶ ಕುಠಾರಿ ಎಂಬೊ ಬಿರಿದು ಮೆರೆದಾ ॥ 3 ॥

 ಝಂಪೆತಾಳ 

ಆವನ್ನ ಪೊಟ್ಟೆ ಲೋಕಮಯನೆಂಬೊ
ಜೀವನ್ನ ಗುಟ್ಟು ಕೆಡಿಸಿತು ನೋಡಾ ಆ 
ಭವನ್ನಟ್ಟಿ ಬಂದ ಭಸ್ಮಾಸುರನ್ನ
ಜೀವವೆ ಕೊಂದಿತು ಇವನ ಮುದ್ದು ನೋಡಾ
ಆವನ್ನ ಬೆರಳುಗಳು ಮೃಷ್ಟಾನ್ನವನಿತ್ತು
ಆವನಂಘ್ರಿಯ ರೇಣು ಶಿಲಿಯನು ಬಾಲಿಯ ಮಾಡಿತು
ಆವನುದರುದ್ದ ದೊದರಗಳಾವ ಮುರಿದವು
ಆವನೆದೆ ಭಗದತ್ತನ್ನ ಆಯುಧವ ತಾಳಿತು
ಆವ ಸಿರಿ ಹಯವದನ ಶ್ರೀಕೃಷ್ಣನ್ನ ಪು -
ಟ್ಟವದನವೆ ಪೂಥಣಿಯ ಕೊಂದಿತು ॥ 4 ॥

 ತ್ರಿಪುಟತಾಳ 

ಒಂದು ಕರವು ಮಧುವ ಮರ್ದಿಸಿತು ಮ -
ತ್ತೊಂದು ಕರವು ಕೈಟಭನ್ನ 
ಚೆಂದದಿ ಪೆರ್ದೊಡೆಯಲ್ಲಿಟ್ಟು ಪುಡಿಪುಡಿ ಮಾಡಿ ಕೊಂದಿತು
ಒಂದು ಕರವು ಕಂಸನ್ನ ಕೇಶಿಕೊಂದು ಗಜವ ಕೆಡಹಿತು ಮ -
ತ್ತೊಂದು ಕರವು ಕಲ್ಪತರುವ ಕಿತ್ತಿ ಪುರಕೆ ತಂದಿತು
ಒಂದು ಪಾದ ಶಕಟನೆಂಬ ದೈತ್ಯನೊದೆಯಿತು ಮ -
ತ್ತೊಂದು ಪಾದ ತಾಳೆ ಮರಗಳ ಖಳರ ಸೊಕ್ಕು ಮುರುಹಿತು 
ಒಂದು ಪಾದ ವಾದಿರಾಜರ ಚೆಂದದಲ್ಲಿದ್ದು ಪದವಿಯ
ದೊಂದುಗ ನುಣಿಸುವ ಭೂತವೃಂದ ಶಕ್ತಿಯ ಕುಂದಿಸಿತು
ಒಂದೊಂದು ರೋಮಕೂಪ ಲೋಕಂಗಳು ಬೆಳಗಿಸಿಕೊಂಡಿತು
ಒಂದು ಕೂದಲು ಭೂಭಾರವನ್ನೆ ಕುಂದಿಸಿತು ಹಯವದನ ॥ 5 ॥

 ಅಟ್ಟತಾಳ 

ಅದಂತಿರಲು ಒಬ್ಬ ಈ ಬೆನ್ನು ಮಂದರವನೆತ್ತಿ
ತ್ರಿದಶರಿಗೆ ಸುಧೆಯನುಣಿಸೆ ದಣಿಸಿತು
ವಿಷಯ ಜೀವನ ಕೋಶ ಎನಿಪ ಬೊಮ್ಮಾಂಡ ಪೊತ್ತಾ
ಮುದದಿಂ ಉದಕದೊಳು ಧರಿಸಿತಾವನ ಬೆನ್ನು
ಮುದ್ದುಮಯ ನಮ್ಮ ಗುರು ಹಯವದನನಿಗೆ ಆ -
ಯುಧದ ಹಂಗುಂಟೇನೋ ವಿಚಾರಿಸಿ ನೋಡಿರೊ ॥ 6 ॥

 ಆದಿತಾಳ 

ಕುಂಜರ ಮೊರೆಯಿಡೆ ಬಂದೊದಗಿದನಿವ
ಕಂಜಾಕ್ಷಿ ಕರಿಯೆ ಅಕ್ಷಯಾಂಬರವ ನಿತ್ತವನಿವ
ಸಂಜೆಯ ತೋರಿಸಿ ಧನಂಜಯನ ಕಾಯ್ದವನಿವ
ಅಂಜಿದ ಪ್ರಹ್ಲಾದಗ ಅಭಯವನಿತ್ತವನಿವ
ನಂಜುಂಡನ ಗೆಲಿದ ಸಿರಿ ಹಯವದನ ಭಕ್ತವಜ್ರ -
ಪಂಜರನೆಂಬ ಬಿರಿದು ತಪ್ಪದೆ ನಂಬಿಕೊಳ್ಳಿರೊ ॥ 7 ॥

 ಏಕತಾಳ 

ಆದಿಕಾಲದಲಿ ಅಬ್ಜಭವನ ಪೆತ್ತವನಿವ
ಮೇದಿನಿಗಾಗಿ ಬಂದ ಖಳರ ಕೊಂದವನಿವ
ಕಾದಿಸಿ ಕೌರವರ ಕುಲವ ತರಿದವನಿವ
ಆಧಿವ್ಯಾಧಿಗಳ ಬಿಡಿಸಿ ಮುಕ್ತಿಯನೀವ
ದಾರಿಯ ತೋರಿದ ಸಿರಿ ಹಯವದನ ॥ 8 ॥

 ಜತೆ 

ಸಿರಿದೇವಿ ಅರಸ ಹಯವದನ ನೆನ ಬೇಕು ಬೇಕು
ಈ ದೇವನಲ್ಲದೆ ಇನ್ನೊಂದು ದೈವವೆ ಸಾಕು ಸಾಕು ॥
***********